ಬ್ರೇಕಿಂಗ್ ನ್ಯೂಸ್
01-03-22 05:57 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.1: ರಷ್ಯಾ ಶೆಲ್ ದಾಳಿಗೆ ಉಕ್ರೇನಿನ ಖಾರ್ಕೀವ್ ನಗರದಲ್ಲಿ ಮೃತಪಟ್ಟ ಹಾವೇರಿ ಮೂಲದ ನವೀನ್ ಬಗ್ಗೆ ಆತನ ಗೆಳೆಯ, ಜೊತೆಗೇ ರೂಮ್ ಮೇಟ್ ಆಗಿದ್ದಲ್ಲದೆ, ಅಲ್ಲಿನ ಬಂಕರಿನಡಿ ಜೊತೆಗೇ ಅವಿತುಕೊಂಡಿದ್ದ ರಾಣೆಬೆನ್ನೂರಿನ ಅಮಿತ್, ಅಲ್ಲಿನ ದುರಂತ ಸ್ಥಿತಿಯ ಬಗ್ಗೆ ಟಿವಿ ಮಾಧ್ಯಮ ಒಂದಕ್ಕೆ ಹೇಳುತ್ತಾ ತೀವ್ರ ಬೇಸರ ತೋಡಿಕೊಂಡಿದ್ದಾನೆ. ಹೊಟ್ಟೆಗೆ ಏನೂ ತಿನ್ನದೆ ಮೂರು ದಿನ ಆಗಿತ್ತು. ಬೆಳಗ್ಗೆ ಒಂದಷ್ಟು ಹೊತ್ತು ಕರ್ಫ್ಯೂ ಸಡಿಲಿಕೆ ಮಾಡುತ್ತಾರೆ. ಅಂಥ ಸಂದರ್ಭದಲ್ಲಿ ಏನಾದ್ರೂ ಸಿಗುತ್ತಾ ಅಂತ ಹೋಗಿ ಬರುತ್ತೇವೆ. ನಿನ್ನೆಯೂ ನವೀನ್ ಹೊರಗಡೆ ಹೋಗಿ, ಬಿಸ್ಕೆಟ್, ಕೋಲ್ಡ್ ಡ್ರಿಂಕ್ಸ್ ತಂದಿದ್ದ. ಇವತ್ತು ಕೂಡ ಬೆಳಗ್ಗೆ 6 ಗಂಟೆಗೆ ಎದ್ದು ಹೋಗಿದ್ದ.
ತಿನ್ನೋಕೆ ಏನಾದ್ರೂ ಸಿಗುತ್ತಾ, ಸ್ನಾಕ್ಸ್ ಸಿಗತ್ತಾ ಅಂತ ನೋಡಲು ಹೋಗಿದ್ದ. ಆದರೆ ಎಂಟು ಗಂಟೆಯಾದ್ರೂ ಬಂದಿರಲಿಲ್ಲ. ಅದರ ನಡುವೆ ನನ್ನ ಇನ್ನೊಬ್ಬ ಫ್ರೆಂಡಿಗೆ ಕರೆ ಮಾಡಿ, ಹಣ ಕಡಿಮೆ ಇದೆ, ಹಣ ಕಳಿಸು ಎಂದಿದ್ದ. ಅವನು ನವೀನ್ ಗೆ ಹಣವನ್ನೂ ಕಳಿಸಿದ್ದ. 8.10ರ ಸುಮಾರಿಗೆ ಮತ್ತೆ ಕರೆ ಮಾಡಿದೆವು. ಆದರೆ, ಅವನು ರಿಸೀವ್ ಮಾಡಿರಲಿಲ್ಲ. ಬದಲಿಗೆ, ಯಾರೋ ರಷ್ಯನ್ ಭಾಷೆ ಮಾತಾಡ್ತಿದ್ದವರು ಫೋನ್ ರಿಸೀವ್ ಮಾಡಿದ್ರು.
ನನ್ನ ಜೊತೆಗೆ ಬಂಕರಿನಲ್ಲಿ ರಷ್ಯನ್, ಇಂಗ್ಲಿಷ್ ಎರಡೂ ಗೊತ್ತಿದ್ದವರು ಇದ್ದರು, ಅವರಲ್ಲಿ ಫೋನ್ ಕೊಟ್ಟೆ. ಅಷ್ಟರಲ್ಲಿ ಈ ವ್ಯಕ್ತಿ ನೋ ಮೋರ್ ಎಂದು ಹೇಳಿದ್ದ ಆತ. ನಮಗೇನು ಮಾಡುವುದೆಂದೂ ತೋಚಲಿಲ್ಲ. ಹೊರಗಡೆ, ಬಾಂಬು, ಗುಂಡಿನ ದಾಳಿ ಆಗುತ್ತಲೇ ಇದೆ. ನಾವು ಬಂಕರಿನಡಿ ಕುಳಿತುಕೊಂಡಿದ್ದೇವೆ. ನಮ್ಮ ಬಂಕರ್ ಇದ್ದ ಜಾಗದಿಂದ 50 ಮೀಟರ್ ದೂರಕ್ಕೆ ಹೋಗಿದ್ದ ಅಷ್ಟೇ.. ಅಷ್ಟರಲ್ಲೇ ಹೀಗಾಗಿದೆ.
ನವೀನ್ ತುಂಬ ಪ್ರತಿಭಾನ್ವಿತನಾಗಿದ್ದ. ನಾಲ್ಕನೇ ವರ್ಷದಲ್ಲಿ 94 ಪರ್ಸೆಂಟ್ ಮಾರ್ಕ್ ಪಡೆದಿದ್ದ. ನಮ್ಮ ಕ್ಲಾಸಿನಲ್ಲಿ ಟಾಪರ್ ಆಗಿದ್ದ. ನಾಲ್ಕೈದು ದಿನಗಳಿಂದ ಬಂಕರಿನಡಿ ಅವಿತುಕೊಂಡಿದ್ದೇವೆ. ನಾವು ಹೊರಗೆ ಹೋಗೋಣ ಅನ್ನುತ್ತಲೇ ಇದ್ದ. ಆದರೆ ಬೇಡ ಎಂದು ತಡೆದಿದ್ದೆ. ಹೋಗೋದಿದ್ದರೆ ಒಟ್ಟಿಗೆ ಹೋಗೋಣ ಎಂದು ಕೊನೆಗೆ ನಿರ್ಧಾರಕ್ಕೆ ಬಂದಿದ್ದೆವು. ನಾವು ಮೀಡಿಯಾಕ್ಕೆ, ಭಾರತ ಸರಕಾರಕ್ಕೆ ಇಷ್ಟೊಂದು ಹೇಳ್ತಾ ಇದ್ದೇವೆ. ನಮ್ಮನ್ನು ರಕ್ಷಣೆ ಮಾಡೋಕೆ ಯಾರೂ ಬರ್ತಾ ಇಲ್ಲ.
ನಾವು ಖಾರ್ಕೀವ್ ನಗರದ ಮಧ್ಯದಲ್ಲೇ ಇದ್ದೇವೆ. ನೇಶನಲ್ ಮೆಡಿಕಲ್ ಕಾಲೇಜು ಪಕ್ಕದಲ್ಲಿಯೇ ರೂಮ್ ಮಾಡಿದ್ದೆವು. ಆದರೆ, ಈಗ ರಷ್ಯಾ ಕಡೆಯಿಂದ ಬಾಂಬ್ ದಾಳಿ ಶುರುವಾದ ಬಳಿಕ ಇಲ್ಲಿನ ಸೇನೆಯ ಸೂಚನೆಯಂತೆ ಬಂಕರಿನಡಿ ಅವಿತುಕೊಂಡಿದ್ದೇವೆ. ನಾವು ಇಲ್ಲಿ ಮೂವರು ಕನ್ನಡಿಗರಿದ್ದೆವು. ನಾನು ಅಮಿತ್, ನವೀನ್ ಮತ್ತು ಇನ್ನೊಬ್ಬ ಶ್ರೀಕಾಂತ್. ಇದಲ್ಲದೆ, ಫಸ್ಟ್ ಇಯರ್ ಓದುತ್ತಿರುವ ಬಹಳಷ್ಟು ಮಂದಿ ಇಲ್ಲಿನ ಬೇರೆ ಬೇರೆ ಕಡೆ ಇದ್ದಾರೆ. ಎಲ್ಲರೂ ಭಯದಲ್ಲಿದ್ದಾರೆ. ನಾವು ಭಾರತ ಸರಕಾರಕ್ಕೆ ಕೇಳುತ್ತಿರುವುದು ಒಂದೇ, ನಮ್ಮನ್ನು ರಕ್ಷಣೆ ಮಾಡಿ. ಇಲ್ಲಿಯೇ ಸಾಯಲು ಬಿಡಬೇಡಿ.. ಹೀಗೇ ಆದರೆ ಒಂದೊಂದೇ ದಿನ ನಾವು ಸಾಯುವ ಸ್ಥಿತಿ ಬರುತ್ತದೆ ಎಂದು ಅಮಿತ್ ಟಿವಿ ಮಾಧ್ಯಮಕ್ಕೆ ಝೂಮ್ ಟಿವಿಯಲ್ಲಿ ನೀಡಿರುವ ಲೈವ್ ಸಂದರ್ಶನದಲ್ಲಿ ಅಲವತ್ತುಕೊಂಡಿದ್ದಾರೆ.
ಮೃತ ನವೀನ್(21) ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಚಳಗೇರಿ ಗ್ರಾಮದ ನಿವಾಸಿಯಾಗಿದ್ದು, ನಾಲ್ಕು ವರ್ಷದಲ್ಲಿ ಮೆಡಿಕಲ್ ಪೂರೈಸಿ ಕೊನೆಯ ವರ್ಷದ ಇಂಟರ್ನ್ ಶಿಪ್ ಮಾಡುತ್ತಿದ್ದರು. ಅಮಿತ್ ಕೂಡ ನವೀನ್ ಜೊತೆಗೇ ಶಿಕ್ಷಣ ಪಡೆಯುತ್ತಿದ್ದಾರೆ. ರಷ್ಯಾ ದಿಢೀರ್ ದಾಳಿಯ ಬಳಿಕ ಊಟ, ನೀರಿಲ್ಲದೆ ಪರದಾಡುತ್ತಿದ್ದಾರೆ. ಕಗ್ಗತ್ತಲಿನ ನಡುವೆ ಬೆಳಕು, ಕುಡಿಯುವುದಕ್ಕೂ ನೀರು ಇಲ್ಲದೆ ದಿನ ದೂಡುತ್ತಿದ್ದಾರೆ. ಇದರ ಜೊತೆಗೆ ಅಲ್ಲಿ ರಾತ್ರಿ ವೇಳೆಗೆ ಮೈನಸ್ ವನ್ ಡಿಗ್ರಿ ಉಷ್ಣತೆಯಿದ್ದು, ನೀರು ಇದ್ದರೂ ಅದನ್ನು ಕುಡಿಯಲಾಗದ ಸ್ಥಿತಿಯಲ್ಲಿದ್ದಾರೆ.
Video of aftermath of Russian rocket strike in Kharkiv, 0801, March 1, 2022. Target seemed to be Regional Administration Building, but rocket missed. Geolocated at 50.005000, 36.236033. pic.twitter.com/QuR2xlKTSc
— Euan MacDonald (@Euan_MacDonald) March 1, 2022
The Indian student Naveen who lost his life on March 1 in Kharkiv, Ukraine, was out of the shelter to buy something from a nearby store. News agency ANI quoted Manoj Rajan, Commissioner, Karnataka SDMA, saying, “We have confirmed from MEA the unfortunate demise of Naveen Shekharappa in Ukraine. He was from Chalageri, Haveri. He had left for a nearby store to buy something. Later his friend got a call from a local official that he (Naveen) has died.”
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm