ಬ್ರೇಕಿಂಗ್ ನ್ಯೂಸ್
10-10-22 10:46 pm HK News Desk ದೇಶ - ವಿದೇಶ
ಕಾಸರಗೋಡು, ಅ.10: ಗಡಿನಾಡು ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರದ ಸರೋವರ ಕ್ಷೇತ್ರದಲ್ಲಿ ಬಹುಕಾಲದಿಂದ ನೆಲೆಸಿದ್ದ ದೇವರ ಮೊಸಳೆ ಬಬಿಯಾ ಮರೆಯಾಗಿದೆ. ಸ್ಥಳೀಯ ಅರ್ಚಕರು, ಭಕ್ತರಿಂದ ಬಬಿಯಾ ಅಂತಲೇ ಕರೆಸಿಕೊಂಡಿದ್ದ ಮೊಸಳೆಯ ಬಗ್ಗೆ ನಾನಾ ರೀತಿಯ ಐತಿಹ್ಯ, ನಂಬಿಕೆಗಳನ್ನು ಜನ ಹೊಂದಿದ್ದಾರೆ. ಸ್ವಾರಸ್ಯದ ಮಾಹಿತಿಗಳನ್ನು ಹೇಳುತ್ತಾರೆ.
ಹಿಂದೆ ಶೂಟ್ ಮಾಡಿದ್ದ ಬ್ರಿಟಿಷ್ ಅಧಿಕಾರಿ
ಸ್ವಾತಂತ್ರ್ಯ ಸಿಗುವುದಕ್ಕೂ ಮೊದಲು 1945ರಲ್ಲಿಯೇ ಇಲ್ಲಿನ ಕೆರೆಯಲ್ಲಿ ಮೊಸಳೆ ಇತ್ತು. ಅದಕ್ಕೂ ಹಿಂದೆ ಬ್ರಿಟಿಷರ ಕಾಲದಲ್ಲಿಯೂ ಇಲ್ಲಿ ಒಂದು ಮೊಸಳೆ ಇತ್ತಂತೆ. ಅದಕ್ಕೂ ಬಬಿಯಾ ಎಂದೇ ಹೆಸರಿತ್ತು ಎಂದು ಹೇಳುತ್ತಾರೆ, ಇಲ್ಲಿನ ಹಿರಿಯ ಅರ್ಚಕರು. ಹಿಂದೆ ಇದ್ದ ಮೊಸಳೆಯನ್ನು ಬಬಿಯಾ ಎಂದು ಯಾರು ಕರೆದರೂ ನೀರಿನಿಂದ ಮೇಲೆ ಬರುತ್ತಿತ್ತಂತೆ. ಭಕ್ತರು ನೀಡುತ್ತಿದ್ದ ಆಹಾರವನ್ನು ನೇರವಾಗಿ ಪಡೆಯುತ್ತಿತ್ತಂತೆ. ಈ ಬಗ್ಗೆ ಅರಿತ ಬ್ರಿಟಿಷ್ ಅಧಿಕಾರಿಯೊಬ್ಬ ಪ್ರಕೃತಿ ವೈಚಿತ್ರ್ಯವನ್ನು ಪರೀಕ್ಷಿಸಲೆಂಬಂತೆ ಅಲ್ಲಿಗೆ ಬಂದು ಬಬಿಯಾ ಎಂದು ಕರೆದಿದ್ದ. ಮೊಸಳೆ ನೀರಿನಿಂದ ಹೊರಗೆ ಬರುತ್ತಲೇ ತನ್ನ ಕೈಯಲ್ಲಿದ್ದ ಗನ್ ತೆಗೆದು ಅದರತ್ತ ಶೂಟ್ ಮಾಡಿ ಕೊಂದಿದ್ದ. ಆನಂತರ, ದೇವಸ್ಥಾನದಿಂದ ಹೊರಗೆ ತೆರಳುತ್ತಲೇ ಆತ ಕುಸಿದು ಬಿದ್ದು ಸತ್ತಿದ್ದನಂತೆ. ಎರಡು ದಿನಗಳ ನಂತರ ಮತ್ತೆ ಅದೇ ಕೆರೆಯಲ್ಲಿ ಬೇರೊಂದು ಮೊಸಳೆ ಪ್ರತ್ಯಕ್ಷ ಆಗಿತ್ತು. ಅದೇ ಮೊಸಳೆ ಈವರೆಗೂ ಕೆರೆಯಲ್ಲಿ ನೆಲೆಸಿತ್ತು ಎನ್ನುತ್ತಾರೆ.
ಸಂಪೂರ್ಣ ಸಸ್ಯಾಹಾರಿಯಾಗಿತ್ತೇ ಮೊಸಳೆ
ಮೊಸಳೆ ಸಾಮಾನ್ಯವಾಗಿ ಮಾಂಸಹಾರಿ. ನದಿಯಲ್ಲೋ, ಸಮುದ್ರದಲ್ಲೋ ಇದ್ದರೆ ಇತರೇ ಮೀನುಗಳನ್ನು, ನೀರು ಕುಡಿಯಲು ಬರುವ ಇನ್ನಿತರ ಪ್ರಾಣಿಗಳನ್ನು ಹಿಡಿದು ತಿನ್ನುತ್ತವೆ. ಅತ್ಯಂತ ಅಪಾಯಕಾರಿಯೂ ಹೌದು. ಆದರೆ, ಅನಂತಪುರದ ಕೆರೆಯಲ್ಲಿ ನೆಲೆಸಿದ್ದ ಮೊಸಳೆ ಅತ್ಯಂತ ಸಾಧು ಪ್ರಾಣಿಯಾಗಿತ್ತು. ಅಷ್ಟೇ ಅಲ್ಲ, ಸಸ್ಯಾಹಾರಿಯಾಗಿತ್ತು ಎನ್ನುತ್ತಾರೆ ಅರ್ಚಕರು. ದಿನವೂ ಅರ್ಚಕರು ಹಾಕುತ್ತಿದ್ದ ನೈವೇದ್ಯ ಪ್ರಸಾದ, ಅನ್ನ ಪ್ರಸಾದವನ್ನಷ್ಟೇ ತಿಂದು ಬದುಕುತ್ತಿತ್ತು. ಅರ್ಚಕರು ಬಬಿಯಾ ಹೆಸರಿಡಿದು ಕರೆದರಷ್ಟೇ ಮೇಲೆ ಬರುತ್ತಿತ್ತು. ಸಸ್ಯಾಹಾರಿ ಆಗಿಲ್ಲದಿರುತ್ತಿದ್ದರೆ ಕೆರೆಯಲ್ಲಿ ಯಾವುದೇ ಮೀನುಗಳು ಉಳಿಯುತ್ತಿರಲಿಲ್ಲ. ಸರೋವರ ಕ್ಷೇತ್ರದಲ್ಲಿ ಮೊಸಳೆಯ ರೀತಿ ಮೀನುಗಳು ಕೂಡ ಆಕರ್ಷಣೀಯ. ದೊಡ್ಡ ಗಾತ್ರದಿಂದ ಹಿಡಿದು ಸಣ್ಣ ಸಣ್ಣ ಜಾತಿಯ ಹಲವಾರು ಮೀನುಗಳಿವೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಮೀನುಗಳೂ ಮೊಸಳೆಯ ಜೊತೆಗೆ ಆಕರ್ಷಣೆ ಗಿಟ್ಟಿಸಿದ್ದವು. ಇಷ್ಟೊಂದು ಮೀನುಗಳಿದ್ದರೂ, ಮೊಸಳೆಯ ಬಾಯಿಗೆ ಆಹಾರ ಆಗುತ್ತಿರಲಿಲ್ಲ.

ದೇವಸ್ಥಾನದ ಅಂಗಣಕ್ಕೂ ಬರುತ್ತಿದ್ದ ಮೊಸಳೆ
ದೇವರ ಮೊಸಳೆಯೆಂದೇ ಹೆಸರಾಗಿದ್ದ ಬಬಿಯಾ ಕೆಲವೊಮ್ಮೆ ಕೆರೆಯಿಂದ ಮೇಲೆ ಬರುತ್ತಿತ್ತು. ಅನಂತಪುರದ ದೇವಸ್ಥಾನದ ಅಂಗಣದಲ್ಲಿ ಬಂದು ಅತ್ತಿತ್ತ ಹರಿದಾಡುತ್ತಿತ್ತು. ಅರ್ಚಕರು ಬಂದು ಅನ್ನ ಪ್ರಸಾದ ಹಾಕುವುದನ್ನು ನೇರವಾಗಿಯೇ ಸ್ವೀಕರಿಸುತ್ತಿತ್ತು. ಕೆಲವೊಮ್ಮೆ ಭಕ್ತರು ನೀಡುತ್ತಿದ್ದ ಆಹಾರವನ್ನೂ ನೇರವಾಗಿಯೇ ಸ್ವೀಕಾರ ಮಾಡಿದ್ದೂ ಇದೆಯಂತೆ. ಹೀಗಾಗಿ ಅನಂತಪುರದ ಮೊಸಳೆ ಭಕ್ತರಿಗೆ ಆಕರ್ಷಣೆ ಗಿಟ್ಟಿಸಿದ್ದರೆ, ಕುತೂಹಲಿಗರಿಗೆ ವಿಸ್ಮಯದ ವಸ್ತುವೂ ಆಗಿತ್ತು. ದೇಶದ ಬೇರೆ ಯಾವ ಮೂಲೆಯಲ್ಲಿದ್ದರೂ ಮೊಸಳೆಗಳು ನೇರವಾಗಿ ದಾಳಿ ಮಾಡುತ್ತಿದ್ದರೆ, ಅತ್ಯಂತ ಅಪಾಯಕಾರಿ ಎನಿಸಿದ್ದರೆ ಇಲ್ಲಿ ಮಾತ್ರ ಇಷ್ಟು ಸೌಮ್ಯವಾಗಿದ್ದು ಹೇಗೆ ಎನ್ನುವ ಜಿಜ್ಞಾಸೆ ಇತ್ತು.

ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಬಬಿಯಾ ಕೆರೆಯಿಂದ ಮೇಲೆ ಬಂದು ದೇವಸ್ಥಾನದ ಅಂಗಣದಲ್ಲಿ ಹರಿದಾಡಿದ್ದ ವಿಡಿಯೋ ವೈರಲ್ ಆಗಿತ್ತು. ಅರ್ಚಕರು ಮಾತ್ರ ಅದು ಹಿಂದೆಯೂ ಕೆಲವೊಮ್ಮೆ ಬರುತ್ತಿತ್ತು ಎಂದು ಹೇಳುವ ಮೂಲಕ ಹೊಸ ವಿಚಾರ ಅಲ್ಲ ಎಂದು ವೈರಲ್ ಸುದ್ದಿಗೆ ಇತಿಶ್ರೀ ಹಾಕಿದ್ದರು. ಬಬಿಯಾ ಮೊಸಳೆಗೆ ಅಂದಾಜು 80 ವರ್ಷ ಆಗಿರಬಹುದು ಎಂದು ಹೇಳುತ್ತಾರೆ, ಅರ್ಚಕರು. ಸ್ವಾತಂತ್ರ್ಯ ಸಿಗುವುದಕ್ಕೂ ಮೊದಲೇ ಇಲ್ಲಿಗೆ ಒಂಟಿ ಮೊಸಳೆ ಆಗಮಿಸಿತ್ತು. ಅದು ಎಲ್ಲಿಂದ ಬಂದಿತ್ತು ಅನ್ನೋದು ಗೊತ್ತಿಲ್ಲ. ಅದಕ್ಕೂ ಹಿಂದೆಯೂ ಮೊಸಳೆ ಇತ್ತಂತೆ. ಆನಂತರವೂ ದೇವರ ಪವಾಡ ಎನ್ನುವಂತೆ ಮೊಸಳೆ ಬಂದಿತ್ತು. ಆಸ್ತಿಕ ಭಕ್ತರಿಗೆ ದರ್ಶನ ನೀಡುತ್ತಿತ್ತು ಎನ್ನುತ್ತಾರೆ.

ಅಂತ್ಯ ಸಂಸ್ಕಾರಕ್ಕೆ ಸಾವಿರಾರು ಜನ
ಅ.10ರ ಬೆಳಗ್ಗೆ ಬಬಿಯಾ ಸಾವಿನ ಸುದ್ದಿ ಕೇಳುತ್ತಲೇ ಬೆಳಗ್ಗಿನಿಂದಲೇ ಜನ ಅನಂತಪುರಕ್ಕೆ ಬರತೊಡಗಿದ್ದರು. ಬಬಿಯಾಳನ್ನು ಅಂತಿಮ ದರ್ಶನಕ್ಕಾಗಿಯೇ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಸೋಮವಾರ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೂ ಸಾವಿರಾರು ಮಂದಿ ಅಂತಿಮ ದರ್ಶನ ಮಾಡಿದ್ದಾರೆ. ಅದರಲ್ಲಿ ರಾಜಕೀಯ ಗಣ್ಯರು, ಧಾರ್ಮಿಕ ಮುಖಂಡರೂ ಸೇರಿದ್ದಾರೆ. ಅರ್ಚಕರು, ಸ್ಥಳೀಯ ಭಜಕರು ಕ್ಷೇತ್ರದ ಸ್ವಾಮೀಜಿ ಅಸ್ತಂಗತ ಆದ ರೀತಿಯಲ್ಲೇ ವಿಶೇಷ ಗೌರವಗಳಿಂದ ಅಂತ್ಯ ಸಂಸ್ಕಾರ ನೆರೆವೇರಿಸಿದ್ದಾರೆ. ಬ್ರಾಹ್ಮಣ ಪಂಡಿತರು ವೇದ ಘೋಷಗಳನ್ನು ಪಠಿಸಿದರೆ, ಸ್ಥಳೀಯ ಭಕ್ತರು ಭಜನೆಗಳನ್ನು ಹಾಡಿದ್ದಾರೆ. ಕೊನೆಗೆ, ಮೊಸಳೆಯನ್ನು ಅರ್ಚಕರೇ ಹೊತ್ತುಕೊಂಡು ಕ್ಷೇತ್ರದ ಪಕ್ಕದಲ್ಲಿಯೇ ದಫನ ಮಾಡಿದ್ದಾರೆ. ಸೇರಿದ್ದ ಜನರು ಜಯಘೋಷಗಳನ್ನು ಹಾಕಿದ್ದಾರೆ. ಪೊಲೀಸರು ಕೂಡ ಕೈಮುಗಿದು ಸೆಲ್ಯುಟ್ ಹೊಡೆದಿದ್ದು ವಿಶೇಷವಾಗಿತ್ತು. ಒಟ್ಟಿನಲ್ಲಿ ದೇವರ ಮೊಸಳೆಯ ಅಂತಿಮ ಯಾತ್ರೆ ಕ್ಷೇತ್ರದಲ್ಲಿ ಭಾವುಕ ಕ್ಷಣಗಳನ್ನು ಹುಟ್ಟಿಸಿದ್ದವು.
ಸರೋವರ ಕ್ಷೇತ್ರದಲ್ಲಿ ದೇವರ ಮೊಸಳೆಯೆಂದೇ ಖ್ಯಾತಿ ಪಡೆದಿದ್ದ ಬಬಿಯಾ ಮರೆಯಾಗಿದ್ದು ಭಕ್ತರಲ್ಲಿ ಶೋಕ ಸೃಷ್ಟಿಸಿದೆ. ಕ್ಷೇತ್ರಕ್ಕೆ ಹೋದರೆ ಮುಂದೆ ಬಬಿಯಾ ಇರಲ್ಲ ಅನ್ನುವ ನೋವು ಕಾಡುತ್ತಿದೆ. ಹೀಗಾಗಿ ಮತ್ತೇನಾದರೂ ಮೊಸಳೆಯನ್ನು ತಂದು ಸಾಕಿಯಾರೇ ಎಂದು ಜನ ಮಾತನಾಡುತ್ತಿದ್ದಾರೆ. ಆದರೆ, ಬೇರೆ ಕಡೆಯಿಂದ ತಂದು ಸಾಕಿದರೆ ಒಬ್ಬಂಟಿಯಾಗಿ ಬದುಕಬಲ್ಲದೇ, ಅದು ಸಸ್ಯಾಹಾರಿಯಾಗಿ ಇರಬಲ್ಲದೇ, ಅಲ್ಲಿರುವ ಮೀನುಗಳು ಉಳಿದಾವೇ ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲ.
The disconsolate devotees keep flowing to Ananthapura Anantha Padmanabha Swami temple, Kasaragod to attend the funeral rites of their dearest Babiya, a mugger crocodile that ate only vegetarian food over the years. The crocodile was found dead around 10 pm on Sunday, on the south side of the lake near the temple.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 07:49 pm
Mangalore Correspondent
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
05-11-25 05:27 pm
Bangalore Correspondent
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm