ಬ್ರೇಕಿಂಗ್ ನ್ಯೂಸ್
18-06-24 01:47 pm Mangalore Correspondent ಕ್ರೈಂ
ಮಂಗಳೂರು, ಜೂನ್ 18: ವಾಟ್ಸಪ್ ಗ್ರೂಪಿನಲ್ಲಿ ಬಂದ ಮೆಸೇಜ್ ಆಧರಿಸಿ ವ್ಯಕ್ತಿಯೊಬ್ಬರು ಬರೋಬ್ಬರಿ 17.57 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಿ ಮೋಸ ಹೋಗಿರುವ ಘಟನೆ ನಡೆದಿದ್ದು, ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2024ರ ಮಾರ್ಚ್ 23ರಂದು ವ್ಯಕ್ತಿಯ ಮೊಬೈಲ್ ವಾಟ್ಸಪ್ ಗೆ Alice –LRC ಎಂಬ ವಾಟ್ಸಪ್ ಗ್ರೂಪ್ ಲಿಂಕ್ ಬಂದಿತ್ತು. ಅದಕ್ಕೆ ಸೇರಿಕೊಂಡ ಬಳಿಕ ಷೇರು ಮಾರುಕಟ್ಟೆಯಲ್ಲಿ ಡಿಸ್ಕೌಂಟ್ ಬೆಲೆಗ ಷೇರುಗಳನ್ನು ಮಾರಾಟ ಮಾಡುವುದಾಗಿ ಪದೇ ಪದೇ ಮೆಸೇಜ್ ಗಳು ಬಂದಿದ್ದವು. ಇದನ್ನು ನಂಬಿದ ಮಡಂತ್ಯಾರಿನ ವ್ಯಕ್ತಿ Alice –LRC ಎಂಬ ಕಂಪನಿಯಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ.
ಅಧಿಕ ಲಾಭ ಸಿಗುತ್ತೆ ಎಂದು ಲೆಕ್ಕ ಹಾಕಿ, ತನ್ನ ಬ್ಯಾಂಕ್ ಖಾತೆಗಳಿಂದ ಆರೋಪಿಗಳು ಸೂಚಿಸಿದಂತೆ ಹಣವನ್ನು ವರ್ಗಾಯಿಸಿದ್ದಾರೆ. ಹಂತ ಹಂತವಾಗಿ ಒಟ್ಟು 17,57,000 ರೂಪಾಯಿ ಹಣವನ್ನು ಆರೋಪಿಗಳ ಖಾತೆಗೆ ವರ್ಗಾಯಿಸಿದ್ದು, ಹೂಡಿಕೆ ಮಾಡಿದ್ದಾರೆ. ಆನಂತರ ಆರೋಪಿಗಳು ಇನ್ನೂ ಹೆಚ್ಚಿನ ಮೊತ್ತ ಹಾಕುವಂತೆ ತಿಳಿಸಿದ್ದಾರೆ. ಈ ವ್ಯಕ್ತಿ ತಾನು ಹಾಕಿದ ಹಣ ಮರಳಿಸಲು ಯತ್ನಿಸಿದಾಗ, ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ತಾನು ಮೋಸ ಹೋಗಿದ್ದಾಗಿ ತಿಳಿದು ವ್ಯಕ್ತಿ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಾನಾ ರೀತಿ ಆಮಿಷ ತೋರಿಸಿ ಖೆಡ್ಡಾ
ವಾಟ್ಸಪ್ ಗ್ರೂಪ್ ಗಳಿಗೆ ಸೇರಿಸುವುದು, ಹಣ ಹೂಡಿಕೆ ಮಾಡುವಂತೆ ಪದೇ ಪದೇ ಒತ್ತಾಯಿಸುವುದು, ಷೇರು ಮಾರುಕಟ್ಟೆಯ ಆಮಿಷ ತೋರಿಸುವುದು, ವಾಟ್ಸಪ್ ಪರ್ಸನಲ್ ಮೆಸೇಜ್ ಮಾಡಿ ಪಾರ್ಟ್ ಟೈಮ್ ಜಾಬ್ ಆಫರ್ ನೀಡುವುದು ಇತ್ಯಾದಿ ರೀತಿಯಲ್ಲಿ ಸಾರ್ವಜನಿಕರನ್ನು ಮೋಸಗೊಳಿಸುವ ಜಾಲ ಸಕ್ರಿಯವಾಗಿದ್ದು, ಸೈಬರ್ ವಂಚಕರು ಉತ್ತರ ಭಾರತದಲ್ಲಿ ಕುಳಿತೇ ಹಣವನ್ನು ದೋಚುತ್ತಿದ್ದಾರೆ. ಅಪರಿಚಿತರು ಮೆಸೇಜ್ ಮಾಡಿದರೆ, ವಾಟ್ಸಪ್ ಗ್ರೂಪುಗಳಿಗೆ ಸೇರಿಸಿ ಹಣ ಹೂಡಿಕೆ ಮಾಡಲು ಹೇಳಿದರೆ ಅದಕ್ಕೆ ಸ್ಪಂದಿಸದೆ ಇರುವುದು ಉತ್ತಮ ಎಂದು ಸೈಬರ್ ತಜ್ಞರು ಹೇಳುತ್ತಾರೆ.
Mangalore Online WhatsApp fraud on stock market, man looses 17 lakhs rs from Madanthyar who believed in fraud stock market and invested. A case has been registered at cyber police station in Mangalore.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 06:02 pm
HK News Staffer
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm