ಬ್ರೇಕಿಂಗ್ ನ್ಯೂಸ್
11-06-24 04:54 pm HK News Desk ಕ್ರೈಂ
ಮೈಸೂರು, ಜೂ 11: ಇಲ್ಲಿನ ಸಿದ್ದಾರ್ಥ ನಗರದಲ್ಲಿರುವ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಗಳಾದ ಶಿವಾನಂದ ಸ್ವಾಮೀಜಿ (90) ಅವರ ಹತ್ಯೆಯಾಗಿದೆ. ಮಠದ ಆವರಣದಲ್ಲೇ ಸ್ವಾಮೀಜಿಯವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ವಾಮೀಜಿಯವರ ಆಪ್ತನಾಗಿದ್ದ ರವಿ ಎಂಬಾತನೇ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಮೈಸೂರಿನ ನಜಾರಾಬಾದ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿದ್ದು, ತನಿಖೆ ನಡೆಸಿದ್ದಾರೆ.
ಆರೋಪಿ ರವಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಸ್ವಾಮೀಜಿಯವರನ್ನು ಮಠದ ಆವರಣದಲ್ಲೇ ಹತ್ಯೆ ಮಾಡಿದ್ದಾನೆನ್ನಲಾಗಿದೆ. ಮಂಚದ ಮೇಲೆ ಮಲಗಿದ ಸ್ಥಿತಿಯಲ್ಲೇ ಸ್ವಾಮೀಜಿಯವರ ಶವ ಕಂಡುಬಂದಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಮೋಲ್ನೋಟಕ್ಕೆ ಇದು ಆಸ್ತಿ ವಿಚಾರವಾಗಿ ಸ್ವಾಮೀಜಿ ಹಾಗೂ ರವಿ ನಡುವೆ ಇದ್ದ ಮನಸ್ತಾಪವೇ ಕೊಲೆಗೆ ಕಾರಣ ಎನ್ನಲಾಗಿದೆ.

ಕೊಲೆಯ ನಂತರ ರವಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಮದ್ಯ ಸೇವಿಸಿ ಆನಂತರ ವಿಷ ಕುಡಿದಿದ್ದ, ಆತನನ್ನು ವಶಕ್ಕೆ ಪಡೆಯುವ ಹೊತ್ತಿಗೆ ಆಗಲೇ ನಿತ್ರಾಣನಾಗಿದ್ದ. ಹಾಗಾಗಿ, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.
ಮೈಸೂರಿನ ಅನ್ನದಾನೇಶ್ವರ ಮಠದ ಭಕ್ತರಾದ ಹನುಮಂತ ಪಾಟೀಲ ಹಾಗೂ ಅವರ ಪತ್ನಿ ಈ ಹಿಂದೆ ಒಮ್ಮೆ ಇದೇ ಸ್ವಾಮೀಜಿ ವಿರುದ್ಧ ದೂರು ನೀಡಿದ್ದರು. ಬೆಳಗಾವಿಯಿಂದ ಮೈಸೂರಿಗೆ ಬಂದು ನೆಲೆಸಿದ್ದ ಈ ದಂಪತಿ 2011 ರಲ್ಲಿ ಸ್ವಾಮೀಜಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪಾಟೀಲ್ ಸೆಕ್ಯೂರಿಟಿ ಗಾರ್ಡ್ ಆಗಿದ್ದ, ಪತ್ನಿ ಅಂಗನವಾಡಿಯಲ್ಲಿ ಕೆಲಸ ಮಾಡ್ತಿದ್ಲು . ಈ ದಂಪತಿ ಅನ್ನದಾನೇಶ್ವರ ಮಠದ ಶ್ರೀ ಮಹಾಶಿವಲಿಂಗ ಸ್ವಾಮೀಜಿ ಅವರ ಸೇವೆಯಲ್ಲಿ ತೊಡಗಿದ್ದ ವೇಳೆ ಮಠದ ಸ್ವಾಮೀಜಿಯು ದಂಪತಿಯಿಂದ ಒಂದೂವರೆ ಲಕ್ಷ ರೂ. ಹಣ ಪಡೆದಿದ್ರು.
ಇದಕ್ಕೆ ಬದಲಿಯಾಗಿ ಮಠದ ಆವರಣದಲ್ಲಿ ಜಾಗ ಕಲ್ಪಿಸುವ ಮಾತು ನೀಡಿ, ಅಲ್ಲಿ ನಿರ್ಮಾಣವಾಗುತ್ತಿದ್ದ ಕಾಂಪ್ಲೆಕ್ಸ್ ನ ಉಸ್ತುವಾರಿಯನ್ನು ಪಾಟೀಲ್ ಗೇ ನೀಡುವುದಾಗಿ ಸ್ವಾಮೀಜಿ ಮಾತು ಕೊಟ್ಟಿದ್ರು . ಆದರೆ ಇದ್ಯಾವುದು ನಡೆಯದೆ ಹೋದಾಗ, ಪಾಟೀಲ್ ದಂಪತಿ ಹಣ ನೀಡುವಂತೆ ಸ್ವಾಮೀಜಿಗೆ ಒತ್ತಾಯಿಸಿದ್ದಾರೆ . ಈ ರೀತಿ ಹಣ ಕೇಳಲು ಹೋದಾಗಲೇ ಪಾಟೀಲರ ಮಡದಿಯ ಕೈ ಹಿಡಿದು ಎಳೆದಾಡಿದ ಸ್ವಾಮೀಜಿ ಸೀರೆಗೂ ಕೈ ಹಾಕಿದ ಎಂದು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಆರೋಪಿಸಲಾಗಿತ್ತು. ಬಹುಶಃ ಅದೇ ದ್ವೇಷವೇ ಕೊಲೆಗೆ ಕಾರಣವಾಗಿರಬಹುದೇ ಎಂದು ಪೊಲೀಸರು ಊಹಿಸಿದ್ದಾರೆ.
Sri Shivananda Swamiji (90) of Sri Annadaaneshwara Mutt, located adjacent to Teresian College on Male Mahadeshwara Road in Siddarthanagar in city, was found murdered in his room this morning. Reports indicate that the Swamiji was brutally hacked to death with a machete.
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
24-01-26 11:23 pm
Mangaluru Staffer
ದೇಶದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಮಂಗಳೂರಿನ...
24-01-26 08:14 pm
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
National Conference on Neuropsychiatry Held a...
23-01-26 09:08 pm
24-01-26 11:18 pm
Mangaluru Staffer
ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ; ಎಂಟು ಮಂ...
24-01-26 08:53 pm
ಅವಧಿ ಮೀರಿದ ಮಾತ್ರೆ ನೀಡಿದ್ದಾಗಿ ವಿಡಿಯೋ ವೈರಲ್ ; ಕ...
24-01-26 02:13 pm
ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ...
23-01-26 09:36 pm
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm