ಬ್ರೇಕಿಂಗ್ ನ್ಯೂಸ್
04-06-22 08:54 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಷನ್ WhatsApp ನಲ್ಲಿ ಯಾರೂ ಊಹಿಸದಂತಹ ಅಪ್‌ಡೇಟ್ ಒಂದನ್ನು ಗುರುತಿಸಲಾಗಿದ್ದು, ಇನ್ಮುಂದೆ WhatsApp ಬಳಕೆದಾರರು ತಾವು ಕಳುಹಿಸಿರುವ ಸಂದೇಶಗಳನ್ನು ಎಡಿಟ್ ಮಾಡುವ ಹೊಸ ಆಯ್ಕೆಯನ್ನು ಪಡೆಯಲಿದ್ದಾರೆ ಎಂಬ ಸಿಹಿಸುದ್ದಿ ದೊರೆತಿದೆ. ಪ್ರಸ್ತುತ WhatsApp ಅಪ್ಲಿಕೇಷನ್‌ನಲ್ಲಿ ಒಮ್ಮೆ ಕಳುಹಿಸಿದ ಸಂದೇಶವನ್ನು ಅಳಿಸಬಹುದು. ಆದರೆ, ಅವುಗಳನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. ಆದರೆ ಮುಂಬರುವ ವೈಶಿಷ್ಟ್ಯವು ಈಗಾಗಲೇ ಕಳುಹಿಸಿದ WhatsApp ಸಂದೇಶಗಳನ್ನು ಎಡಿಟ್ ಮಾಡಲು ಅನುಮತಿಸಲಿದೆ ಎಂದು WhatsApp ಬೀಟಾ ಇನ್ಫೋ ಟ್ರ್ಯಾಕರ್ Wabetainfo ವರದಿ ಮಾಡಿದೆ. ಇದೀಗ ಈ ವೈಶಿಷ್ಟ್ಯವು WhatsApp ಬೀಟಾದದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ ಎಂದು ತಿಳಿದುಬಂದಿದೆ.
WhatsApp ನಲ್ಲಿ ಪ್ರಸ್ತುತ ಅಭಿವೃದ್ಧಿಪಡಿಸಲಾಗುತ್ತಿರುವ ಎಡಿಟ್ ಮಾಡಬಹುದಾದ ವೈಶಿಷ್ಟ್ಯದ ಸ್ಕ್ರೀನ್‌ಶಾಟ್ ಅನ್ನು Wabetainfo ಹಂಚಿಕೊಂಡಿದೆ. ಸ್ಕ್ರೀನ್‌ಶಾಟ್ ನಲ್ಲಿ ಕಾಣಿಸುತ್ತಿರುವಂತೆ, WhatsApp ಬಳಕೆದಾರರು ಕಳುಹಿಸಿದ ಸಂದೇಶವನ್ನು ಆರಿಸಿದಾಗ ಅದನ್ನು ಎಡಿಟ್ ಮಾಡುವ ಆಯ್ಕೆಯನ್ನು ತೋರಿಸುತ್ತದೆ. ಸಂದೇಶಗಳನ್ನು ನಕಲಿಸಲು ಮತ್ತು ಫಾರ್ವರ್ಡ್ ಮಾಡುವ ಆಯ್ಕೆಗಳ ಜೊತೆಗೆ ಬಳಕೆದಾರರು ಎಡಿಟ್ ಆಯ್ಕೆಯನ್ನು ಸಹ ಪಡೆಯುತ್ತಾರೆ. ಎಡಿಟ್ ಬಟನ್ ಅನ್ನು ಆಯ್ಕೆ ಮಾಡಿದ ನಂತರ, ಅದನ್ನು ಕಳುಹಿಸಿದ ನಂತರವೂ ಸಹ ಸಂದೇಶದಲ್ಲಿ ಯಾವುದೇ ಕಾಗುಣಿತ ದೋಷವನ್ನು ಸರಿಪಡಿಸಬಹುದು. ಇದರಿಂದ ತಪ್ಪಾದ ಸಂದೇಶವನ್ನು ಕಳಿಹಿಸಿದ್ದರೂ ಸಹ ಅದನ್ನು ಡಿಲೀಟ್ ಮಾಡದಂತೆಯೇ ಎಡಿಟ್ ಮಾಡುವ ಮೂಲಕ ಸರಿಪಡಿಸಬಹುದಾದ ಆಯ್ಕೆ ಬಳಕೆದಾರರಿಗೆ ಸಿಗುತ್ತಿದೆ.
![]()
ಪ್ರಸ್ತುತ ಈ ಅಪ್‌ಡೇಟ್ ಅನ್ನು ಆಂಡ್ರಾಯ್ಡ್ ನಲ್ಲಿ ಪರೀಕ್ಷಿಸಲಾಗುತ್ತಿದೆ ಹಾಗೂ iOS ಮತ್ತು ಡೆಸ್ಕ್‌ಟಾಪ್‌ಗಾಗಿ ಈ ವೈಶಿಷ್ಟ್ಯವನ್ನು ತರಲು WhatsApp ಕಾರ್ಯನಿರ್ವಹಿಸುತ್ತಿದೆ ಎಂದು Wabetainfo ವರದಿಯು ಹೇಳಿದೆ. ಆದರೆ, ಈ ವೈಶಿಷ್ಟ್ಯವು ಈಗಿನ್ನೂ ಅಭಿವೃದ್ಧಿಯ ಹಂತದಲ್ಲಿರುವುದರಿಂದ ಸಾಮಾನ್ಯ ಬಳಕೆದಾರರಿಗೆ ಸ್ಥಿರವಾದ ನವೀಕರಣಕ್ಕಾಗಿ ಯಾವಾಗ ಸಿದ್ಧವಾಗಲಿದೆ ಎಂಬುದನ್ನು ಖಚಿತಪಡಿಸಲಾಗುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. WhatsAppನಲ್ಲಿ ಎಡಿಟ್ ಆಯ್ಕೆ ಸಿಗುತ್ತಿರುವ ಇದೇ ವೇಳೆಯಲ್ಲಿ ಜನಪ್ರಿಯ ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್ Twitter ನಲ್ಲಿಯೂ ಸಹ ಎಡಿಟ್ ಬಟನ್‌ಗಾಗಿ ಕುತೂಹಲದಿಂದ ಕಾಯಲಾಗುತ್ತಿದೆ. ವರದಿಗಳ ಪ್ರಕಾರ, ಈ ವೈಶಿಷ್ಟ್ಯವನ್ನು ಮೊದಲು ಟ್ವಿಟರ್ ಬ್ಲೂ ಬಳಕೆದಾರರಿಗೆ ಮೊದಲು ಜಾರಿಗೆ ತರಲಾಗುತ್ತದೆ ಎನ್ನಲಾಗಿದೆ.
Whatsapp May Soon Let You Edit Messages Even After Sending Them.
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
26-01-26 05:05 pm
HK News Desk
ರೌಡಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ; ಪೊಲೀಸರ ಕೈಗೆ...
24-01-26 11:23 pm
ದೇಶದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಮಂಗಳೂರಿನ...
24-01-26 08:14 pm
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
26-01-26 03:03 pm
HK News Desk
ಅಮಾನ್ಯ ನೋಟಿನ 400 ಕೋಟಿ ದರೋಡೆ ಪ್ರಕರಣ ; ಗುಜರಾತ್...
25-01-26 10:11 pm
Indias Biggest Robbery in Belagavi: ಇಡೀ ದೇಶದಲ...
25-01-26 09:48 am
ರಾಮಕುಂಜ ; ತಂದೆ - ಮಗನ ಜಗಳ ದುರಂತ ಅಂತ್ಯ, ಚೂರಿ ಇರ...
24-01-26 11:18 pm
ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ; ಎಂಟು ಮಂ...
24-01-26 08:53 pm