ಬ್ರೇಕಿಂಗ್ ನ್ಯೂಸ್
16-11-26 09:56 pm HK News Staffer ಕ್ರೈಂ
ಕುಂದಾಪುರ, ನ.16: ಕೇರಳದಲ್ಲಿ ಮಾಡಿದ್ದ ಟ್ರಾಫಿಕ್ ಉಲ್ಲಂಘನೆಗಾಗಿ ದಂಡ ಕಟ್ಟಲು ಮೊಬೈಲ್‌ನಲ್ಲಿ ಇ-ಚಲನ್ ಆಪ್ ಸರ್ಚ್ ಮಾಡಿದ ವ್ಯಕ್ತಿಯೊಬ್ಬರ ಖಾತೆಯಿಂದ ಸೈಬರ್ ಅಪರಾಧಿಗಳು ಒಟ್ಟು 3,41,042 ರೂ. ಹಣವನ್ನು ವರ್ಗಾವಣೆ ಮಾಡಿಕೊಂಡ ಘಟನೆ ಕುಂದಾಪುರದಲ್ಲಿ ನಡೆದಿದೆ. ವಂಚನೆಗೀಡಾದವರು ಕುಂದಾಪುರದ ಜಾಕ್ಸನ್ ಡಿಸೋಜಾ (36) ಎಂಬವರಾಗಿದ್ದು ಪೊಲೀಸ್ ದೂರು ನೀಡಿದ್ದಾರೆ.
ಜಾಕ್ಸನ್ ಅವರು ಹಿಂದೆ ಕೇರಳಕ್ಕೆ ಹೋಗಿದ್ದಾಗ ಟ್ರಾಫಿಕ್ ಉಲ್ಲಂಘನೆ ಮಾಡಿದ್ದು ದಂಡ ಪಾವತಿಸುವ ಉದ್ದೇಶದಿಂದ ನ.11ರಂದು ಮೊಬೈಲ್‌ನಲ್ಲಿ ಕೇರಳ ಇ-ಚಲನ್ ಆಪ್ ಸರ್ಚ್ ಮಾಡಿದ್ದರು. ನ.12 ರಂದು ಮಧ್ಯಾಹ್ನ 3:30 ಗಂಟೆಗೆ ಪಿರ್ಯಾದಿದಾರರ ಮೊಬೈಲ್‌ನಲ್ಲಿ ಸಿಸ್ಟಂ ಅಪ್‌ಡೇಟ್ ಎಂದು ತೋರಿಸಿದೆ. ನಂತರ ಸಂಜೆ 5 ಗಂಟೆಯ ಸಮಯಕ್ಕೆ ಮೀನು ವಾಹನದ ಡ್ರೈವರ್‌ಗೆ 5,000 ರೂ. ಹಣವನ್ನು ಫೋನ್ ಪೇ ಮಾಡುವ ಉದ್ದೇಶದಿಂದ ಹಣ ಹಾಕಲು ಹೋದಾಗ ಬ್ಯಾಲೆನ್ಸ್ ಇರುವುದಿಲ್ಲ ಎಂದು ತೋರಿಸಿತ್ತು.
ನಂತರ ಜಾಕ್ಸನ್ ಅವರು ಬ್ಯಾಂಕ್‌ಗೆ ಹೋಗಿ ಕರೆಂಟ್ ಅಕೌಂಟ್ ಮತ್ತು ಎಸ್‌ಬಿ ಅಕೌಂಟ್ ಖಾತೆಯನ್ನು ಚೆಕ್ ಮಾಡಿದಾಗ, ಕರೆಂಟ್ ಅಕೌಂಟ್‌ನಿಂದ 98,400.18 ರೂ., 23,695 ರೂ., 25,194 ರೂ., 28,987 ರೂ., 51,430 ರೂ., 59,552 ರೂ., 5,000 ರೂ., 5,000 ರೂ. ಹಣವನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಅಲ್ಲದೆ, ಎಸ್‌ಬಿ ಅಕೌಂಟಿಗೆ 500 ರೂ. ಹಣ ಹಾಕಿ, ಎಸ್‌ಬಿ ಅಕೌಂಟ್‌ನಿಂದ 24,284 ರೂ. ಹಣವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು. ಮತ್ತು 20,000 ರೂ. ಹಣವನ್ನು ಕರೆಂಟ್ ಅಕೌಂಟ್‌ನಿಂದ ಎಸ್‌ಬಿ ಅಕೌಂಟಿಗೆ ಹಾಕಿ 5,000 ರೂ., 5,000 ರೂ., 10,000 ರೂ. ಹಣವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿದ್ದು ಪತ್ತೆಯಾಗಿದೆ. ನಂತರ ಎಸ್‌ಬಿ ಅಕೌಂಟಿಗೆ 15,000 ರೂ. ಹಾಕಿ ಮತ್ತೆ 15,000 ರೂ. ಬೇರೊಂದು ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು. ತನ್ನ ಬ್ಯಾಂಕ್ ಖಾತೆಯಿಂದ ಒಟ್ಟು 3,41,042.18 ರೂ. ಹಣವನ್ನು ಯಾರೋ ಸೈಬರ್ ಖದೀಮರು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
14-11-26 09:24 pm
HK News Desk
'ಕಾಸ್ಮೋಸ್ ಮೈಸೂರು' ದೇಶದ ಮೊದಲ ಎಲ್ಇಡಿ ಡೋಮ್ ತಾರಾಲ...
13-11-26 10:13 pm
ಬೆಂಗಳೂರು- ಮಂಗಳೂರು- ಮಡಗಾಂವ್ ವಂದೇ ಭಾರತ್ ರೈಲಿಗೆ...
13-11-26 04:23 pm
ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣ ; ವಿಡಿಯೋದಲ್ಲಿ ಕಾಣಿ...
09-11-26 07:45 pm
ಒಂದು ಕೋಟಿಗೆ 1.30 ಕೋಟಿ ಆಫರ್ ! ಹಣ ದುಪ್ಪಟ್ಟು ಪ್ಲ...
08-11-26 10:24 pm
16-11-26 10:56 pm
Mangaluru Staffer
ಝಾಕಿರ್ ನಾಯ್ಕ್ 'ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್' ಮೇ...
14-11-26 10:00 am
ಚೀನಾ ಗೂಢಚಾರಿಣಿ ಬಲೆಗೆ ಎನ್ವಿಡಿಯಾ ಸಿಇಒ? ವಿವಾಹೇತ...
09-11-26 04:45 pm
ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ.. ಇಲ್ಲದಿದ್ದರೆ...
09-11-26 11:51 am
ಇಸ್ರೇಲ್ ಅಧಿಪತ್ಯ ಪಡೆಯಲು ನೆತನ್ಯಾಹು ಸೋಲು ; ಹೊಸ ಸ...
29-10-26 09:28 pm
16-11-26 09:58 pm
HK News Staffer
ಮಂಗಳೂರು ವಿವಿಯಲ್ಲಿ ನ.17ರಿಂದ ಮಕ್ಕಳ ಚಲನಚಿತ್ರೋತ್ಸ...
16-11-26 06:21 pm
ಸಂತ ಅಲೋಶಿಯಸ್ ವಿಶ್ವವಿದ್ಯಾಲಯದಲ್ಲಿ ಹಿಂದಿ ಮೇಜರ್,...
16-11-26 06:19 pm
ತುಳು ಭವನದಲ್ಲಿ ನ.17ರಂದು ಹಲವು ಸಾಧಕರಿಗೆ ಗೌರವ ; ದ...
16-11-26 04:38 pm
ಹಿರಿಯೂರಿನಲ್ಲಿ ಒಮ್ಮತದ ಅಭ್ಯರ್ಥಿ, ಗ್ಯಾರಂಟಿಯಿಂದ ಆ...
16-11-26 04:28 pm
16-11-26 09:56 pm
HK News Staffer
ಮೊಟ್ಟೆ ಸಾಗಾಟ ನೆಪದಲ್ಲಿ ಕೇರಳಕ್ಕೆ ಜಾನುವಾರು ಸಾಗಣೆ...
16-11-26 04:31 pm
ಬೇಲೂರಿನಲ್ಲಿ ಎರಡು ದಿನಗಳ ಅಂತರದಲ್ಲಿ ಮತ್ತೊಬ್ಬ ಕಾಡ...
16-11-26 02:50 pm
ಕೈಗಳನ್ನು ಚೂಡಿದಾರದ ಶಾಲಿನಿಂದ ಕಟ್ಟಿಕೊಂಡು ಮಾಬುಕಳ...
15-11-26 09:12 pm
ಬೆಂಗಳೂರಿಗೆ ಹೊರಟಿದ್ದ ಬೈಂದೂರಿನ ಸಾಫ್ಟ್ವೇರ್ ಯುವಕ...
15-11-26 09:10 pm