ಬ್ರೇಕಿಂಗ್ ನ್ಯೂಸ್
26-07-20 07:31 am ದೇಶ - ವಿದೇಶ
ನವ ದೆಹಲಿ (ಜುಲೈ 26); ಕೊರೋನಾ ವೈರಸ್ ಆರಂಭಕ್ಕಿಂತಲೂ ಪ್ರಸ್ತುತ ಅತಿಹೆಚ್ಚು ಅಪಾಯಕಾರಿಯಾಗಿದ್ದು, ಈ ವರ್ಷ ಆಗಸ್ಟ್ 15 ರಂದು ದೇಶ ಸ್ವಾತಂತ್ಯ್ರ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಕೊರೋನಾದಂತಹ ಸಾಂಕ್ರಾಮಿಕ ರೋಗದಿಂದ ನಾವು ಸ್ವಾತಂತ್ಯ್ರದ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಭಾರತದಲ್ಲಿ ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ 13 ಲಕ್ಷದ ಗಡಿದಾಟಿದೆ. ಕೊರೋನಾದಿಂದ ಮೃತಪಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಲೇ ಇದೆ. ಕೊರೋನಾದಿಂದಾಗಿ ಅತಿಹೆಚ್ಚು ಹಾನಿಗೊಳಗಾದ ದೇಶಗಳ ಪೈಕಿ ಅಮೆರಿಕ, ಬ್ರೆಜಿಲ್ ನಂತರದ ಮೂರನೇ ಸ್ಥಾನದಲ್ಲಿ ಭಾರತ ಸ್ಥಾನ ಪಡೆದಿದೆ.
ಈ ಹಿನ್ನೆಲೆಯಲ್ಲಿ ಇಂದಿನ ಮನ್ ಕಿ ಬಾತ್ನಲ್ಲಿ ದೇಶದ ಜನರಿಗೆ ಸಂದೇಶ ರವಾನಿಸಿರುವ ಪ್ರಧಾನಿ ನರೇಂದ್ರ ಮೋದಿ, “ಈ ವರ್ಷದ ಆಗಸ್ಟ್ 15ರ ಸ್ವಾತಂತ್ಯ್ರ ದಿನಾಚರಣೆಯನ್ನು ನಾವು ವಿಭಿನ್ನ ಸನ್ನವೇಶದಲ್ಲಿ ಆಚರಿಸುತ್ತಿದ್ದೇವೆ. ಹೀಗಾಗಿ ಈ ಸ್ವಾತಂತ್ಯ್ರದ ದಿನದಂದು ನಾವು ಸಾಂಕ್ರಾಮಿಕ ರೋಗದಿಂದ ಸ್ವಾತಂತ್ರ್ಯದ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕೆಂದು ಯುವಕರನ್ನು ಈ ದೇಶದ ಜನರನ್ನು ನಾನು ಕೋರುತ್ತೇನೆ.
ಸ್ವಾವಲಂಬಿ ಭಾರತಕ್ಕಾಗಿ ಇಡೀ ದೇಶದ ಜನ ಒಗ್ಗಟ್ಟಾಗಿ ಒಂದು ಸಂಕಲ್ಪವನ್ನು ತೆಗೆದುಕೊಳ್ಳಿ. ಹೊಸದನ್ನು ಕಲಿಯುವ ಹಾಗೂ ಕಲಿಸುವ ಸಂಕಲ್ಪ ಮತ್ತು ನಮ್ಮದನ್ನು ಶ್ರದ್ಧೆಯಿಂದ ನಿರ್ವಹಿಸುವ ಸಂಕಲ್ಪಗಳನ್ನು ತೆಗೆದುಕೊಳ್ಳಿ. ನಿಮ್ಮ ಕರ್ತವ್ಯಗಳನ್ನು ಚಾಚೂ ತಪ್ಪದೆ ಪಾಲಿಸಿ” ಎಂದು ನರೇಂದ್ರ ಮೋದಿ ಕರೆ ನೀಡಿದ್ದಾರೆ.
“ಕೊರೋನಾ ಸಾಂಕ್ರಾಮಿಕ ರೋಗದಿಂದ ದೇಶ ಹೆಚ್ಚು ಹಾನಿಗೊಳಗಾಗಿದೆ. ಆದರೆ, ಇದರ ನಡುವೆಯೂ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಅಧಿಕವಾಗಿದೆ. ನಮ್ಮ ದೇಶದಲ್ಲಿ COVID-19 ಚೇತರಿಕೆ ಪ್ರಮಾಣ ಇತರ ದೇಶಗಳಿಗಿಂತ ಉತ್ತಮವಾಗಿದೆ. ಸಂಕಷ್ಟದ ನಡುವೆಯೂ ನಾವು ಲಕ್ಷಾಂತರ ಜನರ ಪ್ರಾಣವನ್ನು ಉಳಿಸಲು ಸಾಧ್ಯವಾಗಿದೆ.
ಆದರೆ, ಕೊರೋನವೈರಸ್ ಬೆದರಿಕೆ ಇನ್ನೂ ಮುಗಿದಿಲ್ಲ. ಈ ವೈರಸ್ ಆರಂಭಕ್ಕಿಂತಲೂ ಈಗ ಹೆಚ್ಚು ಅಪಾಯಕಾರಿಯಾಗುತ್ತಿದೆ. ಹೀಗಾಗಿ ನಾವು ಸಾಕಷ್ಟು ಜಾಗರೂಕರಾಗಿರಬೇಕು. ಜನ COVID-19 ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕಾದ ಅಗತ್ಯತೆ ಇದೆ” ಎಂದು ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದಾರೆ.
ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರ ಬಳಿ ಮನವಿ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, “ಎಲ್ಲಾ ಸಮಯದಲ್ಲೂ ಮಾಸ್ಕ್ ಧರಿಸಿ ಓಡಾಡುವ ಬಗ್ಗೆ ಕೆಲವರಿಗೆ ಸಮಸ್ಯೆ ಇದೆ. ಮಾಸ್ಕ್ ಧರಿಸುವುದರಿಂದ ಕೆಲವರು ತಾವು ಆಯಾಸಕ್ಕೆ ಒಳಗಾಗುವುದಾಗಿ ಭಾವಿಸುತ್ತಾರೆ. ಮತ್ತೆ ಕೆಲವರು ಮಾತನಾಡುವ ವೇಳೆಯಲ್ಲಿ ಮಾಸ್ಕ್ ಅನ್ನು ತೆಗೆಯುತ್ತಿದ್ದಾರೆ. ನಿಮಗೆ ಮಾಸ್ಕ್ ತೆಗೆಯಬೇಕು ಎಂದೆನಿಸಿದಾಗಲೆಲ್ಲಾ ಕೊರೋನಾ ಯುದ್ಧದ ವಿರುದ್ಧ ಹೋರಾಡುತ್ತಿರುವ ವೈದ್ಯರ ಬಗ್ಗೆ ಯೋಚಿಸಿ” ಎಂದು ತಿಳಿಸಿದ್ದಾರೆ.ಇಂದು ಒಂದೇ ದಿನದಲ್ಲಿ ಭಾರತದಲ್ಲಿ 48,661 ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 13,85,522ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆಯೂ 32,063 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 705 ಸಾವುಗಳು ಸಂಭವಿಸಿವೆ. ಆದಾಗ್ಯೂ ದೇಶದಲ್ಲಿ ಶೇ.63 ಕ್ಕಿಂತ ಹೆಚ್ಚಿನ ಜನ ಚೇತರಿಸಿಕೊಳ್ಳುತ್ತಿದ್ದಾರೆ.
ಈ ನಡುವೆ ಭಾರತದಲ್ಲಿ COVID-19 ಕೊರೋನಾ ಪರೀಕ್ಷಾ ಸಾಮರ್ಥ್ಯ ಕ್ರಮೇಣ ಹೆಚ್ಚಿಸಲಾಗುತ್ತಿದೆ. ದೇಶದಾದ್ಯಂತ ಒಂದು ದಿನದಲ್ಲಿ 4.2 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
22-01-25 11:00 am
HK News Desk
Priyanka, Mohan Bhagwat; ಬೆಳಗಾವಿ ; ಮೋಹನ್ ಭಾಗವ...
21-01-25 10:59 pm
BJP MLA BP Harish, B. Y. Vijayendra, Yatnal:...
20-01-25 07:00 pm
Hassan Suicide, Online Gaming: ಅಮ್ಮಾ ನನ್ನನ್ನು...
20-01-25 04:24 pm
ಕೇಸರಿ ಮನೆಯಲ್ಲಿ ಬಣ ಬಡಿದಾಟ ಜೋರು ; ಯತ್ನಾಳ್ ಬಣದ ಎ...
19-01-25 08:30 pm
21-01-25 11:02 pm
HK News Desk
ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್ಗಳ ನಿರಂತ...
19-01-25 08:17 pm
Israel War: ಕಡೆಗೂ ಕದನ ವಿರಾಮ ಘೋಷಿಸಿದ ಇಸ್ರೇಲ್ ;...
19-01-25 06:35 pm
ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಎನ್ಎಂಡಿ...
18-01-25 06:20 pm
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
22-01-25 12:39 pm
Mangalore Correspondent
Kotekar Bank Robbery, Exclusive: ಮುಂಬೈನಲ್ಲೇ ಬ...
21-01-25 11:51 pm
Mangalore Praveen Nettaru murder case, NIA ar...
21-01-25 09:43 pm
Mangalore University, Phd courses: ಪಿಎಚ್ ಡಿ ಪ...
21-01-25 08:11 pm
Mangalore Kotekar bank robbery, president: 15...
21-01-25 07:43 pm
22-01-25 01:18 pm
Mangalore Correspondent
Mangalore cyber fraud: ಹಣ ಡಬಲ್ ಮಾಡಿಕೊಡುವ ಆಮಿಷ...
22-01-25 11:04 am
Kotekar Bank Robbery, Police Shoot: ಬ್ಯಾಂಕ್ ದ...
21-01-25 06:00 pm
Hubballi Bank Robbery, Kotekar, Bidar: ಬೀದರ್...
20-01-25 10:18 pm
Mangalore Kotekar Bank Robbery, Three Arreste...
20-01-25 07:19 pm