ಬ್ರೇಕಿಂಗ್ ನ್ಯೂಸ್
14-07-21 11:17 am GIZBOT Mantesh ಡಿಜಿಟಲ್ ಟೆಕ್
ಇ-ಕಾಮರ್ಸ್ ದೈತ್ಯ ಅಮೆಜಾನ್ ಒಂದಿಲ್ಲೊಂದು ಆಫರ್ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತ ಸಾಗಿದೆ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಸೇಲ್ ಆಯೋಜಿಸುತ್ತದೆ. ಅದೇ ರೀತಿ ಈಗ ಆಪಲ್ ಡೇಸ್ ಸೇಲ್ ಆಯೋಜಿಸಿದ್ದು, ಗ್ರಾಹಕರಿಗೆ ಭರ್ಜರಿ ಕೊಡುಗೆ ಘೋಷಿಸಿದೆ. ಈ ಸೇಲ್‌ನಲ್ಲಿ ಆಯ್ದ ಐಫೋನ್‌ಗಳಿಗೆ ಆಕರ್ಷಕ ರಿಯಾಯಿತಿ ತಿಳಿಸಿದೆ. ಅವುಗಳಲ್ಲಿ ಆಪಲ್‌ನ ಇತ್ತೀಚಿಗಿನ ಹೊಸ ಐಫೋನ್ 12 ಭರ್ಜರಿ ಡಿಸ್ಕೌಂಟ್ ಪ್ರೈಸ್ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.
ಹೌದು, ಅಮೆಜಾನ್ ಇ-ಕಾಮರ್ಸ್ ತಾಣವು ಆಯೋಜಿಸಿರುವ ಆಪಲ್ ಡೇಸ್ ಸೇಲ್ ಸದ್ಯ ಚಾಲ್ತಿ ಇದೆ. ಈ ಸೇಲ್ ಮೇಳವು ಇದೇ ಜುಲೈ 17 ರ ವರೆಗೂ ಚಾಲ್ತಿ ಇರಲಿದೆ. ಸೇಲ್‌ನಲ್ಲಿ ಐಫೋನ್ 12 ಫೋನ್ 9000ರೂ. ರಿಯಾಯಿತಿಯಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಗ್ರಾಹಕರು ಐಫೋನ್ 12 ಫೋನ್ ಅನ್ನು 9,000 ರೂ.ಗಳ ರಿಯಾಯಿತಿಯೊಂದಿಗೆ ಪಡೆಯಬಹುದು. ಇದಲ್ಲದೆ, ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ವಹಿವಾಟಿನಲ್ಲಿ 6,000 ರೂ.ಗಳವರೆಗೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದು ಎಂದು ಕಂಪನಿ ತಿಳಿಸಿದೆ.
79,900ರೂ. ಬೆಲೆಯ ಐಫೋನ್ 12 ಫೋನ್ 64 ಜಿಬಿ ಸ್ಟೋರೇಜ್ ಮಾಡೆಲ್ ವೈಟ್ ಕಲರ್ ರೂಪಾಂತರವು ಆಪಲ್ ಡೇಸ್ ಸೇಲ್‌ನಲ್ಲಿ ರಿಯಾಯಿತಿಯ ನಂತರ 70,900ರೂ.ಗಳ ಪ್ರೈಸ್ ಟ್ಯಾಗ್ ಪಡೆದಿದೆ. ಹಾಗಾದರೇ ಐಫೋನ್ 12 ಫೋನಿನ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಐಫೋನ್ 12 ಫೀಚರ್ಸ್
ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್ ಮೋಡ್ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.
ಹಾಗೆಯೇ ಆಪಲ್ ಡೇಸ್ ಸೇಲ್‌ನಲ್ಲಿ ಕೆಲವು ಹಳೆಯ ಐಫೋನ್‌ಗಳ ಮೇಲೆ ರಿಯಾಯಿತಿ ಘೋಷಿಸಲಾಗಿದೆ. ಐಫೋನ್ 12 ಜೊತೆಗೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಐಫೋನ್ 11, ಐಫೋನ್ ಎಕ್ಸ್‌ಆರ್, ಐಫೋನ್ ಎಕ್ಸ್, ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್, ಐಫೋನ್ 8 ಮುಂತಾದ ಫೋನ್‌ಗಳಿಗೂ ರಿಯಾಯಿತಿ ನೀಡುತ್ತಿದೆ. ಇದರೊಂದಿಗೆ ಹೆಚ್ಚುವರಿಯಾಗಿ, ಆಪಲ್ ಡೇಸ್ ಸೇಲ್‌ನಲ್ಲಿ ಹಲವಾರು ಆಪಲ್ ಐಪ್ಯಾಡ್ ಮತ್ತು ಮ್ಯಾಕ್ಬುಕ್ ಮಾದರಿಗಳು ದೊಡ್ಡ ರಿಯಾಯಿತಿ ಕೊಡುಗೆಯೊಂದಿಗೆ ಲಭ್ಯವಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಜುಲೈ 17 ರವರೆಗೆ ಮಾರಾಟ ಮುಂದುವರಿಯುತ್ತದೆ.
(Kannada Copy of Gizbot Kannada)
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm