ಬ್ರೇಕಿಂಗ್ ನ್ಯೂಸ್
14-08-25 12:12 pm HK Reporter ಉದ್ಯೋಗ
ಬೆಂಗಳೂರು, ಆ.14 : ಕಳೆದ ಎರಡು ತಿಂಗಳಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ನೇಮಕಾತಿ ಸಂಬಂಧಿಸಿ ಹತ್ತಕ್ಕೂ ಹೆಚ್ಚು ಅಧಿಸೂಚನೆ ಬಂದಿದೆ. ಜುಲೈ ತಿಂಗಳಿನಲ್ಲಿ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ಪ್ರೊಬೆಷನರಿ ಆಫೀಸರ್ ಮತ್ತು ಸ್ಪೆಷಲಿಸ್ಟ್ ಹುದ್ದೆಗಳು ಸೇರಿ ಆರು ಸಾವಿರಕ್ಕೂ ಹೆಚ್ಚು ನೇಮಕಾತಿಗೆ ಚಾಲನೆ ನೀಡಿದೆ, ಬ್ಯಾಂಕ್ ಆಫ್ ಬರೋಡಾ ಎರಡೂವರೆ ಸಾವಿರ ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದೆ.
ಪ್ರಸ್ತುತ ಆಗಸ್ಟ್ನಲ್ಲಿ ಐಬಿಪಿಎಸ್ ಕ್ಲರಿಕಲ್ ಕೇಡರ್ನ 10,227 ಮತ್ತು ಎಸ್ ಬಿಐನಿಂದ ಆರು ಸಾವಿರಕ್ಕೂ ಹೆಚ್ಚು ಕ್ಲರ್ಕ್ ಹುದ್ದೆಗಳು ಸೇರಿದಂತೆ ಬರೋಬ್ಬರಿ 17 ಸಾವಿರಕ್ಕು ಹೆಚ್ಚು ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ. ವಿವಿಧ ಅಪ್ರೆಂಟಿಸ್ ಷಿಪ್ ಗಳೂ ಸೇರಿದಂತೆ ಕಳೆದ ಜನವರಿಯಿಂದ ಈವರೆಗೆ 50,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿಗೆ ಚಾಲನೆ ನೀಡಲಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಮಟ್ಟದ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ಐಬಿಪಿಎಸ್ ನಿಂದ 6215 ಪಿಒ ಸ್ಪೆಷಲಿಸ್ಟ್, 10,227 ಕ್ಲರಿಕಲ್ ಹುದ್ದೆಗಳು, ಎಸ್ ಬಿಐನಿಂದ 6589 ಕ್ಲರಿಕಲ್ ಹುದ್ದೆಗಳ ಭರ್ತಿ, ಬ್ಯಾಂಕ್ ಆಫ್ ಬರೋಡಾದಿಂದ 2500 ಲೋಕಲ್ ಬ್ಯಾಂಕ್ ಆಫೀಸರ್ ಮತ್ತು 842 ಸ್ಪೆಷಲಿಸ್ಟ್ ಹುದ್ದೆಗಳು, ಯೂನಿಯನ್ ಬ್ಯಾಂಕ್ನಿಂದ 250 ವೆಲ್ತ್ ಮ್ಯಾನೇಜರ್, ಬ್ಯಾಂಕ್ ಆಫ್ ಮಹಾರಾಷ್ಟ್ರದಿಂದ 500 ಸ್ಪೆಷಲಿಸ್ಟ್ ಹುದ್ದೆಗಳು, ಇಂಡಿಯನ್ ಬ್ಯಾಂಕ್ 2500 ಮತ್ತು ಇಂಡಿಯನ್ ಓವರ್ಸೀಪ್ ಬ್ಯಾಂಕ್ 750 ಅಪ್ರೆಂಟಿಸ್ ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಹೆಚ್ಚಿನ ಮಾಹಿತಿಗೆ ಆಯಾ ಬ್ಯಾಂಕುಗಳ ವೆಬ್ ಸೈಟ್ ನೋಡಬಹುದು.
ಕಳೆದ ವಾರವಷ್ಟೇ ಹಣಕಾಸು ಇಲಾಖೆ ಸಂಸತ್ತಿನಲ್ಲಿ ಬ್ಯಾಂಕಿಂಗ್ ನೇಮಕಾತಿ ಕುರಿತು ಮಾಹಿತಿ ನೀಡಿತ್ತು. ಪ್ರಸಕ್ತ ವರ್ಷದ ಜೂನ್ ತನಕದ ಅಂಕಿ-ಅಂಶಗಳನ್ನು ಗಮನಿಸಿದರೆ 17,500 ಅಧಿಕಾರಿಗಳು, 12,861 ಕ್ಲರ್ಕ್ ಮತ್ತು 34,000ಕ್ಕೂ ಮಿಕ್ಕಿ ಹುದ್ದೆಗಳು ಖಾಲಿ ಉಳಿದಿವೆ. ಕಳೆದ ಐದು ವರ್ಷದಲ್ಲಿ ಬ್ಯಾಂಕಿಂಗ್ ವಲಯ ಉತ್ತಮ ಉದ್ಯೋಗಾವಕಾಶಗಳನ್ನು ನೀಡುತ್ತಿದ್ದು 1.49 ಲಕ್ಷ ಅಭ್ಯರ್ಥಿಗಳು ನೇಮಕಗೊಂಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಇನ್ನೂ 48,570 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಆದರೆ, 2020-21ರಿಂದೀಚೆಗೆ ಬ್ಯಾಂಕಿಂಗ್ ವಲಯಕ್ಕೆ ಸೇರ್ಪಡೆಗೊಳ್ಳುತ್ತಿರುವ ಉದ್ಯೋಗಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಪ್ರಸ್ತುತ 7.58 ಲಕ್ಷ ಉದ್ಯೋಗಿಗಳು ಭಾರತದ ಬ್ಯಾಂಕಿಂಗ್ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹಣಕಾಸು ಇಲಾಖೆ ತಿಳಿಸಿದೆ.
In the past two months, more than ten recruitment notifications have been issued for public sector banks across India. In July, the Institute of Banking Personnel Selection (IBPS) initiated recruitment for over 6,000 posts, including Probationary Officers and Specialist Officers. Additionally, Bank of Baroda announced vacancies for 2,500 Local Bank Officers.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
09-09-25 10:47 pm
Mangalore Correspondent
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm