MLA Harish Gowda, Honey Trap: ಮೈಸೂರಿನಲ್ಲಿ ಶಾಸಕ ಸೇರಿದಂತೆ ಪ್ರಭಾವಿಗಳಿಗೆ ಹನಿಟ್ರ್ಯಾಪ್, ಬ್ಲಾಕ್ಮೇಲ್ ; ಇಬ್ಬರು ಆರೋಪಿಗಳ ಬಂಧನ

26-06-24 06:15 pm       HK News Desk   ಕ್ರೈಂ

ಮೈಸೂರು ಜಿಲ್ಲೆಯ ಚಾಮರಾಜ ನಗರ ಕ್ಷೇತ್ರದ ಶಾಸಕ ಹರೀಶ್ ಗೌಡ ಮತ್ತು ಇತರ ಪ್ರಭಾವಿಗಳಿಗೆ ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್‌‌ಮೇಲ್ ಮಾಡಿದ ಆರೋಪದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. 

ಮೈಸೂರು, ಜೂನ್ 26: ಮೈಸೂರು ಜಿಲ್ಲೆಯ ಚಾಮರಾಜ ನಗರ ಕ್ಷೇತ್ರದ ಶಾಸಕ ಹರೀಶ್ ಗೌಡ ಮತ್ತು ಇತರ ಪ್ರಭಾವಿಗಳಿಗೆ ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್‌‌ಮೇಲ್ ಮಾಡಿದ ಆರೋಪದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. 

ಪ್ರಕರಣ ಸಂಬಂಧ ಮೈಸೂರು ಮೂಲದ ಸಂತೋಷ್ ಹಾಗೂ ಪುಟ್ಟರಾಜು ಎನ್ನುವವರನ್ನ ಬಂಧಿಸಲಾಗಿದೆ. ಯಾರಾದ್ರೂ ವಿಐಪಿಗಳು ಹೊಟೇಲ್ ಬುಕ್ ಮಾಡಿ ಖಾಲಿಯಾದ ಬಳಿಕ ಅದೇ ರೂಮ್ ಪಡೆಯುತ್ತಿದ್ದ ಆರೋಪಿಗಳು ಯುವತಿಯನ್ನು ಬಳಸಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದು ವಿಐಪಿ ವ್ಯಕ್ತಿಗೆ ತೋರಿಸಿ ಬ್ಲಾಕ್​ಮೇಲ್ ಮಾಡುತ್ತಿದ್ದರಂತೆ. 

ಪ್ರಕರಣದ ಬಗ್ಗೆ ಶಾಸಕ ಹರೀಶ್‌ ಗೌಡ ಸ್ಪಷ್ಟನೆ ನೀಡಿದ್ದು, ನನ್ನ ಮೇಲೆ ಹನಿಟ್ರ್ಯಾಪ್ ನಡೆದಿಲ್ಲ. ನನ್ನ ಕ್ಷೇತ್ರದ ಹಲವರಿಗೆ ಹನಿಟ್ರ್ಯಾಪ್ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ತನಿಖೆ ಮಾಡಲು ಹೇಳಿದ್ದೆ. ಉದ್ಯಮಿಗಳು, ವಿಐಪಿಗಳು, ಪ್ರೊಫೆಸರ್‌ಗಳನ್ನೇ ಇವರು ಟಾರ್ಗೆ‌ಟ್ ಮಾಡುತ್ತಿದ್ದು ಮೈಸೂರು, ಬೆಂಗಳೂರಿಗೆ ಬಂದಾಗ ಕೃತ್ಯ ಎಸಗುತ್ತಿದ್ದರು. ಈ ಬಗ್ಗೆ ಪೊಲೀಸ್ ಕಮಿಷನರ್‌ಗೆ, ಸಿಸಿಬಿ ಪೊಲೀಸರಿಗೆ ಅವರ ಮೂಲಕ ದೂರು ಕೊಡಿಸಿದ್ದೆ. ಅದರಂತೆ ಇಬ್ಬರನ್ನ ಬಂಧಿಸಿದ್ದಾರೆ ಅಂತ ಮಾಹಿತಿ ಬಂದಿದೆ ಎಂದು ತಿಳಿಸಿದರು. 

ಹನಿಟ್ರ್ಯಾಪ್ ಪ್ರಕರಣದ ಕುರಿತಂತೆ ಮೈಸೂರು ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು, ಕೆಲವು ದಿನಗಳ ಹಿಂದೆ ಗ್ಯಾಂಗ್ ಒಂದು ಕೆಲವು ಅಂಶಗಳನ್ನು ಮುಂದಿಟ್ಟು ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ ಅಂತ ದೂರು ಬಂದಿತ್ತು. ಪ್ರಕರಣ ದಾಖಲಿಸಿ ಆರೋಪಿಗಳನ್ನ ಬಂಧಿಸಿದ್ದು ಹೇಳಿಕೆಗಳನ್ನ ಪಡೆದುಕೊಂಡಿದ್ದೇವೆ. ಗ್ಯಾಂಗ್ ನಲ್ಲಿ ಇದುವರೆಗೂ ಮೂವರು ಇದ್ದದ್ದು ಪತ್ತೆಯಾಗಿದೆ. ಮತ್ತೊಬ್ಬರು ಪರಾರಿಯಾಗಿದ್ದಾರೆ. ಬೇರೆ ಬೇರೆ ನಂಬರ್ ಗಳನ್ನ ಬಳಸಿ ಬ್ಲ್ಯಾಕ್ ಮೇಲ್ ಮಾಡುತ್ತಿರೋದು ತಿಳಿದುಬಂದಿದೆ ಎಂದು ತಿಳಿಸಿದರು.

Mysuru MLA Harish Gowda honey trap case, two arrested by CCB police. The arrested have been identified as Santosh and putaraju. The accused were into blackmail business of rich people.