ಬ್ರೇಕಿಂಗ್ ನ್ಯೂಸ್
27-06-24 01:34 pm HK News Desk ಕ್ರೈಂ
ತುಮಕೂರು, ಜೂ.26: ತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲವೊಂದು ಪತ್ತೆಯಾಗಿದೆ. ವ್ಯವಸ್ಥಿತವಾಗಿ ಮಕ್ಕಳನ್ನು ಕದ್ದು ಲಕ್ಷಾಂತರ ರೂ. ಮಾರಾಟ ಮಾಡಲಾಗಿದೆ. ಇಂತಹ ಖರ್ನಾಕ್ ಗ್ಯಾಂಗ್ ತುಮಕೂರು ಪೊಲೀಸರ ಬಲೆಗೆ ಬಿದ್ದಿದೆ.
ತುಮಕೂರಿನ ಮಹೇಶ್( 39) ಮಹಬೂಬ್ ಷರೀಫ್ ( 52) ರಾಮಕೃಷ್ಣ (53) ಹನುಮಂತರಾಜು (45) ಮುಬಾರಕ್ ಪಾಷ (44) ಸ್ಟಾಫ್ ನರ್ಸ್ ಗಳಾದ ಪೂರ್ಣಿಮಾ ( 39) ಸೌಜನ್ಯ (48) ಎಂಬ 7 ಜನರನ್ನ ಬಂಧಿಸಿದ್ದಾರೆ. ಈ ಗ್ಯಾಂಗ್ ತುಮಕೂರು ನಲ್ಲಿ 2022 ರಿಂದ ಆಕ್ಟೀವ್ ಆಗಿತ್ತು. ತುಮಕೂರು ಜಿಲ್ಲೆಯಲ್ಲಿ 9 ಮಕ್ಕಳನ್ನ ಮಾರಾಟ ಮಾಡಿದ್ದಾರೆ. 9 ಮಕ್ಕಳ ಪೈಕಿ 5 ಮಕ್ಕಳನ್ನ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಜಾಲ ಪತ್ತೆಯಾಗಿದ್ದು ಹೇಗೆ?:
ಜೂನ್ 09 ರಂದು ಮಹದೇವಮ್ಮ, ಮುಬಾರಕ್ ದಂಪತಿಯ 11 ತಿಂಗಳ ಮಗು ಕಿಡ್ನಾಪ್ ಆಗಿತ್ತು. ಗುಬ್ಬಿ ಪಟ್ಟಣ ಚನ್ನಬಸವೇಶ್ವರ ದೇವಸ್ಥಾನದ ಎದುರು ಟೆಂಟ್ ಹಾಕಿಕೊಂಡಿದ್ದ ಈ ದಂಪತಿಗಳು ಹಳ್ಳಿ ಹಳ್ಳಿಗಳಲ್ಲಿ ತಲೆ ಕೂದಲು, ಏರ್ ಪಿನ್ ಮಾರಾಟ ಮಾಡಿ ಜೀವನ ನಡೆಸುತ್ತಿದ್ರು, ಅಂದು ರಾತ್ರಿ ಟೆಂಟ್ ನಲ್ಲಿ ಮಲಗಿದ್ದ ಈ ದಂಪತಿಗಳ 11 ವರ್ಷದ ಗಂಡು ಮಗು ಬೆಳಗ್ಗೆ ವೇಳೆಗೆ ನಾಪತ್ತೆಯಾಗಿತ್ತು. ಈ ಬಗ್ಗೆ ದಂಪತಿ ಗುಬ್ಬಿ ಪೊಲೀಸರಿಗೆ ದೂರು ನೀಡಿದ್ರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಾಹಿತಿ ಮೆರೆಗೆ ಗುಬ್ಬಿ ತಾಲ್ಲೂಕಿನ ಬಿಕ್ಕೇಗುಡ್ಡದ ರಾಮಕೃಷ್ಣಪ್ಪ, ಹಾಗೂ ತುಮಕೂರಿನ ಭಾರತಿ ನಗರದ ನಿವಾಸಿ ಹನುಮಂತರಾಜು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜಾತ್ರೆಯಲ್ಲಿ ಟ್ಯಾಟೂ ಹಾಕುವ ಕೆಲಸ ಮಾಡುವ ಈ ಇಬ್ಬರು ಮಗುವನ್ನು ಕದ್ದಿದ್ದಾಗಿ ಒಪ್ಪಿಕೊಂಡ್ರು. ಅಲ್ಲದೆ ಮಕ್ಕಳ ಮಾರಾಟ ಜಾಲದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಕೂಡಲೇ ಅಲರ್ಟ್ ಆದ ಪೊಲೀಸರು ಪ್ರಕರಣದ ಕಿಂಗ್ ಪಿನ್ ಗಳಾದ ತುಮಕೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮ್ಯಾನೇಜರ್ ಆಗಿದ್ದ ಮಹೇಶ್, ಚಿಕ್ಕನಾಯನಕನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಫಾರ್ಮಶಿಸ್ಟ್ ಆಗಿದ್ದ ಮಹಬೂಬ್ ಪರೀಪ್, ಮಧುಗಿರಿ ತಾಲೂಕಿನ ದೊಡ್ಡೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟಾಫ್ ನರ್ಸ್ ಆಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪೂರ್ಣಿಮಾ, ಶಿರಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸೌಜನ್ಯ, ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮುಬಾರಕ್ ಪಾಷ್ ಎಂಬುವರನ್ನ ಬಂಧಿಸಿದ್ದಾರೆ.
ಅವಿವಾಹಿತ ಗರ್ಭಧರಿಸಿದ ಹಾಗೂ ಅಕ್ರಮವಾಗಿ ಗರ್ಭಧರಿಸಿರುವ ಮಹಿಳೆಯರನ್ನ ಪತ್ತೆ ಮಾಡಿ ಅವರಿಂದ ಮಕ್ಕಳನ್ನ ಪಡೆದುಕೊಂಡು ಮಕ್ಕಳಿಲ್ಲದವರಿಗೆ ಮಾರಾಟ ಮಾಡುತ್ತಿದ್ದರು. ಮಕ್ಕಳ ಅವಶ್ಯಕತೆ ಇರುವ ಮಹಿಳೆಯರನ್ನ ಗರ್ಭವತಿಯಾಗಿದ್ದಾರೆಂದು ಹುಳಿಯಾರಿನ ಖಾಸಗಿ ನರ್ಸಿಂಗ್ ಹೋಂ ನಲ್ಲಿ ದಾಖಲಿಸಿ ಜನನ ದಾಖಲೆ ಸೃಷ್ಟಿಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಮಕ್ಕಳ ಕಳ್ಳರ ಜಾಲ ಹೇಗೆ ಕೆಲಸ ಮಾಡ್ತಿತ್ತು:
ಅತ್ತ ಆಸ್ಪತ್ರೆಗೆ ಬರುತ್ತಿದ್ದ ಗರ್ಭಧರಿಸಿದ ಅವಿವಾಹಿತ ಮಹಿಳೆಯರನ್ನ ಗುರುತಿಸುತ್ತಿದ್ದ ನರ್ಸ್ ಸೌಜನ್ಯ ಅಂಡ್ ಪೂರ್ಣಿಮ, ಮಕ್ಕಳ ಮಾರಾಟ ಮಾಡಲು ಸಂತ್ರಸ್ತೆಯರನ್ನ ಒಪ್ಪಿಸುತ್ತಿದ್ದರು, ಇತ್ತ ಮಕ್ಕಳಿಲ್ಲದ ದಂಪತಿಗಳನ್ನು ಪತ್ತೆ ಹಚ್ಚುತ್ತಿದ್ದ ಮಹೇಶ್ ಹಾಗೂ ಮೆಹಬೂಬ್ ಷರಿಪ್, ಡೀಲ್ ಕುದಿರಿದ ಬಳಿಕ, ಮಕ್ಕಳಿಲ್ಲದ ದಂಪತಿಗಳಿಗೆ ತಲಾ ಒಂದು ಮಗುವಿಗೆ 2 ರಿಂದ 3 ಲಕ್ಷಕ್ಕೆ ಸೇಲ್ ಮಾಡುತ್ತಿದ್ದರು.
ಮಾರಾಟ ಜಾಲವನ್ನ ಬೇದಿಸಿದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ಅಭಿನಂಧಿಸಿದ್ದಾರೆ.
The Karnataka Police have unearthed a network involved in child trafficking and rescued five kids from Tumkur, police said on Wednesday. Also, police have arrested seven people, who are allegedly involved in kidnapping and selling off children to childless couples or employing them as child labourers.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm