ಬ್ರೇಕಿಂಗ್ ನ್ಯೂಸ್
03-07-24 08:04 pm Mangalore Correspondent ಕ್ರೈಂ
ಮಂಗಳೂರು, ಜುಲೈ 2: ಫೇಸ್ಬುಕ್ ಮೂಲಕ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಲು ನೀಡಿದ ಸಲಹೆಯಂತೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ, ಮೋಸ ಹೋಗಿರುವ ಘಟನೆ ನಡೆದಿದ್ದು, ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೇಸ್ಬುಕ್ ನಲ್ಲಿ ಪರಿಚಯವಾದ ವ್ಯಕ್ತಿ ವಿಯಕಾ ವೆಬ್ ಸೈಟ್ ನಲ್ಲಿ ಸೇರುವಂತೆ ದೂರುದಾರರಿಗೆ ಸೂಚಿಸಿದ್ದು, ಅದರಂತೆ 75 ಜನರಿದ್ದ ಗ್ರೂಪ್ ನಲ್ಲಿ ಒಟ್ಟು 3 ಲಕ್ಷ ರೂ. ಹೂಡಿಕೆ ಮಾಡಿದ್ದರು. ಇದರಿಂದ ಒಮ್ಮೆಗೆ 20 ಲಕ್ಷ ರೂ. ವರೆಗೆ ಲಾಭ ಆಗಿತ್ತು. ಮತ್ತೆ ಅದೇ ವ್ಯಕ್ತಿಯ ಶಿಫಾರಸಿನಂತೆ ವ್ಯವಹಾರ ಮಾಡಿ, ಗಳಿಸಿದ ಹಣವನ್ನೆಲ್ಲ ಕಳಕೊಂಡಿದ್ದರು. ಈ ಬಗ್ಗೆ ಆತನಲ್ಲಿ ಕೇಳಿದಾಗ, ಎಕ್ಸ್ ಚೇಂಜ್ ನಲ್ಲಿ ಹೊಸ ಕಾಯಿನ್ ಬಿಡುಗಡೆ ಆಗುತ್ತಿದ್ದು, ಅದಕ್ಕೆ ಹೂಡಿಕೆ ಮಾಡಿದರೆ ತುಂಬ ಲಾಭ ಬರುತ್ತದೆ ಎಂದು ನಂಬಿಸಿದ್ದ.
ಕಳಕೊಂಡಿರುವ ಹಣವನ್ನು ಮತ್ತೆ ಗಳಿಸುವ ಉದ್ದೇಶದಿಂದ ಚಿನ್ನವನ್ನು ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆದು ಮತ್ತೆ ಹೂಡಿಕೆ ಮಾಡಲು ಆರಂಭಿಸಿದ್ದರು. ವಿಯಕಾ ಕಸ್ಟಮರ್ ಕೇರ್ ಎಂದು ಪರಿಚಯಿಸಿಕೊಂಡಿದ್ದ ರವಿಕುಮಾರ್ ಎಂಬಾತನ ಸಲಹೆಯಂತೆ ತನ್ನ ಖಾತೆಯಿಂದ 16.29 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದರು. ಇದರಲ್ಲಿ ಮತ್ತೆ ಲಾಭ ಬಂದಿರುವುದನ್ನು ತೋರಿಸಿದ್ದು, ಆ ಹಣವನ್ನು ಹಿಂತಿರುಗಿ ಪಡೆಯಲು ಹೋದಾಗ ಜೂನ್ 23ರ ವರೆಗೆ ಡಿಪಾಸಿಟ್ ಮೊಬಿಲೈಜೇಶನ್ ಅವಧಿ ಆಗಿರುವುದರಿಂದ ತೆಗೆಯಲು ಆಗುವುದಿಲ್ಲ ಎಂದು ತೋರಿಸಿತ್ತು.
ಜೂನ್ 24ರಂದು ಮತ್ತೆ ಹಣ ತೆಗೆಯಲು ಹೋದಾಗ, ಭಾರತದಲ್ಲಿ ಕಪ್ಪು ಹಣದ ಹಾವಳಿ ಇದೆ. ನಿನ್ನಲ್ಲಿ ಇರುವ ಎಲ್ಲ ಕಾಯಿನ್ ಗಳನ್ನು ಮಾರಿ ಬಿಡುವಂತೆ ಸಲಹೆ ನೀಡಿದ್ದಾನೆ. ಆನಂತರ, ವೆರಿಫಿಕೇಶನ್ ಪ್ರೊಸೆಸ್ ಆಗಬೇಕು. ಅದಕ್ಕೆ ಶೇ. 10ರಷ್ಟು ದುಡ್ಡು ಕಟ್ಟಬೇಕು ಎಂದು ತಿಳಿಸಿದ್ದಾನೆ. ದೂರುದಾರರು ನನ್ನಲ್ಲಿ ಅಷ್ಟು ಮೊತ್ತ ಇಲ್ಲವೆಂದು ಹೇಳಿದಾಗ, ಹಾಗಾದರೆ ನಿನ್ನ ಎಲ್ಲ ಹೂಡಿಕೆ ಮೊತ್ತವನ್ನು ಮುಟ್ಟುಗೋಲು ಹಾಕುತ್ತಾರೆ ಎಂದು ಹೇಳಿ ಹೆದರಿಸಿದ್ದಾನೆ. ಹೂಡಿಕೆ ಮಾಡಿದ ಹಣವನ್ನು ಮರಳಿ ನೀಡದೆ ಮೋಸ ಮಾಡಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರಿನಲ್ಲಿ ತಿಳಿಸಿದ್ದಾರೆ.
Bitcoin scam online fraud, Mangalore man looses 16 lakh rupees online. A case has been registered at the cyber police station. He was introduced to a friend via Facebook and later was suggested to join a group and later has lost 16 lakhs online.
14-01-25 03:36 pm
HK News Desk
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ; ಬಿಹಾರ ಮೂಲದ ಆರೋಪ...
13-01-25 10:48 am
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
14-01-25 08:36 pm
Mangalore Correspondent
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
Bangalore Cow Incident: ಹಸುವಿನ ಕೆಚ್ಚಲು ಕೊಯ್ದ...
13-01-25 10:48 am
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm