ಗುಜರಾತ್‌ನಲ್ಲಿ 40 ಕೋಟಿ ರೂ.ಮೌಲ್ಯದ ಡ್ರಗ್ಸ್ ವಶಕ್ಕೆ ; 200ಕ್ಕೂ ಹೆಚ್ಚು ಡ್ರಗ್ಸ್ ಪ್ಯಾಕೆಟ್‌ಗಳ ಜಪ್ತಿ , ಪೊಲೀಸರ ಮೆಗಾ ಕಾರ್ಯಾಚರಣೆ

18-06-24 05:02 pm       HK News Desk   ಕ್ರೈಂ

ಗುಜರಾತ್‌ನ ಕಛ್ ಹಾಗೂ ಪೋರ್‌ಬಂದರ್ ಜಿಲ್ಲೆಗಳ ಕರಾವಳಿ ಪ್ರದೇಶದಲ್ಲಿ 40 ಕೋಟಿ ರೂ. ಮೌಲ್ಯದ 87 ಪ್ಯಾಕೆಟ್ ಚರಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗುಜರಾತ್‌, ಜೂ 18: ಗುಜರಾತ್‌ನ ಕಛ್ ಹಾಗೂ ಪೋರ್‌ಬಂದರ್ ಜಿಲ್ಲೆಗಳ ಕರಾವಳಿ ಪ್ರದೇಶದಲ್ಲಿ 40 ಕೋಟಿ ರೂ. ಮೌಲ್ಯದ 87 ಪ್ಯಾಕೆಟ್ ಚರಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಪೈಕಿ ಕಛ್ ಜಿಲ್ಲೆಯಲ್ಲಿ ಕಳೆದ ಮೂರು-ನಾಲ್ಕು ದಿನಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 40 ಕೋಟಿ ರೂ. ಗೂ ಹೆಚ್ಚು ಮೌಲ್ಯದ 81 ಚರಸ್ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ.

ಸೋಮವಾರ ಮಾತ್ರ, 40 ಪ್ಯಾಕೆಟ್ ವಶಪಡಿಸಲಾಗಿದೆ. ಮಗದೊಂದು ಪ್ರಕರಣದಲ್ಲಿ ಪೋರ್‌ಬಂದರ್‌ನ ಪೊಲೀಸರು, ಓಡಾದರ್ ತೀರ ಪ್ರದೇಶದಿಂದ ಆರು ಪ್ಯಾಕೆಟ್ ಚರಸ್ ವಶಪಡಿಸಿದ್ದಾರೆ.

ಡ್ರೋನ್ ಹಾಗೂ ಗುಪ್ತಚರ ಕಾರ್ಯಾಚರಣೆ ತೀವ್ರಗೊಳಿಸಿರುವ ಪೊಲೀಸರು, ಕಳೆದ ಕೆಲವು ದಿನಗಳಲ್ಲಿ ಕಛ್, ದೇವಭೂಮಿ ದ್ವಾರಕಾ ಹಾಗೂ ಪೋರ್‌ಬಂದರ್‌ನಲ್ಲಿ 200ಕ್ಕೂ ಹೆಚ್ಚು ಡ್ರಗ್ಸ್ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಿದ್ದಾರೆ.

ಕಳೆದ 10 ದಿನಗಳಲ್ಲಿ ದೇವಭೂಮಿ ದ್ವಾರಕಾದಲ್ಲಿ ನಡೆಸಿದ್ದ ಕಾರ್ಯಾಚರಣೆಯಲ್ಲಿ 62 ಕೋಟಿ ರೂ. ಮೌಲ್ಯದ 115 ಪ್ಯಾಕೇಟ್ ಚರಸ್ ವಶಪಡಿಸಿಕೊಳ್ಳಲಾಗಿತ್ತು.

ಎರಡು ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ಡ್ರಗ್ಸ್‌ ನ ಮಾರುಕಟ್ಟೆ ಮೌಲ್ಯ ಅಂದಾಜು 48 ಕೋಟಿ ರೂಪಾಯಿ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Ahmedabad, As many as 87 packets of charas have been recovered in Gujarat's Kutch and Porbandar districts after they got washed up on the sea coast in the last few days, the latest in a series of such seizures in the state, police said.