Shobha Karandlaje in chikkamagaluru, BJP: ಶೋಭಾ ಗೋಬ್ಯಾಕ್ ಅಭಿಯಾನ ; ಅಧಿಕಾರಕ್ಕಾಗಿ ಪಕ್ಷಕ್ಕೆ ಬಂದವರು ಇದಕ್ಕೆಲ್ಲ ಸ್ಪಾನ್ಸರ್ ಮಾಡುತ್ತಾರೆ ; ಗರಂ ಆದ ಶೋಭಾ ಕರಂದ್ಲಾಜೆ 

24-02-24 04:06 pm       HK News Desk   ಕರ್ನಾಟಕ

ಉಡುಪಿ- ಚಿಕ್ಕಮಗಳೂರಿನ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ವಿರುದ್ದದ ಗೋ ಬ್ಯಾಕ್ ಶೋಭಾ ಅಭಿಯಾನಕ್ಕೆ ಗರಂ ಆಗಿದ್ದು, ಯಾರು ಅಧಿಕಾರಕ್ಕಾಗಿ ಪಕ್ಷಕ್ಕೆ ಬರುತ್ತಾರೋ ಅವರು ಇಂತಹ ಕೆಲಸ ಮಾಡುತ್ತಿದ್ದಾರೆ.

ಚಿಕ್ಕಮಗಳೂರು, ಫೆ.24: ಉಡುಪಿ- ಚಿಕ್ಕಮಗಳೂರಿನ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ವಿರುದ್ದದ ಗೋ ಬ್ಯಾಕ್ ಶೋಭಾ ಅಭಿಯಾನಕ್ಕೆ ಗರಂ ಆಗಿದ್ದು, ಯಾರು ಅಧಿಕಾರಕ್ಕಾಗಿ ಪಕ್ಷಕ್ಕೆ ಬರುತ್ತಾರೋ ಅವರು ಇಂತಹ ಕೆಲಸ ಮಾಡುತ್ತಿದ್ದಾರೆ. ಹಿಂದೆ ಇದ್ದ ಪಾರ್ಟಿಯಲ್ಲಿ ಇದೇ ಕೆಲಸ ಮಾಡಿಕೊಂಡು ಬಂದವರು, ಇಂತಹ ಅಭಿಯಾನಕ್ಕೆ ಸ್ಪಾನ್ಸರ್ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಯಾವುದೇ ಒಂದು ಕಂಟ್ರಾಕ್ಟರ್ ಜೊತೆ ನಾನು ಚಹಾ ಕೂಡ ಕುಡಿದಿಲ್ಲ. ಕಂಟ್ರಾಕ್ಟರ್ ಮುಖವನ್ನು ನೋಡದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಕೇಂದ್ರದ ಯೋಜನೆಗಳನ್ನ ಜನರಿಗೆ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಟಿಕೆಟ್ ಕೇಳುವವರು ವಿರೋಧ ಮಾಡುತ್ತಾರೆ, ಆದರೆ ಒಬ್ಬರನ್ನ ತೇಜೋವಧೆ ಮಾಡುವುದು ತಪ್ಪು. ಟಿಕೆಟ್ ಕೇಳುವುದು ತಪ್ಪಲ್ಲ, ಟಿಕೆಟ್ ಕೇಳುವುದಕ್ಕೂ ರೀತಿಗಳಿರುತ್ತೆ. ಯಾರದ್ದೋ ತೇಜೋವಧೆ ಮಾಡಿ ಟಿಕೆಟ್ ಕೇಳುವುದು ಸರಿಯಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ನನ್ನ ವಿರೋಧ ಮಾಡುವವರಿಗೂ ಆಹ್ವಾನ ನೀಡುತ್ತೇನೆ. ಅಭಿವೃದ್ಧಿ ಹೆಸರಲ್ಲಿ ಚರ್ಚೆ ಆಗ್ಬೇಕು. ಮುಕ್ತ ಅವಕಾಶ ಇದೆ, ಬನ್ನಿ ಚರ್ಚೆಗೆ. ಇಂತಹ ವಿರೋಧಗಳಿದ್ದಾಗ ನಾವು ಮತ್ತಷ್ಟು ಗಟ್ಟಿಯಾಗುತ್ತೇವೆ ಎಂದು ಹೇಳಿದರು. ಅಪಮಾನ, ಅನವಶ್ಯಕ ಅಪಪ್ರಚಾರ ಮಾಡುವುದು ಸರಿಯಲ್ಲ. ಯಾರೋ ವಿರೋಧ, ಪರ ಮಾತನಾಡಿದರೂ, ಅಭಿಯಾನ ಮಾಡಿದರು ಅಂತ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

Campaign against Shobha Karandlaje in chikkamagaluru, Shobha turns angry on BJP Party members.