ಬ್ರೇಕಿಂಗ್ ನ್ಯೂಸ್
16-11-26 04:31 pm HK News Staffer ಕ್ರೈಂ
ಮಂಗಳೂರು, ನ.16: ಮೊಟ್ಟೆ ಸಾಗಾಟ ವಾಹನದಲ್ಲಿ ಅಕ್ರಮ ಜಾನುವಾರುಗಳನ್ನು ಸಾಗಿಸುತ್ತಿದ್ದ ಜಾಲವನ್ನು ಮಂಗಳೂರು ಪೊಲೀಸರು ಪತ್ತೆಹಚ್ಚಿದ್ದು ಕೇರಳದ ಕಸಾಯಿ ಖಾನೆಗೆ ಒಯ್ಯುತ್ತಿದ್ದ 16 ಎತ್ತುಗಳನ್ನು ರಕ್ಷಣೆ ಮಾಡಿದ್ದಾರೆ. ಲಾರಿ ಚಾಲಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ಪೊಲೀಸರು ಬೆಳಗಾವಿ ಜಿಲ್ಲೆಯ ಯಮಕನಮರಡಿಯಿಂದ ಕೇರಳದ ಕಾಸರಗೋಡಿಗೆ ಮಾಂಸ ಮಾಡುವ ಉದ್ದೇಶದಿಂದ ಎತ್ತುಗಳನ್ನು ಸಾಗಿಸುತ್ತಿದ್ದರು ಎಂಬುದನ್ನು ಪತ್ತೆ ಮಾಡಿದ್ದಾರೆ. ಮಂಗಳೂರು - ಕೇರಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮ ಜಾನುವಾರುಗಳ ಸಾಗಾಟದ ಬಗ್ಗೆ ಮಾಹಿತಿ ಆಧರಿಸಿ ಕಂಕನಾಡಿ ನಗರ ಠಾಣೆಯ ಪೊಲೀಸರು ಮೊಟ್ಟೆ ಸಾಗಾಟದ ಕಂಟೇನರ್ ಲಾರಿಯನ್ನು ಪಂಪ್ವೆಲ್ ಬಳಿಯಲ್ಲಿ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಲಾರಿಯ ಹಿಂಬದಿ ಮೋಟ್ಟೆ ಟ್ರೇಗಳನ್ನು ಪೇರಿಸಿಟ್ಟು ಒಳಗಿನ ಕ್ಯಾಬಿನ್ನಲ್ಲಿ 16 ಎತ್ತುಗಳನ್ನು ತುಂಬಿಸಿದ್ದರು. ಯಮಕನಮರಡಿ ನಿವಾಸಿ ದಸ್ತಗಿರ್ ಎಂಬವರಿಗೆ ಸೇರಿದ 16 ಎತ್ತುಗಳು ಇದಾಗಿದ್ದು ಮಂಗಳೂರು ಮೂಲಕ ಕೇರಳಕ್ಕೆ ಸಾಗಾಟ ಮಾಡುತ್ತಿದ್ದರು.


ಲಾರಿ ಚಾಲಕ ಮೈಸೂರಿನ ರಫೀಕ್ ( 52) ಹಾಗು ರೆಹಮಾನ್ ಎಂಬವರನ್ನು ಬಂಧಿಸಿದ್ದು
ವಶಕ್ಕೆ ಪಡೆದ 16 ಎತ್ತುಗಳನ್ನು ಕೋಣಾಜೆ ಪಜೀರ್ ನ ಗೋಶಾಲೆಗೆ ಸಾಗಿಸಿದ್ದಾರೆ. ಅಕ್ರಮ ಜಾನುವಾರು ಸಾಗಾಟ ಜಾಲದಲ್ಲಿ ಇನ್ನಷ್ಟು ಮಂದಿ ಶಾಮಿಲಾಗಿರುವ ಬಗ್ಗೆ ಮಾಹಿತಿಗಳಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
14-11-26 09:24 pm
HK News Desk
'ಕಾಸ್ಮೋಸ್ ಮೈಸೂರು' ದೇಶದ ಮೊದಲ ಎಲ್ಇಡಿ ಡೋಮ್ ತಾರಾಲ...
13-11-26 10:13 pm
ಬೆಂಗಳೂರು- ಮಂಗಳೂರು- ಮಡಗಾಂವ್ ವಂದೇ ಭಾರತ್ ರೈಲಿಗೆ...
13-11-26 04:23 pm
ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣ ; ವಿಡಿಯೋದಲ್ಲಿ ಕಾಣಿ...
09-11-26 07:45 pm
ಒಂದು ಕೋಟಿಗೆ 1.30 ಕೋಟಿ ಆಫರ್ ! ಹಣ ದುಪ್ಪಟ್ಟು ಪ್ಲ...
08-11-26 10:24 pm
16-11-26 10:56 pm
Mangaluru Staffer
ಝಾಕಿರ್ ನಾಯ್ಕ್ 'ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್' ಮೇ...
14-11-26 10:00 am
ಚೀನಾ ಗೂಢಚಾರಿಣಿ ಬಲೆಗೆ ಎನ್ವಿಡಿಯಾ ಸಿಇಒ? ವಿವಾಹೇತ...
09-11-26 04:45 pm
ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ.. ಇಲ್ಲದಿದ್ದರೆ...
09-11-26 11:51 am
ಇಸ್ರೇಲ್ ಅಧಿಪತ್ಯ ಪಡೆಯಲು ನೆತನ್ಯಾಹು ಸೋಲು ; ಹೊಸ ಸ...
29-10-26 09:28 pm
16-11-26 09:58 pm
HK News Staffer
ಮಂಗಳೂರು ವಿವಿಯಲ್ಲಿ ನ.17ರಿಂದ ಮಕ್ಕಳ ಚಲನಚಿತ್ರೋತ್ಸ...
16-11-26 06:21 pm
ಸಂತ ಅಲೋಶಿಯಸ್ ವಿಶ್ವವಿದ್ಯಾಲಯದಲ್ಲಿ ಹಿಂದಿ ಮೇಜರ್,...
16-11-26 06:19 pm
ತುಳು ಭವನದಲ್ಲಿ ನ.17ರಂದು ಹಲವು ಸಾಧಕರಿಗೆ ಗೌರವ ; ದ...
16-11-26 04:38 pm
ಹಿರಿಯೂರಿನಲ್ಲಿ ಒಮ್ಮತದ ಅಭ್ಯರ್ಥಿ, ಗ್ಯಾರಂಟಿಯಿಂದ ಆ...
16-11-26 04:28 pm
16-11-26 09:56 pm
HK News Staffer
ಮೊಟ್ಟೆ ಸಾಗಾಟ ನೆಪದಲ್ಲಿ ಕೇರಳಕ್ಕೆ ಜಾನುವಾರು ಸಾಗಣೆ...
16-11-26 04:31 pm
ಬೇಲೂರಿನಲ್ಲಿ ಎರಡು ದಿನಗಳ ಅಂತರದಲ್ಲಿ ಮತ್ತೊಬ್ಬ ಕಾಡ...
16-11-26 02:50 pm
ಕೈಗಳನ್ನು ಚೂಡಿದಾರದ ಶಾಲಿನಿಂದ ಕಟ್ಟಿಕೊಂಡು ಮಾಬುಕಳ...
15-11-26 09:12 pm
ಬೆಂಗಳೂರಿಗೆ ಹೊರಟಿದ್ದ ಬೈಂದೂರಿನ ಸಾಫ್ಟ್ವೇರ್ ಯುವಕ...
15-11-26 09:10 pm