ಬ್ರೇಕಿಂಗ್ ನ್ಯೂಸ್
03-02-23 08:14 pm Source: Vijayakarnataka ಡಿಜಿಟಲ್ ಟೆಕ್
ದೇಶದ ಎರಡನೇ ಅತಿ ದೊಡ್ಡ ಟೆಲಿಕಾಂ ಏರ್‌ಟೆಲ್ ತನ್ನ ಕನಿಷ್ಠ ಮಾಸಿಕ ರೀಚಾರ್ಜ್ ಯೋಜನೆ ಬೆಲೆಯನ್ನು 57 ಪ್ರತಿಶತದಷ್ಟು ಹೆಚ್ಚಿಸಿದ ಹಿನ್ನಲೆಯಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಮತ್ತು ಡೇಟಾ ಬೆಲೆಗಳು ಏರಿಕೆಯು ಡಿಜಿಟಲೀಕರಣದ ತ್ವರಿತ ಪ್ರಸರಣಕ್ಕೆ ಕಳವಳಕಾರಿಯಾಗಿದೆ. ಏರ್‌ಟೆಲ್‌ನಿಂದ ಮೊಬೈಲ್ ಸೇವೆಗಳ ದರಗಳ ಹೆಚ್ಚಳದ ಬಗ್ಗೆ ತನಗೆ ನಿಖರವಾಗಿ ತಿಳಿದಿಲ್ಲ ಮತ್ತು ಹೆಚ್ಚಳವು ಅಲ್ಪಾವಧಿಯ ಅಥವಾ ದೀರ್ಘಾವಧಿಯ ಪರಿಣಾಮವನ್ನು ಬೀರುತ್ತದೆಯೇ ಎಂದು ಪರಿಶೀಲಿಸಲು ಸಚಿವಾಲಯವು ಟೆಲಿಕಾಂ ನಿಯಂತ್ರಕ ಟ್ರಾಯ್‌ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ಡೇಟಾದ ಬೆಲೆಯಲ್ಲಿ ಏರಿಕೆ ಅಥವಾ ಸಾಧನಗಳ ಬೆಲೆಯು ಕಳವಳಕಾರಿಯಾಗಿದೆ ಏಕೆಂದರೆ ಅವುಗಳು ಕ್ಷಿಪ್ರ ಡಿಜಿಟಲೀಕರಣದಲ್ಲಿ ಅಡಚಣೆಗಳಾಗಿವೆ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ವಿಶ್ವದಾದ್ಯಂತ ಬೆಲೆಗಳ ಮೇಲೆ ಪರಿಣಾಮ ಬೀರಿದೆ ಮತ್ತು ಡೇಟಾ ಬೆಲೆಯ ಪರಿಣಾಮವನ್ನು ಪರಿಶೀಲಿಸಬೇಕಾಗಿದೆ ಎಂದು ಸಚಿವ ರಾಜೀವ್ ಚಂದ್ರಶೇಖರ್ ಅವರು ಅವರು ಹೇಳಿದ್ದು, ಡೇಟಾ ಬೆಲೆ ಏರಿಕೆ ವಿಷಯದಲ್ಲಿ ಸರ್ಕಾರವು ಮಧ್ಯಪ್ರವೇಶಿಸಲಿದೆಯಾ ಎಂಬ ಪ್ರಶ್ನೆ ಮುಡಿಸಿದೆ. ಇತ್ತೀಚಿಗಷ್ಟೇ, ಏರ್‌ಟೆಲ್ ತನ್ನ ಕನಿಷ್ಠ ರೀಚಾರ್ಜ್‌ನ ಬೆಲೆಯನ್ನು ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಉತ್ತರ ಪ್ರದೇಶ ಪಶ್ಚಿಮ ಸೇರಿದಂತೆ ಎಂಟು ವಲಯಗಳಲ್ಲಿ ಸುಮಾರು 57 ಪ್ರತಿಶತ ಏರಿಸಿದೆ.
ಏರ್‌ಟೆಲ್ ಗ್ರಾಹಕರು ತಮ್ಮ ಸಿಮ್ ಸಕ್ರೀಯವಾಗಿ ಇಟ್ಟುಕೊಳ್ಳಲು ಈ ಮೊದಲು ಇದ್ದ 99 ರೂ.ಬೆಲೆಯ ಕನಿಷ್ಠ ರೀಚಾರ್ಜ್ ಪ್ಲ್ಯಾನ್ 28 ದಿನಗಳವರೆಗೆ ವ್ಯಾಲಿಡಿಟಿಯಲ್ಲಿ 200 MBಯ ಅತ್ಯಂತ ಸೀಮಿತ ಡೇಟಾವನ್ನು ಒದಗಿಸುತ್ತಿತ್ತು. ಆದರೆ, ಈ ಯೋಜನೆಯು ಇನ್ಮುಂದೆ ಬಳಕೆದಾರರಿಗೆ ಲಭ್ಯವಿರುವುದಿಲ್ಲ. ಇದಕ್ಕೆ ವಿರುದ್ಧವಾಗಿ ಈಗ ಏರ್‌ಟೆಲ್ ಪರಿಚಯಿಸಿರುವ ಹೊಸ 155 ರೂ. ಬೆಲೆಯ ಕನಿಷ್ಠ ರೀಚಾರ್ಜ್ ಪ್ಲ್ಯಾನ್ 28 ದಿನಗಳವರೆಗೆ ಅನಿಯಮಿತ ಧ್ವನಿ, 1GB ಡೇಟಾ ಮತ್ತು 300 ಎಸ್ಸೆಮ್ಮೆಸ್‌ಗಳನ್ನು ನೀಡುತ್ತದೆ. 99 ರೂ.ಗೆ ಹೋಲಿಸಿದರೆ ಇಲ್ಲಿ ಕನಿಷ್ಠ ರೀಚಾರ್ಜ್ ಮೌಲ್ಯದಲ್ಲಿ ಶೇಕಡಾ 57ರಷ್ಟು ಏರಿಕೆಯಾಗಿದೆ ಮತ್ತು ಕೈಗೆಟುಕುವ ಬೆಲೆಯು ಹೆಚ್ಚು ಪ್ರಾಮುಖ್ಯ ಹೊಂದಿರುವ ಗ್ರಾಹಕರ ವಿಭಾಗದಲ್ಲಿ ಇದನ್ನು ಪಟ್ಟಿ ಮಾಡಲಾಗಿದೆ.
ಭಾರ್ತಿ ಏರ್‌ಟೆಲ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಅವರು ದೇಶದಲ್ಲಿ ಮೊಬೈಲ್ ರೀಚಾರ್ಜ್ ಬೆಲೆಗಳನ್ನು ಏರಿಸುವ ಬಗ್ಗೆ ಇತ್ತೀಚಿಗಷ್ಟೇ ಮಾತನಾಡಿದ್ದರು. ಇತ್ತೀಚಿಗೆ ದಾವೋಸ್‌ನಲ್ಲಿ ಮನಿ ಕಂಟ್ರೋಲ್ ತಂಡದೊಂದಿಗೆ ಮಾತನಾಡಿರುವ ಸುನಿಲ್ ಮಿತ್ತಲ್ ಅವರು, 'ದೇಶದಲ್ಲಿ ಪ್ರಸ್ತುತ ಟೆಲಿಕಾಂ ಸುಂಕಗಳು ಸಮರ್ಥನೀಯವಾಗಿಲ್ಲ. ಪ್ರತಿ ಬಳಕೆದಾರರಿಂದ (ARPU) ತಿಂಗಳಿಗೆ ಸರಾಸರಿ ಆದಾಯವು 300 ರೂಪಾಯಿಗಳನ್ನು ಮುಟ್ಟಬೇಕಿದ್ದು, ಭಾರತದ ಟೆಲಿಕಾಂ ಸೂಕ್ತವಾದ ಬೆಲೆ ವ್ಯವಸ್ಥೆ ಹೊಂದುವ ಅಗತ್ಯವಿದೆ. ದೇಶದ ಗ್ರಾಹಕರು ಪ್ರತಿ ತಿಂಗಳು 300 ರೂಪಾಯಿಗೆ 60GB ವರೆಗೆ ಬಳಸುತ್ತಿರುವುದು ಅತ್ಯಂತ ಅಗ್ಗವಾಗಿದೆ ಎಂದು ಸುನಿಲ್ ಮಿತ್ತಲ್ ಅವರು ಅಭಿಪ್ರಾಯ ಪಡುವ ಮೂಲಕ ಬೆಲೆ ಏರಿಕೆ ಬಗ್ಗೆ ಸುಳಿವು ನೀಡಿದ್ದರು.
ದೇಶದ ಟೆಲಿಕಾಂ ಕಂಪೆನಿಗಳು ಪ್ರತಿ ಬಳಕೆದಾರರಿಂದ ಪಡೆಯುತ್ತಿರುವ ಸರಾಸರಿ ಆದಾಯದಲ್ಲಿ (ARPU) ಏರ್‌ಟೆಲ್ ಈಗಲೂ ಅಗ್ರಸ್ಥಾನದಲ್ಲಿದೆ. ಜಿಯೋ ದೇಶದಲ್ಲಿ ಅತ್ಯಧಿಕ ಬಳಕೆದಾರರನ್ನು ಹೊಂದಿದ್ದರೂ ಸಹ, ದೇಶದ ಜನತೆಯಿಂದ ಸರಾಸರಿ ಹೆಚ್ಚು ಲಾಭವನ್ನು ಏರ್‌ಟೆಲ್ ಪಡೆಯತ್ತಿದೆ. ಕಳೆದ ತ್ರೈಮಾಸಿಕದ ಕೊನೆಯಲ್ಲಿ, ಏರ್‌ಟೆಲ್ ಪ್ರತಿ ತಿಂಗಳು ಬಳಕೆದಾರರಿಂದ ಪಡೆಯುತ್ತಿರುವ ಆದಾಯ 190 ರೂ. ಆಗಿದ್ದರೆ, ಜಿಯೊ 177.2 ರೂ. ಸರಾಸರಿ ಆದಾಯವನ್ನು ಪಡೆಯತ್ತಿದೆ. ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪೆನಿ ವೊಡಾಫೋನ್ ಕೇವಲ 131 ರೂ. ಆದಾಯ ಪಡೆಯುತ್ತಿದೆ. ಸರಾಸರಿ ಆದಾಯದಲ್ಲಿ ಪ್ರಸ್ತುತ 200 ರೂ.ಗೆ ಹತ್ತಿರವಿರುವ ಏರ್‌ಟೆಲ್ ಇದೀಗ ಈ ಮೊತ್ತವನ್ನು 300 ರೂ.ಗೆ ಏರಿಸುವ ಗುರಿ ಇಟ್ಟಿದೆ.
Rising Cost Of Data A Concern It Rajeev Chandrasekhar.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm