ಬ್ರೇಕಿಂಗ್ ನ್ಯೂಸ್
08-06-24 06:13 pm Bangalore Correspondent ಕ್ರೈಂ
ಬೆಂಗಳೂರು, ಜೂ.08: ರಾಜಧಾನಿಯಲ್ಲಿ ನಾಗರಿಕರನ್ನ ಬೆಚ್ಚಿ ಬೀಳಿಸುವ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪರಿಚಯಸ್ಥನೊಬ್ಬನನ್ನ ವ್ಯಕ್ತಿಯೊಬ್ಬ ತನ್ನ ಮನೆಯಲ್ಲೇ ಭೀಕರವಾಗಿ ಕೊಂದು, ದೇಹದ ಭಾಗವನ್ನು ತುಂಡು ತುಂಡಾಗಿ ಕತ್ತರಿಸಿ ದೇಹದ ಭಾಗಗಳನ್ನ ಬ್ಯಾಗ್ನಲ್ಲಿ ತುಂಬಿಕೊಂಡು ಹೋಗಿ ಮೋರಿಯಲ್ಲಿ ಬೀಸಾಡಿದ್ದಾನೆ
ಕೊಲೆಯಾದ ವ್ಯಕ್ತಿ ಕೆ ವಿ ಶ್ರೀನಾಥ್ (34) ಎಂದು ಗುರುತಿಸಲಾಗಿದೆ. ಮಾಧವ ರಾವ್ ಕೊಲೆ ಮಾಡಿರುವ ಆರೋಪಿ. ಸಂಪಿಗೇಹಳ್ಳಿ ಪೊಲೀಸ ಮೂರು ದಿನಗಳ ಬಳಿಕೆ ಕೊಲೆ ರಹಸ್ಯವನ್ನು ಭೇದಿಸಿದ್ದಾರೆ.
ಕೊಲೆಯಾದ ಶ್ರೀನಾಥ್ ಥಣಿಸಂದ್ರದ ಅಂಜನಾದ್ರಿ ಲೇಔಟ್ ನಲ್ಲಿ ವಾಸವಾಗಿದ್ದರು. ಬಸವೇಶ್ವರನಗರದ ಚಿಟ್ ಫಂಡ್ನಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿದ್ದ ಕೆಲಸ ಮಾಡುತ್ತಿದ್ದ. ಮೇ 28ರ ಬೆಳಗ್ಗೆ ಮನೆಯಿಂದ ಹೊರಹೋಗಿದ್ದ ಶ್ರೀನಾಥ್ , ನಂತರ ಮನೆಗೆ ವಾಪಸ್ ಆಗಿರಲಿಲ್ಲ. ಶ್ರೀನಾಥ್ ನಾಪತ್ತೆ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಪತ್ನಿ ದೂರು ದಾಖಲಿಸಿದ್ಲು.
ಪೊಲೀಸರ ತನಿಖೆ ವೇಳೆ ಶ್ರೀಕಾಂತ್ ಮೇ 28ರಂದು ಕೆ ಆರ್ ಪುರದ ವಿಜಿನಪುರದಲ್ಲಿರೋ ಮಾಧವರಾವ್ ಮನೆಗೆ ಹೋಗಿರೋದು ಪತ್ತೆಯಾಗಿತ್ತು. ಮನೆಯ ಸಿಸಿಟಿವಿಯಲ್ಲಿ ಮಾಧವರಾವ್ ಮನೆಗೆ ಶ್ರೀನಾಥ್ ಬಂದಿರುವುದು ಪತ್ತೆಯಾಗಿತ್ತು. ಆದರೆ ಆತ ಮನೆಯಿಂದ ಹೊರ ಹೋಗುವುದು ಸಿಸಿಟಿವಿಯಲ್ಲಿ ಇರಲಿಲ್ಲ. ಅನುಮಾನದ ಮೇರೆಗೆ ಮನೆಯಲ್ಲಿ ಪರಿಶೀಲನೆ ಮಾಡಿದಾಗ ರಕ್ತದ ಕಲೆಗಳು ಪತ್ತೆಯಾಗಿದ್ದವು. ನಂತರ ಮಾಧವರಾವ್ ಮಾಧವರಾವ್ ಬಗ್ಗೆ ವಿಚಾರಿಸಿದಾಗ ಆತನೂ ನಾಪತ್ತಯಾಗಿದ್ದ.
ಮಾಧವರಾವ್ ಮತ್ತು ಶ್ರೀನಾಥ್ ಗೆ ಎರಡು ವರ್ಷದ ಪರಿಚಯವಿತ್ತು. ಶ್ರೀನಾಥ್ ಬಳಿ 5 ಲಕ್ಷ ರೂ ಹಣದ ಚೀಟಿ ಹಾಕಿದ್ದ ಮಾಧವರಾವ್. ಚೀಟಿ ಹಣದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗುತ್ತಿತ್ತು. ಅಲ್ಲದೆ ಪತ್ನಿ ಜೊತೆ ಶ್ರೀಕಾಂತ್ ಅಕ್ರಮ ಸಂಬಂಧ ಇತ್ತು ಎಂಬ ಆರೋಪ ಕೂಡ ಕೇಳಿಬಂದಿದೆ.
ಮೇ. 28ರಂದು ಬೆಳಗ್ಗೆ ಶ್ರೀನಾಥ್ ಮಾಧವರಾವ್ ಮನೆಗೆ ಬಂದಿದ್ದ . ಈ ವೇಳೆ ಮನೆಯಲ್ಲಿ ಇಬ್ಬರಿಗೂ ಹಣದ ವಿಚಾರಕ್ಕೆ ಗಲಾಟೆ ನಡೆದಿದೆ. ಬಳಿಕ ಜಾಕ್ ರಾಡ್ ನಿಂದ ಶ್ರೀನಾಥ್ ತಲೆಗೆ ಹೊಡೆದಿದ್ದಾನೆ. ನಂತರ ಶ್ರೀನಾಥ್ ದೇಹವನ್ನು ಮಚ್ಚಿನಿಂದ ತುಂಡು ತುಂಡಾಗಿ ಕತ್ತರಿಸಿದ್ದಾನೆ. ಸಾಕ್ಷಿ ನಾಶ ಮಾಡಲು ಮೃತದೇಹವನ್ನ ಎರಡು ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ಮೃತದೇಹ ತುಂಬಿ ಬೆಳತ್ತೂರು ಮೋರಿಯಲ್ಲಿ ಎಸೆದಿದ್ದಾನೆ. ನಂತರ ಮೊಬೈಲ್ ಆಫ್ ಮಾಡಿ ಆಂಧ್ರಕ್ಕೆ ಎಸ್ಕೇಪ್ ಆಗಿದ್ದಾನೆ.
ಈ ಪ್ರಕರಣವನ್ನ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಕೊಲೆ, ಸಾಕ್ಷಿ ನಾಶ ಅಡಿಯಲ್ಲಿ ಕೇಸ್ ದಾಖಲಾಗಿದೆ. ಕಳೆದ ಮೂರು ದಿನದಿಂದ ಶ್ರೀನಾಥ್ ಮೃತದೇಹ ಪತ್ತೆಗೆ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ. ಮಂಗಳೂರಿನಿಂದ ನುರಿತ ತಜ್ಞರನ್ನ ಕರೆಯಿಸಿ ಪೊಲೀಸರ ಶೋಧ ಕಾರ್ಯ ನಡೆಸುತ್ತಿದ್ದಾರೆ.
Bangalore murder over finance matter, man killed brutally cut into pieces. The deceased has been identified as K V Shrinath. Madhav Rao has been arrested over killing due to finance matter of 5 lakhs.
14-02-25 10:48 pm
HK News Desk
Home Minister Parameshwara, Udayagiri, Mysur...
14-02-25 08:44 pm
Pramod Mutalik, Waqf Board, Belagavi; ವಕ್ಫ್ ಬ...
14-02-25 07:44 pm
ಡಿ.ಕೆ.ಶಿವಕುಮಾರ್ ಸಿಎಂ ಸ್ಥಾನವನ್ನು ಒದ್ದು ಕಿತ್ಕೋ...
14-02-25 06:16 pm
Praveen Subhash, Navy Jawan, Misfire: ಆಕಸ್ಮಿಕ...
14-02-25 05:45 pm
13-02-25 02:45 pm
HK News Desk
Maha Kumbh, Jabalpur Accident: ಪ್ರಯಾಗ್ರಾಜ್ನ...
11-02-25 04:19 pm
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
14-02-25 10:22 pm
Mangalore Correspondent
Accident Mangalore, Roshan Moras; ಬೋಳಿಯಾರಿನಲ್...
13-02-25 09:40 pm
Mangalore Ullal Police, Inspector Balakrishna...
13-02-25 09:17 pm
Income tax Raid, Swastik Trading company, Man...
13-02-25 10:08 am
Bomb Threat, School, Mangalore: ಮಂಗಳೂರಿನಲ್ಲಿ...
12-02-25 10:58 pm
14-02-25 05:19 pm
HK News Desk
Ragging Horror At Kerala: ಬೆತ್ತಲೆ ನಿಲ್ಲಿಸಿ ಮರ...
13-02-25 10:20 pm
Mangalore Robbery, Kolya: ನೋಡ ನೋಡುತ್ತಲೇ ಅಂಚೆ...
13-02-25 10:14 pm
Fake HPCL oil racket, Belagavi, Vijayapura: ಎ...
13-02-25 05:54 pm
Mangalore, Sieal Residency Bar Valachil, Crim...
12-02-25 10:28 pm