ಬ್ರೇಕಿಂಗ್ ನ್ಯೂಸ್
08-07-22 08:06 pm Source: Vijayakarnataka ಡಿಜಿಟಲ್ ಟೆಕ್
ವಿಶ್ವದಾದ್ಯಂತ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಸುರಕ್ಷಿತವಾಗಿಡಲು ಗೂಗಲ್ ಸಂಸ್ಥೆಯು ತೆಗೆದುಕೊಳ್ಳುವ ಪರಿಣಾಮಕಾರಿ ಕ್ರಮಗಳು ಸಹ ಸೈಬರ್ ಕ್ರಿಮಿಗಳನ್ನು ಹೊಸಕಿಹಾಕಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಡೆವಲಪರ್‌ಗಳ ರೂಪದಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ತಲುಪುತ್ತಿರುವ ಹಾಗೂ ಬ್ಯಾಂಕ್ OTP ಸೇರಿದಂತೆ ಹಲವು ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿರುವ ಹೊಸ ನಾಲ್ಕು ಕಳ್ಳ ಅಪ್ಲಿಕೇಷನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಗುರುತಿಸಲಾಗಿದ್ದು, ಈಗಾಗಲೇ 100,000+ ಬಳಕೆದಾರರಿಂದ ಡೌನ್‌ಲೋಡ್ ಮಾಡಲಾಗಿರುವ ನಾಲ್ಕು ಹೊಸ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳನ್ನು ಈಗಲೇ ಡಿಲೀಟ್ ಮಾಡಿ ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.
ಹೌದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನಾಲ್ಕು ಹೊಸ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳನ್ನು ಕಂಡುಹಿಡಿಯಲಾಗಿದ್ದು, ಈ ಅಪ್ಲಿಕೇಶನ್‌ಗಳಲ್ಲಿ ಜೋಕರ್ ಎಂಬ ಮಾಲ್‌ವೇರ್ ಪತ್ತೆಯಾಗಿದೆ. ಜೋಕರ್ ಮಾಲ್ವೇರ್ ಸಹಾಯದಿಂದ ಬಳಕೆದಾರರ ಓಟಿಪಿ ಸೇರಿದಂತೆ ಹಲವು ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿರುವುದನ್ನು ಸೈಬರ್ ತಜ್ಷರು ಕಂಡುಹಿಡಿದಿದ್ದಾರೆ. ಇದಾದ ನಂತರ ಈ ಕಳ್ಳ ಅಪ್ಲಿಕೇಶನ್‌ಗಳ ಕುರಿತು Google ಸಂಸ್ಥೆಯು ಸಹ ತಿಳಿದು, ಈ ಎಲ್ಲಾ ನಾಲ್ಕು ಅಪ್ಲಿಕೇಷನ್ಗಳನ್ನು ತನ್ನ ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ. ಆದರೆ, ಈಗಾಗಲೇ ಈ ನಾಲ್ಕು ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್ ಮಾಡಿ ಬಳಸುತ್ತಿರುವ ಗ್ರಾಹಕರು ಈ ಮಾಲ್‌ವೇರ್-ಸೋಂಕಿತ ಅಪ್ಲಿಕೇಶನ್‌ಗಳನ್ನು ಈಗಲೇ ಡಿಲೀಟ್ ಮಾಡಿ ಸುರಕ್ಷಿತರಾಗಿರಲು ಕೇಳಿಕೊಳ್ಳಲಾಗಿದೆ.
ಜೋಕರ್ ಮಾಲ್‌ವೇರ್ ಪತ್ತೆಯಾದ ನಾಲ್ಕು ಅಪ್ಲಿಕೇಶನ್‌ಗಳು ಇವು.
ಕೆಲವೊಂದು ದುರುದ್ದೇಶಪೂರಿತ ಅಪ್ಲಿಕೇಶನ್‌ಗಳನ್ನು Play Store ಸ್ಕ್ರೀನಿಂಗ್ ಪ್ರಕ್ರಿಯೆಯಲ್ಲಿ ಪತ್ತೆಹಚ್ಚಲು ಕಷ್ಟವಾಗುತ್ತದೆ. Google ನಿಂದ ಮಾಡಿದ ಅಪ್ಲಿಕೇಶನ್‌ಗಳ ಸಾಮಾನ್ಯ ಭದ್ರತಾ ಸ್ಕ್ರೀನಿಂಗ್ ಅನ್ನು ಬೈಪಾಸ್ ಮಾಡಲು ಹ್ಯಾಕರ್‌ಗಳು ಉತ್ತಮ ಮಾರ್ಗಗಳನ್ನು ಕಂಡುಕೊಂಡಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ, ನಿಮ್ಮ Android ಸ್ಮಾರ್ಟ್‌ಫೋನ್‌ನಲ್ಲಿ ನೀವು ಈ ಮೇಲಿನ ನಾಲ್ಕು ಅಪ್ಲಿಕೇಶನ್‌ಗಳಲ್ಲಿ ಯಾವುದನ್ನಾದರೂ ಡೌನ್‌ಲೋಡ್ ಮಾಡಿದ್ದರೆ, ಕೂಡಲೇ ಡಿಲೀಟ್ ಮಾಡಿಬಿಡಿ. ಗೂಗಲ್ Play Store ನಿಂದಲೂ ಅಪರಿಚಿತ ಡೆವಲಪರ್‌ಗಳು ಹೋಸ್ಟ್ ಮಾಡಿರುವ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಮುನ್ನ ಎಚ್ಚರಿಕೆಯನ್ನು ವಹಿಸಿ. ವಿಶ್ವಾಸಾರ್ಹ ಮತ್ತು ಸುರಕ್ಷಿತ ಎಂದು ನಿಮಗೆ ತಿಳಿದಿರುವ ಕಂಪನಿಗಳು ಅಥವಾ ಸಾಕಷ್ಟು ಜನರು ರಿವ್ಯೂ ಮಾಡಿರುವ ಉತ್ತಮ ಅಪ್ಲಿಕೇಷನ್‌ಗಳನ್ನು ಮಾತ್ರ ಡೌನ್‌ಲೋಡ್ ಮಾಡಿ.
Four New Malicious Apps Have Been Discovered On The Google Play Store.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm