ಹಿಜಾಬ್ ಜಟಾಪಟಿ ; ಅ.13ರಂದೇ ಸುಪ್ರೀಂ ಕೋರ್ಟ್ ತೀರ್ಪು ಸಾಧ್ಯತೆ

12-10-22 10:49 pm       HK News Desk   ದೇಶ - ವಿದೇಶ

ಬಹು ನಿರೀಕ್ಷಿತ ಹಿಜಾಬ್ ಕುರಿತ ಜಟಾಪಟಿ ಬಗ್ಗೆ ಸುಪ್ರೀಂ ಕೋರ್ಟ್ ಅ.13 ಅಥವಾ 14ರಂದು ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ. 

ನವದೆಹಲಿ, ಅ.12 : ಬಹು ನಿರೀಕ್ಷಿತ ಹಿಜಾಬ್ ಕುರಿತ ಜಟಾಪಟಿ ಬಗ್ಗೆ ಸುಪ್ರೀಂ ಕೋರ್ಟ್ ಅ.13 ಅಥವಾ 14ರಂದು ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ. 

ಕರ್ನಾಟಕ ರಾಜ್ಯ ಸರಕಾರ ಶಾಲೆ-ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್ ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸೆ.22 ರಂದು ತೀರ್ಪನ್ನು ಕಾಯ್ದಿರಿಸಿತ್ತು. 

ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಇದೇ ಅ.16ರಂದು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನ ಹಿಜಬ್ ವಿವಾದ ಕುರಿತು ತೀರ್ಪನ್ನು ನೀಡಲಿದ್ದಾರೆ.

Hijab ban in classroom: SC refuses urgent hearing on pleas against  Karnataka HC verdict- The New Indian Express

ಶಾಲಾ-ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿಷೇಧಿಸಿದ ರಾಜ್ಯ ಸರ್ಕಾರದ ನಿರ್ಧಾರ ಸರಿಯೋ? ತಪ್ಪೋ? ಎಂಬುದನ್ನು ನಿರ್ಧರಿಸಲಿದ್ದಾರೆ. ಸೆಪ್ಟೆಂಬರ್ 22ರ ವರೆಗೆ ನಿರಂತರ 10 ದಿನಗಳ ಕಾಲ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧೂಲಿಯಾ ಅವರಿದ್ದ ಪೀಠ ವಾದ- ಪ್ರತಿವಾದ ಆಲಿಸಿತ್ತು.

The Supreme Court is likely to pronounce its verdict on petitions challenging the Karnataka High Court judgement refusing to lift the ban on hijab in educational institutions before Justice Hemant Gupta retires this week.A bench of Justices Gupta and Sudhanshu Dhulia had reserved its judgement on the pleas on September 22 after hearing arguments in the matter for 10 days.