ಬ್ರೇಕಿಂಗ್ ನ್ಯೂಸ್
26-06-24 11:10 pm Mangalore Correspondent ಕ್ರೈಂ
ಮಂಗಳೂರು, ಜೂ.26: ಉಳ್ಳಾಲ ತಾಲ್ಲೂಕು ಪಾವೂರು ಉಳಿಯದ ಕುದ್ರು ಎಂಬಲ್ಲಿ ಜೂನ್ 21 ರಂದು ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಮಾಧ್ಯಮದಲ್ಲಿ ಬಿತ್ತರವಾದ ಸುದ್ದಿಯ ಹಿನ್ನೆಲೆಯಲ್ಲಿ ಕಚೇರಿಯ ಹಿರಿಯ ಭೂ ವಿಜ್ಞಾನಿಗಳನ್ನು ಒಳಗೊಂಡ ತಾಂತ್ರಿಕ ಅಧಿಕಾರಿಗಳ ತಂಡವು ಜೂನ್ 24 ರಂದು ಸದರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.
ಈ ಕುದ್ರುವಿನ ಪೂರ್ವಕ್ಕೆ ಸಾವಯವ ಮಣ್ಣು ಮಿಶ್ರಿತ ಮರಳು ಖಾಲಿಯಾಗಿದ್ದು, ಉಳಿದಂತೆ ಕುದ್ರು ಅಖಂಡವಾಗಿರುವುದು ಕಂಡುಬಂದಿದ್ದು, ಕುದ್ರುವಿನ ಪೂರ್ವಕ್ಕೆ ಇರುವ ಮಣ್ಣು ಕುಸಿಯಲು ಕಾರಣ ಗಿಡ ಮರಗಳ ಅಭಾವ. ಸದರಿ ಪ್ರದೇಶದಲ್ಲಿ ಅರುಗನ್ನು ಹಿಡಿದಿಟ್ಟುಕೊಳ್ಳಲು ಪೂರಕವಾದ ಬೇರು ಬಿಡುವ ಮತ್ತು ಅರುಗನ್ನು ಸಂರಕ್ಷಿಸುವ ಕಾಂಡ್ಲಾ ಗಿಡಗಳು ಇಲ್ಲದಿರುವುದು. ಬಿರುಸಾದ ನೀರಿನ ಹರಿವಿನಿಂದಾಗಿ ಮಣ್ಣು ಕುಸಿದು ಹೋಗಿರುತ್ತದೆ ಮತ್ತು ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಯಾವುದೇ ಅನಧಿಕೃತ ಸಾಮಾನ್ಯ ಮರಳು ಗಣಿಗಾರಿಕೆ ಚಟುವಟಿಕೆ ನಡೆಯುತ್ತಿರುವುದು ಕಂಡುಬಂದಿರುವುದಿಲ್ಲ.


ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾದ ಮರಳು ತೆಗೆಯುವ ದೃಶ್ಯಗಳು ಹಳೆಯದಾಗಿದ್ದು ಮತ್ತು ಸದರಿ ದ್ವೀಪದ ಬಳಿ ಈಚೆಗೆ ಯಾವುದೇ ಮರಳು ತೆಗೆದಿಲ್ಲದೇ ಇರುವುದು ಪ್ರದೇಶದಲ್ಲಿರುವ ಒಣಗಿದ ಮತ್ತು ಸರಿದಿರುವ ಸಾವಯವ ಮಣ್ಣು ಮಿಶ್ರಿತ ಮಣ್ಣಿನ ಮೇಲೆ ಬೆಳೆದಿರುವ ಮಜ್ಜಿಗೆ ಹುಲ್ಲಿನಿಂದ ಖಾತ್ರಿಯಾಗಿರುತ್ತದೆ. ಕಂದಾಯ ಇಲಾಖೆಯ ದಾಖಲೆಯಂತೆ ಸದರಿ ಕುದ್ರುವಿನ ಒಟ್ಟು ವಿಸ್ತೀರ್ಣವು 30.49 ಎಕರೆ ಆಗಿದ್ದು, ಭೌತಿಕವಾಗಿ ಪರಿಶೀಲಿಸಿದಾಗ ಸದರಿ ಕುದ್ರುವಿನ ವಿಸ್ತೀರ್ಣವು 98.02 ಎಕರೆ ಇದ್ದು, ಕುದ್ರುವಿನ ಯಾವುದೇ ಭಾಗವು ನದಿಯಲ್ಲಿ ಮುಳುಗಡೆಗೊಂಡಿರುವುದಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
The Mines and Geology Department on Wednesday denied charges of illegal sand extraction in and around Pavoor-Uliya Kudru in Netravathi river and the consequent degeneration of the river island.
25-06-26 09:10 pm
HK News Staffer
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 10:56 pm
HK News Staffer
Mangalore Drugs, Police: ಒಂದು ವರ್ಷದಲ್ಲಿ 400 ಡ...
25-06-26 10:48 pm
ಸಂಪುಟ ವಿಸ್ತರಣೆ ವಿಳಂಬ ; ಪ್ರಕೃತಿ ವಿಕೋಪ ಮೇಲುಸ್ತು...
25-06-26 02:39 pm
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
25-06-26 09:40 pm
HK News Staffer
ಮಂಡ್ಯದಲ್ಲಿ ಸೆಲ್ಫಿ ಹುಚ್ಚಿಗೆ ಐವರ ಬಲಿ ; ಕಾವೇರಿ ನ...
25-06-26 01:00 pm
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm