Miscreants loot Catholic church: ಕ್ಯಾಥೊಲಿಕ್ ಚರ್ಚ್‌ಗೆ ನುಗ್ಗಿದ ಕಳ್ಳರು ; ಇಬ್ಬರು ಪಾದ್ರಿಗಳಿಗೆ ಲಾಠಿ, ಕಬ್ಬಿಣದ ಸಲಾಕೆಯಿಂದ ಹಲ್ಲೆ , 10ಲಕ್ಷ ರೂ. ಹಣ ಲೂಟಿ ಮಾಡಿ ಎಸ್ಕೇಪ್ ಆದ ಆಗಂತುಕರು

15-06-24 09:11 pm       HK News Desk   ಕ್ರೈಂ

ಒಡಿಶಾದ ಸುಂದರ್‌ಗಡ್‌ ಜಿಲ್ಲೆಯ ಕ್ಯಾಥೊಲಿಕ್ ಚರ್ಚ್‌ಗೆ ನುಗ್ಗಿದ ಅಪರಿಚಿತರು ಇಬ್ಬರು ಪಾದ್ರಿಗಳ ಮೇಲೆ ಹಲ್ಲೆ ನಡೆಸಿ, 10ಲಕ್ಷ ರೂ.ನಗದು ಲೂಟಿ ಮಾಡಿದ್ದಾರೆ.

ರೂರ್ಕೆಲಾ, ಜೂ.15: ಒಡಿಶಾದ ಸುಂದರ್‌ಗಡ್‌ ಜಿಲ್ಲೆಯ ಕ್ಯಾಥೊಲಿಕ್ ಚರ್ಚ್‌ಗೆ ನುಗ್ಗಿದ ಅಪರಿಚಿತರು ಇಬ್ಬರು ಪಾದ್ರಿಗಳ ಮೇಲೆ ಹಲ್ಲೆ ನಡೆಸಿ, 10ಲಕ್ಷ ರೂ.ನಗದು ಲೂಟಿ ಮಾಡಿದ್ದಾರೆ.

ರೂರ್ಕೆಲಾದಿಂದ 25 ಕಿ.ಮೀ. ದೂರದಲ್ಲಿರುವ ಜರ್ಬಹಾಲ್ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಚರ್ಚ್‌ನ ಪಾದ್ರಿ ಮೇಲೆ ಹಲ್ಲೆ ನಡೆಸಿ, ಹಣವನ್ನು ಲೂಟಿ ಮಾಡಿದ್ದಾರೆ.

ಚರ್ಚ್‌ನ ಮುಖ್ಯ ದ್ವಾರವನ್ನು ಒಡೆದು ಒಳನುಗ್ಗಿದ ಆಗಂತುಕರು ಪಾದ್ರಿಯ ಕೊಠಡಿಗೆ ತೆರಳಿ ಹಲ್ಲೆ ನಡೆಸಿದ್ದಾರೆ. ಇದರಲ್ಲಿ ಪಾದ್ರಿಗಳಾದ ಅಲಾಯ್ಸ್‌ ಕ್ಸಲೆಕ್ಸೊ (72) ಹಾಗೂ ನಿರಿಯಾಲ್‌ ಬೈಲುಂಗ್‌ (52) ಗಾಯಗೊಂಡಿದ್ದಾರೆ. ಇವರನ್ನು ರೂರ್ಕೆಲಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುವುದಾಗಿ ವೈದ್ಯರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿ ನಿಲಯ ಹಾಗೂ ಶಾಲೆಗಳಿಂದ ಸಂಗ್ರಹಿಸಿದ ಶುಲ್ಕದ ಮೊತ್ತ 10 ಲಕ್ಷ ರೂ. ನಗದು ಚರ್ಚ್‌ನಲ್ಲಿತ್ತು. ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಚರ್ಚ್‌ನ ಮುಂಭಾಗ ಕಬ್ಬಿಣದ ಬಾಗಿಲನ್ನು ಮುರಿದು ಒಳನುಗ್ಗಿ, ಹಲ್ಲೆ ನಡೆಸಿದ ಗುಂಪಿನಲ್ಲಿ 10ರಿಂದ 12 ಜನರಿದ್ದರು. ಅವರು ಲಾಠಿ ಮತ್ತು ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದರು ಎಂದು ಫಾದರ್ ಕ್ಸಲೆಕ್ಸೊ ಮಾಹಿತಿ ನೀಡಿದ್ದಾರೆ.

Unidentified miscreants physically assaulted two priests and looted Rs 10 lakh from a catholic church in Odisha’s Sundergarh district, police said on Saturday. The injured fathers were identified as Alois Xalxo (72), and Nirial Bilung (52).