ಮೂರು ಬಾರಿ ಮುಖ್ಯಮಂತ್ರಿ, ಉತ್ತರದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿ ಅಧಿಕಾರಕ್ಕೇರಿಸಿದ್ದ ಗಟ್ಟಿಗ ಮುಲಾಯಂ ಸಿಂಗ್ ಇನ್ನಿಲ್ಲ 

10-10-22 12:59 pm       HK News Desk   ದೇಶ - ವಿದೇಶ

ಸಮಾಜವಾದಿ ಪಕ್ಷದ ಸ್ಥಾಪಕ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್(82) ವಿಧಿವಶರಾಗಿದ್ದಾರೆ. ಮೂರು ಬಾರಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ನವದೆಹಲಿ, ಅ.10; ಸಮಾಜವಾದಿ ಪಕ್ಷದ ಸ್ಥಾಪಕ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್(82) ವಿಧಿವಶರಾಗಿದ್ದಾರೆ. ಮೂರು ಬಾರಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, ‘ಮುಲಾಯಂ ಸಿಂಗ್ ಯಾದವ್ ಗಮನಾರ್ಹ ವ್ಯಕ್ತಿತ್ವ ಹೊಂದಿದ್ದರು. ಜನರ ಸಮಸ್ಯೆಗಳ ಬಗ್ಗೆ ಸಂವೇದನಾಶೀಲರಾಗಿದ್ದರು. ಲೋಕನಾಯಕ ಜಯಪ್ರಕಾಶ್ ನಾರಾಯಣ್ ಮತ್ತು ಡಾ.ರಾಮಮನೋಹರ್ ಲೋಹಿಯಾ ಅವರ ಆದರ್ಶಗಳನ್ನು ಜನಪ್ರಿಯಗೊಳಿಸಲು ಮುಲಾಯಂ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದು ಹೇಳಿದ್ದಾರೆ.  

PM Modi To Declare This Gujarat Village As India's 1st Solar-Powered Village

President Draupadi Murmu delivers her maiden I-Day eve speech | Full text |  Latest News India - Hindustan Times

ಮುಲಾಯಂ ಸಿಂಗ್ ಯಾದವ್ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಸಾಮಾನ್ಯ ಪರಿಸರದಿಂದ ಬಂದ ಮುಲಾಯಂ ಸಿಂಗ್ ಯಾದವ್ ಸಾಧನೆ ಅಸಾಧಾರಣ. ‘ಭೂಮಿ ಪುತ್ರ’ ಮುಲಾಯಂಜಿಯರು ಭೂಮಿಗೆ ಸಂಬಂಧಿಸಿದ ಹಿರಿಯ ನಾಯಕರಾಗಿದ್ದರು. ಎಲ್ಲ ಪಕ್ಷಗಳ ಜನರೂ ಅವರನ್ನು ಗೌರವಿಸುತ್ತಿದ್ದರು. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪಗಳು’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿದ್ದಾರೆ.

Sacrifice for grandsons proves costly for Deve Gowda, he loses Tumkur | The  News Minute

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಟ್ವೀಟ್ ಮಾಡಿದ್ದು, ‘ನನ್ನ ಬಹುಕಾಲದ ಸಹೋದ್ಯೋಗಿ ಮತ್ತು ಸ್ನೇಹಿತ ಮುಲಾಯಂ ಸಿಂಗ್ ಯಾದವ್ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪ. ಅವರು ಜಾತ್ಯತೀತ ಮತ್ತು ಸಮಾಜವಾದಿ ರಾಜಕೀಯ ಸಂಪ್ರದಾಯಗಳಿಗೆ ಬದ್ಧರಾಗಿದ್ದರು. ಅವರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ’ ಅಂತಾ ಹೇಳಿದ್ದಾರೆ. 

Yogi Adityanath crafts an image makeover | Deccan Herald

ಯುಪಿಯಲ್ಲಿ 3 ದಿನ ಶೋಕಾಚರಣೆ 

ಮುಲಾಯಂ ಸಿಂಗ್ ಯಾದವ್ ವಿಧಿವಶರಾದ ಹಿನ್ನೆಲೆ ಉತ್ತರ ಪ್ರದೇಶದಲ್ಲಿ ಮುಂದಿನ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. ರಾಜ್ಯ ಕಂಡ ಶ್ರೇಷ್ಠ ನಾಯಕನ ಅಗಲಿಕೆಗಾಗಿ ರಾಜ್ಯಾದ್ಯಂತ ಶೋಕಾಚರಣೆ ಘೋಷಿಸಲಾಗಿದ್ದು, ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

Mulayam Singh Yadav Health: Samajwadi Party workers started crying after  seeing Akhilesh Yadav in Medanta Hospital | Akhilesh Yadav को देखते ही  फूट-फूटकर रोने लगे सपा कार्यकर्ता, फिर SP अध्यक्ष ने किया

ಮೂರು ಬಾರಿ ಮುಖ್ಯಮಂತ್ರಿ, ರಕ್ಷಣಾ ಸಚಿವರಾಗಿದ್ದ ಸಿಂಗ್ 

ಮುಲಾಯಂ ಸಿಂಗ್ ಯಾದವ್ ರಾಜಕೀಯದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಭಾರತೀಯ ರಾಜಕಾರಣಿಗಳಲ್ಲಿ ಒಬ್ಬರು. ಕಾಂಗ್ರೆಸ್ ಮತ್ತು ಬಿಜೆಪಿಗೆದುರಾಗಿ ಪ್ರಾದೇಶಿಕ ಪಕ್ಷ ಕಟ್ಟಿ ಸ್ವಂತ ಬಲದಲ್ಲಿ ಅಧಿಕಾರ ಸ್ಥಾನ ಪಡೆದಿದ್ದು ಸಣ್ಣ ಸಾಧನೆಯಲ್ಲ. 1989 ರಿಂದ 1991, 1993 ರಿಂದ 1995 ಮತ್ತು 2003 ರಿಂದ 2007ರ ವರೆಗೆ ಮುಲಾಯಂ ಮೂರು ಬಾರಿ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಆಗಿದ್ದರು. ಪುತ್ರ ಅಖಿಲೇಶ್ ರಾಜಕೀಯಕ್ಕೆ ಬಂದ ಬಳಿಕ ಅನಾರೋಗ್ಯ ಮತ್ತು ವಯಸ್ಸಿನ ಕಾರಣದಿಂದ ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದರು. ಹಾಗಿದ್ದರೂ ಮುಲಾಯಂ ಸಿಂಗ್ ಯಾದವ್, ಪ್ರಸ್ತುತ ಅಜಂಗಢ ಕ್ಷೇತ್ರದ ಸಂಸದರು. 

1996-1998ರಲ್ಲಿ ಸಮ್ಮಿಶ್ರ ಸರಕಾರದಲ್ಲಿ ಮುಲಾಯಂ ಸಿಂಗ್ ಭಾರತದ ರಕ್ಷಣಾ ಸಚಿವರಾಗಿದ್ದರು. 1974-2007 ರ ನಡುವೆ ಏಳು ಅವಧಿಗೆ ಉತ್ತರ ಪ್ರದೇಶದ ಶಾಸಕರಾಗಿ ಆಯ್ಕೆಯಾಗಿದ್ದರು. 1992ರಲ್ಲಿ ಪ್ರತ್ಯೇಕ ಪಕ್ಷ ಸ್ಥಾಪಿಸಿದ ಬಳಿಕ ಮುಲಾಯಂ ಏರುಗತಿ ಪ್ರಬಲ ಎದುರಾಳಿಗಳನ್ನು ಮಣ್ಣು ಮುಕ್ಕುವಂತೆ ಮಾಡಿತ್ತು.

Mulayam Singh Yadav, the former chief minister of Uttar Pradesh and founder of the Samajwadi Party, died on Monday after prolonged illness. He was 82.Yadav was undergoing treatment at the Medanta Hospital in Gurugram since August 22. His condition deteriorated on October 2, following which he was shifted to the hospital’s Intensive Care Unit.