ಬ್ರೇಕಿಂಗ್ ನ್ಯೂಸ್
23-06-24 04:38 pm HK News Desk ಕ್ರೈಂ
ಕೋಲಾರ, ಜೂ.23: ಆನಂದಮಾರ್ಗ ಆಶ್ರಮಕ್ಕೆ ಸೇರಿದ ಆಸ್ತಿ ವಿವಾದ ಹಿನ್ನೆಲೆ, ಇಬ್ಬರು ಸ್ವಾಮೀಜಿಗಳ ನಡುವೆ ಮಾರಾಮರಿ ನಡೆದು ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ(76) ಹತ್ಯೆಯಾಗಿದೆ.
ಜಿಲ್ಲೆಯ ಮಾಲೂರು ತಾಲೂಕಿನ ಸಂತಹಳ್ಳಿಯಲ್ಲಿರುವ ಆನಂದ ಮಾರ್ಗ ಆಶ್ರಮದಲ್ಲಿ ಶನಿವಾರ ಉಭಯ ಸ್ವಾಮೀಜಿಗಳ ಗುಂಪುಗಳ ನಡುವೆ ಆದ ಜಗಳ ಸ್ವಾಮೀಜಿಯೊಬ್ಬರ ಕೊಲೆಯಲ್ಲಿ ಅಂತ್ಯಗೊಂಡಿದೆ.
ಆಚಾರ್ಯ ಚಿನ್ಮಯಾನಂದ ಅವದೂತರು ಜೂನ್ 22ರ ಬೆಳಗ್ಗೆ ಸುಮಾರು 6 ಗಂಟೆಗೆ ಸ್ನಾನಕ್ಕೆ ಹೋಗಿದ್ದರು. ಆಗ ಆನಂದ ಮಾರ್ಗ ಕಾಲೇಜಿನ ಆಚಾರ್ಯ ಧರ್ಮಪ್ರಾಣಾನಂದ ಅವದೂತ ಮತ್ತು ಆಚಾರ್ಯ ಪ್ರಾಣೇಶ್ವರ್ ಕೊಲೆ ಮಾಡುವ ಉದ್ದೇಶದಿಂದಲೇ ದೊಣ್ಣೆ ಮತ್ತು ಯಾವುದೋ ಸ್ಪ್ರೇಯನ್ನ ತೆಗೆದುಕೊಂಡು ಅವರನ್ನು ಹಿಂಬಾಲಿಸಿದ್ದಾರೆ.
ಶೌಚಾಲಯದ ಬಾಗಿಲು ಒಡೆದು ಒಳ ನುಗ್ಗಿ ಆಚಾರ್ಯ ಚಿನ್ಮಯಾನಂದ ಅವದೂತ ಅವರ ಮುಖಕ್ಕೆ ಸ್ಪ್ರೇಯನ್ನ ಸಿಂಪಡಿಸಿ ನಂತರ ಕೈಗಳಿಂದ ಹೊಡೆದು, ದೊಣ್ಣೆಗಳಿಂದ ತಲೆಗೆ ಮತ್ತು ಇತರೆ ಕಡೆ ಹೊಡೆದು, ಅಲ್ಲಿಂದ ಅವರನ್ನ ಎಳೆದುಕೊಂಡು ಕುಟೀರದ ಮನೆಗೆ ಬಂದಿದ್ದಾರೆ.
ಆಗ 3ನೇ ಆರೋಪಿ ಅರುಣ್ ಕುಮಾರ್ ಸಹ ಜೊತೆ ಸೇರಿದ್ದು, ಮೂರು ಜನರು ಪುನಃ ದೊಣ್ಣೆಯಿಂದ ಆಚಾರ್ಯ ಅವರ ತಲೆ, ಮುಖ, ಎರಡು ಕೈ, ಕಾಲುಗಳಿಗೆ ಹಿಗ್ಗಮುಗ್ಗ ಹೊಡೆದಿದ್ದಾರೆ. ಅವರ ಬಳಿ ಇದ್ದ ಮೊಬೈಲ್ ಮತ್ತು ಕೀಗಳನ್ನ ಒತ್ತಾಯ ಪೂರ್ವಕವಾಗಿ ಕಿತ್ತುಕೊಂಡಿದ್ದಾರೆ. ಆಗ ಸ್ಥಳೀಯರು ಗಲಾಟೆಯನ್ನು ಬಿಡಿಸಿ ಗಾಯಗೊಂಡಿದ್ದ ಆಚಾರ್ಯ ಅವರನ್ನ ಉಪಚರಿಸಿ, ಆಂಬುಲೆನ್ಸ್ ಮೂಲಕ ಮಾಲೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ವೈದ್ಯರ ಸಲಹೆ ಮೇರೆಗೆ ಕೋಲಾರದ ಆರ್. ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಆನಂದ ಮಾರ್ಗ ಕಾಲೇಜಿನ ಜಮೀನಿನ ಮತ್ತು ಆಡಳಿತ ನಡೆಸುವ ವೈಖರಿ ಬಗ್ಗೆ ಇದ್ದ ವೈಷಮ್ಯದಿಂದ ಮೂವರು ಆರೋಪಿಗಳು ಒಳಸಂಚು ರೂಪಿಸಿ ಅವರ ಬಳಿ ಇದ್ದ ಮೊಬೈಲ್ ಮತ್ತು ಕೀಗಳನ್ನ ದುರುದ್ದೇಶದಿಂದ ಕಸಿದುಕೊಂಡಿದ್ದು, ಉದ್ದೇಶ ಪೂರ್ವಕವಾಗಿ ಆಚಾರ್ಯ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ.
ಆನಂದ ಮಾರ್ಗ ಆಶ್ರಮಕ್ಕೆ ಸೇರಿರುವ ಪಾಲಿಟೆಕ್ನಿಕ್ ಕಾಲೇಜು ಆಸ್ತಿ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ 22 ವರ್ಷಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಜೂ.24ರಂದು ವಿಚಾರಣೆಯು ಇತ್ತು, ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಆರೋಪಿ ಆಚಾರ್ಯ ಧರ್ಮ ಪ್ರಾಣಾನಂದ ಗುಂಪುಕಟ್ಟಿಕೊಂಡು ಅಗಾಗ ಗಲಾಟೆ ಮಾಡುತ್ತಿದ್ದರು.
ಆಚಾರ್ಯ ಚಿನ್ಮಯಾನಂದ ಕೊಲೆ ಪ್ರಕರಣದ ತನಿಖೆ ಕೈಗೊಂಡ ಮಾಲೂರು ಪೊಲೀಸರು ಆಚಾರ್ಯ ಧರ್ಮಪ್ರಾಣಾನಂದ (45), ಆಚಾರ್ಯ ಪ್ರಾಣೇಶ್ವರ್ (48) ಮತ್ತು ಅರುಣ್ ಕುಮಾರ್ (55) ಬಂಧಿಸಿದ್ದಾರೆ. ಇತರ ಆರೋಪಿಗಳ ಪತ್ತೆಗೆ ಹುಡುಕಾಟ ನಡೆದಿದೆ
ಆಚಾರ್ಯ ಧರ್ಮಪ್ರಾಣಾನಂದ ಅವದೂತ ಕೊಲೆ ಪ್ರಕರಣದ ಮೊದಲ ಆರೋಪಿ. ಆಚಾರ್ಯ ಪ್ರಾಣೇಶ್ವರ್ 2ನೇ ಆರೋಪಿ ಮತ್ತು ಅರುಣ್ ಕುಮಾರ್ 3ನೇ ಆರೋಪಿ. ಆಚಾರ್ಯ ಚಿನ್ಮಯಾನಂದ ಶೌಚಾಲಯಕ್ಕೆ ಹೋಗಿದ್ದಾಗ ಮುಖಕ್ಕೆ ಸ್ಪ್ರೇಯನ್ನು ಸಿಂಪಡಿಸಿ, ದೊಣ್ಣೆಯಿಂದ ಹೊಡೆದು ಅವರನ್ನು ಹತ್ಯೆ ಮಾಡಲಾಗಿದೆ.
ಆನಂದ ಮಾರ್ಗ ಆಶ್ರಮ ಪಶ್ಚಿಮ ಬಂಗಾಳದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. 80ರ ದಶಕದಲ್ಲಿ ಆಶ್ರಮದ ಸ್ವಾಮೀಜಿಯೊಬ್ಬರು ಮಾಲೂರಿಗೆ ಭೇಟಿ ನೀಡಿದ್ದರು. ಆಗ ಕುಟುಂಬವೊಂದು ಶಿಕ್ಷಣ ಸಂಸ್ಥೆ ಆರಂಭಿಸಲು 3 ಎಕರೆ ಜಮೀನು ದಾನವಾಗಿ ನೀಡಿತ್ತು. ಅದೇ ಜಮೀನಿನಲ್ಲಿ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಲಾಗಿತ್ತು.
ಹಂತ ಹಂತವಾಗಿ ಜಿಲ್ಲೆಯಲ್ಲಿ ಆಶ್ರಮ 10 ಎಕರೆಗಿಂತಲೂ ಹೆಚ್ಚು ಜಮೀನು ಖರೀದಿ ಮಾಡಿತ್ತು. ಈ ವಿಚಾರವಾಗಿ ಸ್ವಾಮೀಜಿಗಳ ನಡುವೆ ವಿವಾದ ಉಂಟಾಗಿತ್ತು. ವಿವಾದ ಕೋರ್ಟ್‌ಗೆ ಹೋಗಿ ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು.
Chinmayananda Swamiji, 70, of Ananda Marga Mutt at Mylanda Halli near Malur in Kolar district was allegedly beaten to death by three people, including two seers of the mutt, on Saturday morning. Police gave the names of the arrested as Arun Kumar, 55, Acharya Dharmananda Avadhoot, 45, and Acharya Praneshwar, 48.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm