ಬ್ರೇಕಿಂಗ್ ನ್ಯೂಸ್
09-09-20 03:34 pm Headline Karnataka News Network ಕ್ರೈಂ
ಇಂದೋರ್, ಸೆಪ್ಟಂಬರ್ 8: ವಿಡಿಯೋ ಗೇಮ್ ಆಟ ಕೆಲವೊಮ್ಮೆ ಮಕ್ಕಳನ್ನು ಯಾವ ಕೃತ್ಯಕ್ಕೂ ಇಳಿಸಬಲ್ಲದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಇದು ನಡೆದಿರೋದು ರಾಜಸ್ಥಾನದ ಇಂದೋರ್ ನಲ್ಲಿ. ಅಲ್ಲೊಬ್ಬ ಹನ್ನೊಂದು ವರ್ಷದ ಹುಡುಗ ಹತ್ತರ ಹರೆಯದ ಬಾಲಕಿಯನ್ನು ಕಲ್ಲು ಎತ್ತಿ ಹಾಕಿ ಕೊಂದು ಹಾಕಿದ್ದಾನೆ. ಕೃತ್ಯಕ್ಕೆ ಕಾರಣ ಆಗಿದ್ದು ಹುಡುಗ- ಹುಡುಗಿ ನಡುವಿನ ವಿಡಿಯೋ ಗೇಮ್ ಆಟದ ವೈರತ್ವ ಅಂದರೆ ಯಾರು ನಂಬಲಿಕ್ಕಿಲ್ಲ.
ಹೌದು... ಇತ್ತೀಚೆಗೆ ಮನೆಯಿಂದ ಹೂವು ತರಲೆಂದು ಅಂಗಡಿಗೆ ಹೋಗಿದ್ದ ಹುಡುಗಿ ಮನೆಗೆ ಬಂದಿರಲಿಲ್ಲ. ಸಂಜೆಯಾದ್ರೂ ಮಗಳು ಬಾರದ್ದನ್ನು ಕಂಡು ಮನೆಯವರು ಗಾಬರಿಯಿಂದ ಹುಡುಕಾಡಿದ್ದಾರೆ. ಆದರೆ, ಮನೆಯಿಂದ ತುಸು ತೂರದಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಬಾಲಕಿಯ ಮುಖ ಜಜ್ಜಿಹೋಗಿದ್ದು, ರಕ್ತ ಸೋರಿಕೆಯಾಗಿ ಸಾವು ಕಂಡಿದ್ದಳು. ಅದರಂತೆ, ಬಾಲಕಿಯ ತಂದೆ ಪೊಲೀಸ್ ದೂರು ಕೊಟ್ಟಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮನೆಯ ಆವರಣದಲ್ಲಿನ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಕೊನೆಯ ಬಾರಿಗೆ ಹುಡುಗಿಯ ಜೊತೆ ಆರೋಪಿ ಹುಡುಗ ಇದ್ದುದನ್ನು ಸಿಸಿಟಿವಿಯಲ್ಲಿ ಪೊಲೀಸರು ಗಮನಿಸಿದ್ದಾರೆ. ಅದರಂತೆ, ಆಸುಪಾಸಿನ ಮಕ್ಕಳನ್ನು ಕರೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅದರಲ್ಲಿ ಒಬ್ಬಾತ, 11 ವರ್ಷದ ಹುಡುಗನೊಬ್ಬನ ಮೈಯಲ್ಲಿ ರಕ್ತದ ಕಲೆಗಳಿದ್ದುದನ್ನು ಕಂಡಿದ್ದಾಗಿ ಹೇಳಿದ್ದ. ಪೊಲೀಸರು ಸಂಶಯದಿಂದ ಸದ್ರಿ ಹುಡುಗನನ್ನು ಠಾಣೆಗೆ ಕರೆದೊಯ್ದು ಪ್ರಶ್ನೆ ಮಾಡಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ಹುಡುಗ ಸತ್ಯ ಬಾಯಿಬಿಟ್ಟಿದ್ದಾನೆ.
5ನೇ ಕ್ಲಾಸ್ ಓದ್ತಿದ್ದ ಹುಡುಗಿ ಮತ್ತು 6ನೇ ತರಗತಿ ಓದುತ್ತಿದ್ದ ಬಾಲಕ ಇಬ್ಬರು ಆನ್ ಲೈನ್ ವಿಡಿಯೋ ಗೇಮ್ ಆಡುತ್ತಿದ್ದರು. ಫ್ರೀ ಫೈರ್ ಎನ್ನುವ ಆಟದಲ್ಲಿ ಪ್ರತಿ ಬಾರಿ ಹುಡುಗಿಯೇ ಗೆಲ್ಲುತ್ತಿದ್ದಳು. ಅಲ್ಲದೆ, ಹುಡುಗಿಯ ಸೋದರನ ಜೊತೆ ಆಡವಾಡಿದ್ರೂ ಆತನಿಗೆ ಸಹಾಯ ಮಾಡಿ ಈತನನ್ನು ಸೋಲುವಂತೆ ಮಾಡುತ್ತಿದ್ದಳು ಎಂಬ ಸಿಟ್ಟು ಹುಡುಗನಲ್ಲಿತ್ತು. ಇದೇ ಕಾರಣಕ್ಕೆ ಇವರಿಬ್ಬರೂ ಜಗಳ ಮಾಡಿಕೊಂಡಿದ್ದರು. ಅದಕ್ಕೂ ಮುನ್ನ ಆರೋಪಿ ಹುಡುಗನ ಬಳಿಯಿದ್ದ ಬಿಳಿ ಮೊಲವೊಂದು ಕಾಣೆಯಾಗಿತ್ತು. ಮೊಲ ಕಾಣೆಯಾದ ಬಳಿಕ ಅದೇ ಹುಡುಗಿ ಹೊತ್ತೊಯ್ದಿರಬೇಕು. ಅದನ್ನು ಕೊಂದಿರಬೇಕು ಎಂದು ಬಾಲಕ ಸಂಶಯ ಪಟ್ಟಿದ್ದ. ಆದರೆ, ಹುಡುಗಿ ಮಾತ್ರ ಮೊಲವನ್ನು ನಾನು ಕೊಂದಿಲ್ಲ. ಅದರ ಬಗ್ಗೆ ಗೊತ್ತೇ ಇಲ್ಲ ಎನ್ನುತ್ತಿದ್ದಳು. ಮೊಲ ಮತ್ತು ವಿಡಿಯೋ ಗೇಮ್ ಆಟದ ವಿಚಾರ ಇಬ್ಬರಲ್ಲೂ ದ್ವೇಷ ಮೂಡಿಸಿತ್ತು. ಒಂದು ದಿನ ಸಂಜೆ ಹೊತ್ತಿಗೆ ಮನೆಯಿಂದ ತುಸು ದೂರದಲ್ಲಿ ಒಬ್ಬಂಟಿಯಾಗಿ ನಡೆದು ಹೋಗುತ್ತಿದ್ದ ಹುಡುಗಿ ಕಂಡಿದ್ದಾಳೆ. ಅಲ್ಲಿ ಹೋಗಿ ಜಗಳವಾಡಿದ್ದ ಹುಡುಗ, ಬಾಲಕಿಯ ಮೇಲೆ ಕಲ್ಲು ಎಸೆದಿದ್ದಾನೆ. ಅಡ್ಡ ಬಿದ್ದ ಮೇಲೂ ಬಾಲಕಿಯ ಮುಖಕ್ಕೆ ಕಲ್ಲು ಎಸೆದು ಅಲ್ಲಿಂದ ಮನೆಗೆ ಓಡಿ ಹೋಗಿದ್ದ. ಆದರೆ, ನೆಲಕ್ಕೆ ಬಿದ್ದ ಹುಡುಗಿ ರಕ್ತ ಸೋರಿಕೆಯಾಗಿ ಅಲ್ಲಿಯೇ ಸಾವನ್ನಪ್ಪಿದ್ದಳು. ಪೊಲೀಸ್ ವಿಚಾರಣೆಯಲ್ಲಿ ಹುಡುಗ ಎಲ್ಲವನ್ನೂ ಬಾಯಿ ಬಿಟ್ಟಿದ್ದಾನೆ. ಆದರೆ, ಬಾಲಕಿಯ ಹೆತ್ತವರಿಗೆ ಮಾತ್ರ ಇದನ್ನು ಒಪ್ಪಲು ತಯಾರಿಲ್ಲ. ಈ ಕೃತ್ಯವನ್ನು ಸಣ್ಣ ಹುಡುಗ ಮಾಡಲು ಸಾಧ್ಯವಿಲ್ಲ. ದೊಡ್ಡವರ ಕೈವಾಡ ಇರಬಹುದು ಎಂದು ಶಂಕಿಸಿದ್ದಾರೆ. ಹತ್ತು ವರ್ಷದ ಸಣ್ಣ ಹುಡುಗಿಯಾಗಿದ್ದರಿಂದ ಕಲ್ಲು ತಲೆಗೆ ಬಿದ್ದುದರಿಂದ ಸ್ಥಳದಲ್ಲಿಯೇ ಸಾವು ಕಂಡಿದ್ದಳು ಎನ್ನೋದು ಪೊಲೀಸರ ಹೇಳಿಕೆ.
ಏನೇ ಆದ್ರೂ ವಿಡಿಯೋ ಗೇಮ್ ಆಟ ಮಕ್ಕಳನ್ನು ಯಾವ ಮಟ್ಟಕ್ಕೂ ಇಳಿಸುತ್ತೆ ಅನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಿಲ್ಲ. ಇನ್ನಾದ್ರೂ ಆನ್ಲೈನ್ ಆಟದಲ್ಲಿ ಲೀನವಾಗುವ ಮಕ್ಕಳ ಮೇಲೆ ಹೆತ್ತವರು ನಿಗಾ ಇಡಿ.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 04:24 pm
Mangalore Correspondent
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm