ಬ್ರೇಕಿಂಗ್ ನ್ಯೂಸ್
31-05-24 08:28 pm Mangalore Correspondent ಕ್ರೈಂ
ಮಂಗಳೂರು, ಮೇ 29: ಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆಗೆ ಕಡಿವಾಣವೇ ಇಲ್ಲದಂತಾಗಿದೆ. ಇತ್ತೀಚೆಗೆ ಕೊಣಾಜೆ ಠಾಣೆ ವ್ಯಾಪ್ತಿಯ ಹರೇಕಳ ಪಾವೂರಿನಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಯ ಬಗ್ಗೆ ಬೇಸತ್ತ ಸ್ಥಳೀಯರು ಪೊಲೀಸ್ ಕಮಿಷನರ್ ಬಳಿಗೇ ದೂರು ಒಯ್ದಿದ್ದರು. ಕಾರ್ಯಾಚರಣೆ ನಡೆಸಲು ಪೊಲೀಸರಿಗೂ ರಕ್ಷಣೆ ಕೊಡಿ ಎಂದು ಹೇಳಿ ಅಣಕಿಸುವ ಯತ್ನ ಮಾಡಿದ್ದರು. ಇಂತಹ ಅಕ್ರಮ ಮರಳು ದಂಧೆ ಮಂಗಳೂರಿನಲ್ಲಿ ಎಲ್ಲ ಕಡೆ ನಡೀತಿದ್ದರೂ, ಅಧಿಕಾರಿಗಳು, ಪೊಲೀಸರು ಅವರ ಜೊತೆಗೇ ಶಾಮೀಲಾಗಿದ್ದಾರೋ ಎನ್ನುವಂತೆ ಮೌನವಾಗಿದ್ದಾರೆ.
ಮರವೂರು ಪಡುಶೆಡ್ಡೆಯಲ್ಲಂತೂ ರೈಲ್ವೇ ಸೇತುವೆಯ ಕೆಳಭಾಗದಲ್ಲಿ ರಾತ್ರಿಯಿಡೀ ಮರಳು ಕಳ್ಳತನ ನಡೆಯುತ್ತಿರುವುದಾಗಿ ಅಲ್ಲಿನ ನಿವಾಸಿಗಳು ಹೆಡ್ ಲೈನ್ ಕರ್ನಾಟಕದ ಗಮನಕ್ಕೆ ತಂದಿದ್ದಾರೆ. ಮರವೂರು ಅಣೆಕಟ್ಟು ನೀರು ನಿಲ್ಲುವ ಜಾಗದ ಪಡುಶೆಡ್ಡೆ ಆಸುಪಾಸಿನಲ್ಲಿ ಮರಳನ್ನು ನೇರವಾಗಿಯೇ ಕದ್ದು ಹೊರಗಡೆ ಸಾಗಿಸುತ್ತಿದ್ದಾರೆ. ರೈಲ್ವೇ ಸೇತುವೆಯ ಅಡಿಭಾಗದಲ್ಲೇ ಉತ್ತರ ಭಾರತದ ಕಾರ್ಮಿಕರು ಪ್ರತಿ ದಿನವೂ ಮರಳನ್ನು ಎತ್ತುತ್ತಿದ್ದು, ನದಿ ದಡದ ಸಮತಟ್ಟಾದ ಜಾಗದಲ್ಲಿ ರಾಶಿ ಹಾಕಿ ರಾತ್ರೋರಾತ್ರಿ ಸಾಗಿಸುತ್ತಾರೆ. ಏಳೆಂಟು ದೋಣಿಗಳ ಮೂಲಕ ಮರಳನ್ನು ಎತ್ತುತ್ತಿದ್ದು, ಅಲ್ಲಿಂದ ಜೆಸಿಬಿಯಿಂದ ಟಿಪ್ಪರ್ ಗೆ ತುಂಬಿಸಿ ಹೊರಗಡೆ ಸಾಗಣೆಯಾಗುತ್ತದೆ.
ರಾತ್ರಿ 9 ಗಂಟೆ ಸುಮಾರಿಗೆ ಆರಂಭಗೊಂಡು ಬೆಳಗ್ಗೆ 5 ಗಂಟೆ ವರೆಗೂ ನದಿಯಲ್ಲಿ ಎಗ್ಗಿಲ್ಲದೆ ಕಳ್ಳತನ ನಡೆಯುತ್ತಿದೆ. ದಿನವೂ ಕನಿಷ್ಠ 30ಕ್ಕೂ ಹೆಚ್ಚು ಲೋಡ್ ಮರಳು ಪಡುಶೆಡ್ಡೆಯಿಂದ ಸಾಗಿಸುತ್ತಿದ್ದು, ಒಂದು ಲೋಡಿಗೆ 20 ಸಾವಿರದಂತೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಪಡುಶೆಡ್ಡೆಯಿಂದ ಬೋಂದೆಲ್ ಮತ್ತು ಮರವೂರು ಸೇತುವೆಯ ಬಳಿಗೆ ರಸ್ತೆ ಮಾರ್ಗವಿದ್ದು, ಪೊಲೀಸರ ಎದುರಲ್ಲೇ ಅಕ್ರಮ ಸಾಗಾಟ ನಡೆಯುತ್ತದೆ. ಕಾವೂರು ಪೊಲೀಸರೇ ಅಕ್ರಮಕ್ಕೆ ಸೆಕ್ಯುರಿಟಿ ಕೊಟ್ಟವರ ರೀತಿ ವರ್ತಿಸುತ್ತಾರೆ. ವಿಶೇಷ ಅಂದ್ರೆ, ದಿನವೂ ನದಿಯಿಂದ ಮರಳೆತ್ತುವ ಯುಪಿ ಕಾರ್ಮಿಕರಿಗೆ ಮರವೂರಿನ ನದಿ ಬಳಿಯಲ್ಲೇ ಗುಡಿಸಲು ನಿರ್ಮಿಸಿಕೊಟ್ಟು ಬಾಡಿಗೆ ಇರಿಸಲಾಗಿದೆ. ಇವೆಲ್ಲವೂ ಪೊಲೀಸರಿಗೆ ಗೊತ್ತಿದ್ದೇ ನಡೆಯುತ್ತಿದ್ದು ರಾಜಕಾರಣಿಗಳಿಗೆ ಸೇರಿ ಎಲ್ಲ ಕಡೆಯೂ ಮಾಮೂಲಿ ಕೊಟ್ಟೇ ಅಕ್ರಮ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಎರಡು ವರ್ಷಗಳ ಹಿಂದೆ ಕುಪ್ಪೆಪದವು ಬಳಿಯ ಮುಲ್ಲರಪಟ್ಟಣದಲ್ಲಿ ಅಕ್ರಮ ಮರಳುಗಾರಿಕೆಯಿಂದಾಗಿ ಅಲ್ಲಿನ ರಸ್ತೆಗೆ ಅಡ್ಡಲಾಗಿರುವ ಸೇತುವೆ ಕುಸಿದು ಬಿದ್ದಿತ್ತು. ಸೇತುವೆಯ ಆಸುಪಾಸಿನಲ್ಲಿ ಮರಳು ತೆಗೆಯಲೇಬಾರದು ಎಂಬ ನಿಯಮ ಇದ್ದರೂ, ದಂಧೆಕೋರರು ಅಲ್ಲಿ ಶೇಖರಣೆಯಾಗುವ ಮರಳನ್ನು ರಾತ್ರೋರಾತ್ರಿ ಬಾಚಿ ಹಣ ಮಾಡುತ್ತಿದ್ದಾರೆ. ಪಡುಶೆಡ್ಡೆ ರೈಲು ಸೇತುವೆಯ ಅಡಿಯಲ್ಲೇ ಮರಳನ್ನು ಎತ್ತಲಾಗುತ್ತಿದ್ದು, ಇದರಿಂದಾಗಿ ರೈಲು ಸಾಗುವ ಹೊತ್ತಲ್ಲೇ ಸೇತುವೆ ಕುಸಿದು ಬಿದ್ದರೆ ದೊಡ್ಡ ದುರಂತವೇ ಸಂಭವಿಸಬಹುದು. ಮುಲ್ಲರಪಟ್ಟಣದ ಸೇತುವೆಯೂ ಮಳೆಗಾಲದಲ್ಲಿಯೇ ಕುಸಿದು ಬಿದ್ದು ಅಪಾಯ ಸ್ವಲ್ಪದರಲ್ಲಿ ತಪ್ಪಿ ಹೋಗಿತ್ತು. ಸೇತುವೆ ಕುಸಿದು ದುರಂತ ಎದುರಾದರೆ ಪೊಲೀಸರು, ಜಿಲ್ಲಾಡಳಿತ ಮತ್ತು ಗಣಿ ಇಲಾಖೆಯೇ ಹೊಣೆಯೆಂದು ಕಾನೂನು ಮಾಡಿದ್ದರೆ ಇಂತಹ ನಿರ್ಲಕ್ಷ್ಯ ನಡೆಯಲಿಕ್ಕಿಲ್ಲ.
Illegal sand mining in Mangalore at the Maravoor railway bridge. From 9:00 p.m. to 5:00 a.m., sand is been removed without concern for potential legal consequences. These miners have dug up tons of sand, putting the railway bridge in danger. Marvoor village residents informed Headline Karnataka news about the illegal sand extraction.
13-01-25 10:30 pm
HK News Desk
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ; ಬಿಹಾರ ಮೂಲದ ಆರೋಪ...
13-01-25 10:48 am
Minister Parameshwara, Yatnal: 'ನೀವು ಸಾಬರಿಗೆ...
11-01-25 10:53 pm
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
13-01-25 10:49 pm
HK News Desk
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
13-01-25 09:08 pm
Mangalore Correspondent
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
Bangalore Cow Incident: ಹಸುವಿನ ಕೆಚ್ಚಲು ಕೊಯ್ದ...
13-01-25 10:48 am
Historian Vikram Sampath, Lit Fest Mangalore...
12-01-25 11:03 pm
PLD bank election, MLA Ashok Rai, Puttur: ಪಿಎ...
12-01-25 10:06 pm
13-01-25 03:30 pm
Mangaluru Correspondent
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am