ಬ್ರೇಕಿಂಗ್ ನ್ಯೂಸ್
12-09-24 02:34 pm HK News Desk ಕರ್ನಾಟಕ
ಉಡುಪಿ, ಸೆ.12: ಕಾರ್ಕಳ ತಾಲೂಕಿನಲ್ಲಿ ನಿರ್ಮಿಸಿರುವ ಪರಶುರಾಮ ಮೂರ್ತಿ ಅಕ್ರಮ ಪ್ರಕರಣದಲ್ಲಿ ಹೈಕೋರ್ಟ್ ನ್ಯಾಯಾಧೀಶರು ಗರಂ ಆಗಿದ್ದು, ಸಾರ್ವಜನಿಕರ ಹಣವನ್ನು ಮೂರ್ತಿಯ ಹೆಸರಲ್ಲಿ ಲೂಟಿ ಮಾಡಿದ್ದೀರಿ ಎಂದು ತರಾಟೆಗೆತ್ತಿಕೊಂಡಿದ್ದಾರೆ.
ಪರಶುರಾಮನ ಕಂಚಿನ ಮೂರ್ತಿ ನಿರ್ಮಾಣ ವಿಚಾರದಲ್ಲಿ ಅಕ್ರಮ ಎಸಗಿದ್ದಾರೆ ಎಂದು ಶಿಲ್ಪ ಕಲಾವಿದ, ಕ್ರಿಷ್ ಆರ್ಟ್ ವರ್ಲ್ಡ್ ಮುಖ್ಯಸ್ಥ ಕೃಷ್ಣ ನಾಯಕ್ ವಿರುದ್ಧ ಕಾರ್ಕಳ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸಬೇಕೆಂದು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಇದರ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರು ಗರಂ ಆಗಿದ್ದಾರೆ. ಅರ್ಜಿದಾರನ ಪರ ವಕೀಲ ಪುತ್ತೂರಿನ ಅರುಣ್ ಶ್ಯಾಮ್ ಅವರನ್ನು ನ್ಯಾಯಾಧೀಶರು ತೀವ್ರ ತರಾಟೆ ಮಾಡಿದ್ದಾರೆ.
ವಕೀಲರು ಅಕ್ರಮ ಆಗಿಲ್ಲ. ಬ್ರಾಸ್ ಮತ್ತು ಜಿಂಕ್ ಬಳಸಿ ಪ್ರತಿಮೆ ನಿರ್ಮಾಣ ಆಗಿದೆ ಎಂದು ಗಮನಸೆಳೆದಾಗ, ಕಂಚು ಮತ್ತು ಹಿತ್ತಾಳೆ ಒಂದೇನಾ ಎಂದು ನ್ಯಾಯಾಧೀಶ ಎಂ. ನಾಗಪ್ರಸನ್ನ ಪ್ರಶ್ನೆ ಮಾಡಿದರು. ಎಷ್ಟು ಅಡಿಯ ಪ್ರತಿಮೆ ಎಂದು ಕೇಳಿದಾಗ, 35 ಅಡಿಯ ಪ್ರತಿಮೆಯೆಂದು ವಕೀಲರು ಉತ್ತರಿಸಿದರು. ಅಷ್ಟು ಎತ್ತರದ ಪ್ರತಿಮೆಯಲ್ಲಿ ಎಷ್ಟು ತೂಕದ ಕಂಚು ಬೇಕಾಗುತ್ತದೆ ಎಂದು ಕೇಳಿದರು. ಬ್ರಾಸ್ ಮತ್ತು ಜಿಂಕ್ ಬಳಸಿ ಪ್ರತಿಮೆ ಮಾಡಿದ್ದಾರೆ ಎಂದು ವಕೀಲರು ಹೇಳಿದಾಗ, ಎಷ್ಟು ಕೋಟಿ ವ್ಯಯ ಮಾಡಿದ್ದೀರಿ ಎಂದು ಜಡ್ಜ್ ಕೇಳಿದ್ದಾರೆ.
1.83 ಕೋಟಿ ಮೊತ್ತದಲ್ಲಿ ಕಂಚಿನ ಪ್ರತಿಮೆಯ ಪ್ಲಾನ್ ಆಗಿತ್ತು. 1.20 ಕೋಟಿ ಅಡ್ವಾನ್ಸ್ ಕೊಡಲಾಗಿದೆ ಎಂದು ವಕೀಲರು ತಿಳಿಸಿದಾಗ, ಕಂಚಿನ ಮೂರ್ತಿಗೆ ಎಷ್ಟು ಕೇಜಿ ಕಂಚು ಬೇಕಾಗುತ್ತದೆ, ಅದರ ಮೌಲ್ಯ ಏನು ಎಂದು ಪ್ರಶ್ನಿಸಿದರು. ಈ ವೇಳೆ, ವಕೀಲರಲ್ಲಿ ಉತ್ತರ ಇರಲಿಲ್ಲ. ಎನ್ಐಟಿಕೆ ವರದಿ ಪ್ರಕಾರ, ಮೂರ್ತಿಗೆ ಕಂಚು ಬಳಕೆಯಾಗಿಲ್ಲ ಎಂದಿದೆ. ನೀವು ಬಳಸುತ್ತಿರುವ 1.83 ಕೋಟಿ ರೂಪಾಯಿ ಸಾರ್ವಜನಿಕರ ಹಣ ಅಲ್ಲವೇ.. ಬ್ರಾಸ್ ಮತ್ತು ಬ್ರಾನ್ಸ್ ಒಂದೇನಾ.. ಬ್ರಾಸ್ ಮತ್ತು ಜಿಂಕ್ ಬಳಸಿ 35 ಅಡಿಯ ಪ್ರತಿಮೆ ಮಾಡಕ್ಕಾಗುತ್ತಾ.. ನೀವು ಸಾರ್ವಜನಿಕ ದುಡ್ಡನ್ನು ಲೂಟಿ ಮಾಡಿದ್ದೀರಿ, ಕಳಪೆ ವಸ್ತುಗಳನ್ನು ಬಳಸಿ ಮೂರ್ತಿ ಮಾಡುವುದಕ್ಕೆ ಜನರ ದುಡ್ಡನ್ನು ಬಳಕೆ ಮಾಡಿದ್ದೀರಿ ಎಂದು ಗದರಿದ್ದಾರೆ.
ಪುಣ್ಯಕ್ಕೆ ಮೂರ್ತಿ ಅರ್ಧಕ್ಕೆ ಬಿದ್ದು ಹೋಗಿಲ್ಲ. ಇದೊಂದು ಕ್ರಿಮಿನಲ್ ಅಪರಾಧ. ಇಷ್ಟೊಂದು ಹಣವನ್ನು ಖರ್ಚು ಮಾಡಿದ್ದೀರಿ, ಇದನ್ನು ರಿಟರ್ನ್ ಮಾಡೋಕೆ ರೆಡಿ ಇದ್ದೀರಾ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ. ಈವರೆಗೆ ಎಷ್ಟು ಹಣ ಬಂದಿದೆ ಎಂದು ಕೇಳಿದಾಗ, 1.20 ಕೋಟಿ ಹಣವನ್ನು ಅಡ್ವಾನ್ಸ್ ಅಂತ ನೀಡಲಾಗಿದೆ ಎಂದರು. ಹೋ, ಅಷ್ಟು ಹಣ ಯಾಕಾಗಿ ಕೊಟ್ಟಿದ್ದೀರಿ. ಬ್ರಾಸ್, ಬ್ರಾನ್ಸ್ ಬಳಸಿ ಪ್ರತಿಮೆ ಮಾಡಲು ಕೊಟ್ಟಿದ್ದೀರಾ.. ಇಲ್ಲಿ ಕಳಪೆ ಕಾಮಗಾರಿ ಮಾಡಿದ್ದು ಎದ್ದು ಕಾಣ್ತಾ ಇದೆ. ನೀವು ಜನರ ದುಡ್ಡನ್ನು ಹಾಳು ಮಾಡಿದ್ದೀರಿ ಎಂದು ಗರಂ ಆಗಿದ್ದಾರೆ. ನ್ಯಾಯಾಧೀಶರ ಪ್ರಶ್ನೆಗಳಿಗೆ ವಕೀಲರು ಉತ್ತರ ಇಲ್ಲದೆ ಪೆಚ್ಚು ಮೋರೆ ಹಾಕುವಂತಾಯಿತು.
ಕೊನೆಗೆ, ವಿಚಾರಣೆ ಪೂರ್ತಿಗೊಳಿಸಿದ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿದೆ. ಇದೇ ವೇಳೆ ಶಿಲ್ಪಿ ಕೃಷ್ಣ ನಾಯಕ್ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ಆಗಸ್ಟ್ 20ರಂದು ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಕೋರ್ಟ್ ವಿಸ್ತರಣೆ ಮಾಡಿತು. ಅರ್ಜಿದಾರ ಪರವಾಗಿ ಅರುಣ್ ಶ್ಯಾಮ್ ವಾದಿಸಿದರೆ, ಪ್ರಾಸಿಕ್ಯುಶನ್ ಪರ ಹೆಚ್ಚುವರಿ ಎಸ್ ಪಿಪಿ ಬಿ.ಎನ್ ಜಗದೀಶ್, ದೂರುದಾರರ ಪರ ವಿಕೆ ಶ್ರೀಕಾಂತ್, ನಿರ್ಮಿತಿ ಕೇಂದ್ರದ ಪರ ಮಂಗಳೂರಿನ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ವಾದಿಸಿದರು.
#Karkala #ParashuramThemePark, #Highcourt judge turns angry over eating public money, video viral #arunshyam #advocatearunshyam #bangalorehighcourt pic.twitter.com/ZiKHgvAJl8
— Headline Karnataka (@hknewsonline) September 12, 2024
Karkala Parashuram Theme Park, High court judge turns angry over eating public money, video viral. Bangalore Advocate Arun Shyam was slammed by the judge for looting public money by promising to build it in bronze and later built it in brass.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm