ಬ್ರೇಕಿಂಗ್ ನ್ಯೂಸ್
15-11-26 09:12 pm HK News Staffer ಕ್ರೈಂ
ಉಡುಪಿ, ನ.15: ಪತಿ- ಪತ್ನಿ ಪರಸ್ಪರ ತಮ್ಮ ಕೈಗಳನ್ನು ಚೂಡಿದಾರದ ಶಾಲಿನಿಂದ ಕಟ್ಟಿಕೊಂಡು ಸೀತಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮಾಬುಕಳ ಸೇತುವೆ ಬಳಿ ನಡೆದಿದೆ. ದಂಪತಿಯ ಶವಗಳು ಸೇತುವೆಯಿಂದ ಸುಮಾರು 500 ಮೀಟರ್ ದೂರ ನದಿಯಲ್ಲಿ ಪತ್ತೆಯಾಗಿವೆ.
ಮೃತರನ್ನು ಮೂಲತಃ ತುಮಕೂರು ಜಿಲ್ಲೆಯವರಾದ ಶ್ರೀನಿವಾಸ್ ಮೂರ್ತಿ ಹೆಚ್. (52) ಹಾಗೂ ಗಂಗಾ (48) ಎಂದು ಗುರುತಿಸಲಾಗಿದೆ. ದಂಪತಿ ನದಿಗೆ ಹಾರುವುದನ್ನು ಗಮನಿಸಿದ ರಿಕ್ಷಾ ಚಾಲಕರೊಬ್ಬರು ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಪರಿಶೀಲಿಸಿದಾಗ ದಂಪತಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.
ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಬಳಿಕ ಮಾಬುಕಳ ಸೇತುವೆಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಪಾಂಡೇಶ್ವರದ ಸೀತಾ ನದಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಆತ್ಮಹತ್ಯೆಗೂ ಮುನ್ನ ದಂಪತಿ ತಮ್ಮ ಕೈಗಳನ್ನು ಚೂಡಿದಾರದ ಶಾಲಿನಿಂದ ಕಟ್ಟಿಕೊಂಡಿದ್ದು, ಅದೇ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ.
ಘಟನಾ ಸ್ಥಳಕ್ಕೆ ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಂಪತಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
14-11-26 09:24 pm
HK News Desk
'ಕಾಸ್ಮೋಸ್ ಮೈಸೂರು' ದೇಶದ ಮೊದಲ ಎಲ್ಇಡಿ ಡೋಮ್ ತಾರಾಲ...
13-11-26 10:13 pm
ಬೆಂಗಳೂರು- ಮಂಗಳೂರು- ಮಡಗಾಂವ್ ವಂದೇ ಭಾರತ್ ರೈಲಿಗೆ...
13-11-26 04:23 pm
ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣ ; ವಿಡಿಯೋದಲ್ಲಿ ಕಾಣಿ...
09-11-26 07:45 pm
ಒಂದು ಕೋಟಿಗೆ 1.30 ಕೋಟಿ ಆಫರ್ ! ಹಣ ದುಪ್ಪಟ್ಟು ಪ್ಲ...
08-11-26 10:24 pm
14-11-26 10:00 am
HK News Staffer
ಚೀನಾ ಗೂಢಚಾರಿಣಿ ಬಲೆಗೆ ಎನ್ವಿಡಿಯಾ ಸಿಇಒ? ವಿವಾಹೇತ...
09-11-26 04:45 pm
ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ.. ಇಲ್ಲದಿದ್ದರೆ...
09-11-26 11:51 am
ಇಸ್ರೇಲ್ ಅಧಿಪತ್ಯ ಪಡೆಯಲು ನೆತನ್ಯಾಹು ಸೋಲು ; ಹೊಸ ಸ...
29-10-26 09:28 pm
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
15-11-26 08:22 pm
HK News Staffer
Harish Poonja, Mangalore: 'ಕಾಂಗ್ರೆಸ್ ನಂತಹ ದರಿ...
15-11-26 02:34 pm
ಸೌಜನ್ಯಾ ಪ್ರಕರಣ ಮುಂದಿಟ್ಟು ಕ್ಷೇತ್ರಕ್ಕೆ, ಧರ್ಮಸ್ಥ...
14-11-26 04:04 pm
Ravi Pujari, Mother Death: ಭೂಗತ ಪಾತಕಿ ರವಿ ಪೂಜ...
14-11-26 12:50 pm
ಭೂಗತ ಪಾತಕಿ ರವಿ ಪೂಜಾರಿ ಉಡುಪಿಗೆ ; ತಾಯಿ ಅಂತ್ಯಕ್ರ...
14-11-26 12:50 pm
15-11-26 09:12 pm
HK News Staffer
ಬೆಂಗಳೂರಿಗೆ ಹೊರಟಿದ್ದ ಬೈಂದೂರಿನ ಸಾಫ್ಟ್ವೇರ್ ಯುವಕ...
15-11-26 09:10 pm
ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯರ ನಗ್ನ ವಿಡಿಯೋ ಅಪ್ಲೋ...
13-11-26 10:23 pm
ಪಣಂಬೂರು ಬೀಚ್ ರೆಸ್ಟೋರೆಂಟ್ ನಲ್ಲಿ ಇಬ್ಬರು ಬಾಂಗ್ಲಾ...
13-11-26 10:15 pm
ಬಂಟ್ವಾಳ ; ಯುವಕನಿಗೆ ಬೊಲೆರೋ ಡಿಕ್ಕಿಪಡಿಸಿ ಕೊಲೆಯತ್...
11-11-26 03:09 pm