ಬ್ರೇಕಿಂಗ್ ನ್ಯೂಸ್
10-06-21 10:53 pm Satish, Bengaluru Correspondent ಕರ್ನಾಟಕ
ಬೆಂಗಳೂರು, ಜೂನ್ 10: ಲಾಕ್ಡೌನ್ ಹೇರಿದ ಬಳಿಕ ರಾಜ್ಯದಾದ್ಯಂತ ಪೊಲೀಸರು ವಶಕ್ಕೆ ಪಡೆದಿದ್ದ ವಾಹನಗಳನ್ನು ದಂಡ ಪಡೆದು ಬಿಟ್ಟು ಬಿಡುವಂತೆ ಹೈಕೋರ್ಟ್ ಆದೇಶ ಮಾಡಿದೆ. ಇದರಿಂದ ರಾಜ್ಯದಲ್ಲಿ ಒಂದೂವರೆ ಲಕ್ಷ ವಾಹನಗಳು ಪೊಲೀಸರ ಕೈಯಿಂದ ಬಿಡುಗಡೆ ಭಾಗ್ಯ ಪಡೆಯಲಿವೆ.
ಲಾಕ್ಡೌನ್ ಉಲ್ಲಂಘಿಸಿದ ನೆಪದಲ್ಲಿ ರಾಜ್ಯದಲ್ಲಿ ವಿವಿಧೆಡೆ ಪೊಲೀಸರು ಸಾರ್ವಜನಿಕರ ವಾಹನಗಳನ್ನು ಜಪ್ತಿ ಮಾಡಿ ಕೇಸು ದಾಖಲಿಸಿದ್ದರು. ಇದರಿಂದ ರಾಜ್ಯದಲ್ಲಿ ಅಂದಾಜು 1.51 ಲಕ್ಷ ವಾಹನಗಳು ಸೀಜ್ ಆಗಿದ್ದು ಅಡಕತ್ತರಿಗೆ ಸಿಲುಕಿದ್ದವು.
ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ವಶಕ್ಕೆ ಪಡೆದ ವಾಹನಗಳನ್ನು ದಂಡ ಪಡೆದು ಬಿಟ್ಟು ಬಿಡುವಂತೆ ಇದೀಗ ಕೋರ್ಟ್ ಸೂಚನೆ ನೀಡಿದೆ. ಇದರ ಪ್ರಕಾರ, 1.37 ಲಕ್ಷ ದ್ವಿಚಕ್ರ ವಾಹನಗಳು ತಲಾ 500 ರೂ. ದಂಡ ಭರಿಸಬೇಕು. 7400 ನಾಲ್ಕು ಚಕ್ರದ ವಾಹನಗಳು ಒಂದು ಸಾವಿರ ರೂ. ದಂಡ, 7100 ಇತರ ಮಾದರಿಯ ವಾಹನಗಳು ರೂ. 2 ಸಾವಿರ ದಂಡ ತೆರಬೇಕು. ಇದರ ಜೊತೆಗೆ ಸೆಕ್ಷನ್ 102(3) ಪ್ರಕಾರ ಬಾಂಡ್ ನೀಡಬೇಕಿದೆ.
ಬಾಂಡ್ ಪ್ರಕಾರ, ವಾಹನಗಳ ಮಾಲೀಕರು ಇನ್ನು ಯಾವುದೇ ರೀತಿಯಲ್ಲಿ ಲಾಕ್ಡೌನ್ ಆದೇಶವನ್ನು ಉಲ್ಲಂಘಿಸಬಾರದು ಎಂದು ಷರತ್ತು ಬರೆಸಿಕೊಂಡು ಪೊಲೀಸರು ವಾಹನಗಳನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ನ್ಯಾಯಾಧೀಶ ಅಭಯ್ ಶ್ರೀನಿವಾಸ್ ಓಕಾ ಮತ್ತು ಜಸ್ಟಿಸ್ ಅರವಿಂದ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ದೊಡ್ಡ ಮಟ್ಟದಲ್ಲಿ ವಾಹನಗಳು ಸೀಜ್ ಆಗಿರುವುದರಿಂದ ಅದನ್ನು ಪಾರ್ಕ್ ಮಾಡಿ ಇಟ್ಟುಕೊಳ್ಳುವುದು ಕಷ್ಟವಾಗಿದ್ದಲ್ಲದೆ, ಲಕ್ಷಾಂತರ ಸಂಖ್ಯೆಯ ವಾಹನಗಳ ಕೇಸನ್ನು ನ್ಯಾಯಾಲಯಕ್ಕೆ ಹಸ್ತಾಂತರ ಮಾಡಿದರೆ ಅದನ್ನು ಪರಿಹರಿಸುವುದು ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ ಎನ್ನುವ ದೃಷ್ಟಿಯಿಂದ ರಾಜ್ಯ ಸರಕಾರವೇ ಹೈಕೋರ್ಟಿಗೆ ಮನವಿ ಮಾಡಿತ್ತು. ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ದಂಡ ಪಡೆದು ವಾಹನ ರಿಲೀಸ್ ಮಾಡಲು ಅವಕಾಶ ನೀಡುವಂತೆ ಕೇಳಿಕೊಂಡಿತ್ತು.
ಸಾಮಾನ್ಯವಾಗಿ ವಾಹನಗಳ ಮಾಲೀಕರು ಕೋರ್ಟಿಗೆ ಅರ್ಜಿ ಸಲ್ಲಿಸಿ, ಬಿಡಿಸಿಕೊಳ್ಳುವ ಪ್ರಕ್ರಿಯೆ ನಡೆಸಬೇಕು. ಅದಕ್ಕೆ ಸಮಯವೂ ಹಿಡಿಯುತ್ತದೆ. ವಾಹನಗಳ ಮಾಲೀಕರ ವಿರುದ್ಧ ಪೊಲೀಸರು ಸೆಕ್ಷನ್ 188 (ಪೊಲೀಸರ ಸೂಚನೆ ಪಾಲಿಸದಿರುವುದು) ಮತ್ತು ಇದರ ಜೊತೆಗೆ 2005 ರ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೆಕ್ಷನ್ 51(1) ಬಿ ಅಡಿ (ಸರಕಾರದ ಆದೇಶ ಉಲ್ಲಂಘನೆ) ಪ್ರಕರಣ ದಾಖಲಿಸಿರುತ್ತಾರೆ. ಈ ಸೆಕ್ಷನ್ ಅಡಿ ಆರೋಪಗಳಿಗೆ ಆರು ತಿಂಗಳು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಇರುತ್ತದೆ
In a partial relief to owners of around 1.51 lakh motor vehicles seized for violation of the recent lockdown norms across the State, the High Court of Karnataka on Tuesday permitted the jurisdictional police to release the vehicles by collecting a tentative fine amount as deposit.
14-12-25 03:19 pm
Bangalore Correspondent
ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನರಲ್ಲ, ಮಂತ್ರಿಗಳ...
14-12-25 02:37 pm
Earthqake, Davangere, Vijayanagara: ದಾವಣಗೆರೆ,...
13-12-25 10:47 pm
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
14-12-25 07:20 pm
HK News Desk
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಯುಡಿಎಫ್ ಅತಿ ಹೆ...
13-12-25 08:34 pm
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
14-12-25 05:48 pm
Mangalore Correspondent
ಕೇಶವನ ಬದುಕು ಬದಲಿಸಿದ ರಕ್ತಬೀಜ ! ಅಸುರೀತನದ ಜೀವನಕ್...
13-12-25 11:02 pm
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
14-12-25 05:33 pm
Udupi Correspondent
Shivamogga Double Murder: ಶಿವಮೊಗ್ಗದಲ್ಲಿ ಡಬಲ್...
13-12-25 12:51 pm
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm