ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ಥಾನ ಒಂದು ; ಅಮೆರಿಕ ಅಧ್ಯಕ್ಷ ಜೋ ಬೈಡನ್ 

15-10-22 03:27 pm       HK News Desk   ದೇಶ - ವಿದೇಶ

ಪಾಕಿಸ್ತಾನವು ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಪಾಕಿಸ್ತಾನದ ವಿರುದ್ಧ ಅಮೆರಿಕದ ನಾಯಕರೊಬ್ಬರು ಈ ರೀತಿಯ ಬಹಿರಂಗ ಹೇಳಿಕೆ ನೀಡಿರುವುದು ಅಪರೂಪದ ಸನ್ನಿವೇಶವಾಗಿದ್ದು, ಪಾಕಿಸ್ತಾನದ ವಿರುದ್ಧ ಜಾಗತಿಕ ಮಟ್ಟದಲ್ಲಿ ಭಾರತದ ನಿಲುವಿಗೆ ಶಕ್ತಿ ಬಂದಂತಾಗಿದೆ.

ವಾಷಿಂಗ್ಟನ್, ಅ.15: ಪಾಕಿಸ್ತಾನವು ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಪಾಕಿಸ್ತಾನದ ವಿರುದ್ಧ ಅಮೆರಿಕದ ನಾಯಕರೊಬ್ಬರು ಈ ರೀತಿಯ ಬಹಿರಂಗ ಹೇಳಿಕೆ ನೀಡಿರುವುದು ಅಪರೂಪದ ಸನ್ನಿವೇಶವಾಗಿದ್ದು, ಪಾಕಿಸ್ತಾನದ ವಿರುದ್ಧ ಜಾಗತಿಕ ಮಟ್ಟದಲ್ಲಿ ಭಾರತದ ನಿಲುವಿಗೆ ಶಕ್ತಿ ಬಂದಂತಾಗಿದೆ.

ಲಾಸ್ ಏಂಜಲೀಸ್‌ನಲ್ಲಿ ನಡೆದ ಡೆಮಾಕ್ರಟಿಕ್ ಕಾಂಗ್ರೆಸ್ಸನಲ್ ಕಾಂಪೈನ್ ಕಮಿಟಿ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಬೈಡನ್, ರಷ್ಯಾ ಮತ್ತು ಚೀನಾ ವಿರುದ್ಧ ಕಿಡಿಕಾರುವ ವೇಳೆ ಈ ಹೇಳಿಕೆ ನೀಡಿದ್ದಾರೆ.

ಚೀನಾ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸಂಬಂಧಿಸಿದಂತೆ ಅಮೆರಿಕದ ನೀತಿಗಳ ಕುರಿತು ಮಾತನಾಡಿದ ಬೈಡನ್, ಜಗತ್ತಿನಲ್ಲಿನ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದು ಎಂದು ಪಾಕಿಸ್ತಾನವನ್ನು ತಾವು ಪರಿಗಣಿಸಿರುವುದಾಗಿ ಹೇಳಿದ್ದಾರೆ.

What Is China Learning from Russia's Invasion of Ukraine? | The New Yorker

"ಇಲ್ಲೊಬ್ಬ ವ್ಯಕ್ತಿ (ಕ್ಸಿ ಜಿನ್‌ಪಿಂಗ್) ತನಗೆ ಏನು ಬೇಕು ಎಂದು ಅರ್ಥಮಾಡಿಕೊಳ್ಳುತ್ತಾನೆ. ಆದರೆ ಆತ ವಿಪರೀತ ಸಮಸ್ಯೆಗಳ ಪಟ್ಟಿಯನ್ನೇ ಹೊಂದಿದ್ದಾನೆ. ಅದನ್ನು ನಾವು ಹೇಗೆ ನಿಭಾಯಿಸುವುದು? ರಷ್ಯಾದಲ್ಲಿ ನಡೆಯುತ್ತಿರುವುದಕ್ಕೆ ಸಂಬಂಧಿಸಿರುವ ಅದನ್ನು ನಾವು ಹೇಗೆ ನಿಭಾಯಿಸುವುದು? ಹಾಗೆಯೇ, ನನ್ನ ಪ್ರಕಾರ ಜಗತ್ತಿನ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಇದೂ ಒಂದು: ಪಾಕಿಸ್ತಾನ. ಯಾವುದೇ ಸಹಮತಗಳಿಲ್ಲದೆ ಪರಮಾಣ ಅಸ್ತ್ರಗಳನ್ನು ಹೊಂದಿದೆ" ಎಂದು ಬೈಡನ್ ಹೇಳಿದ್ದಾರೆ.

Shehbaz Sharif, former Leader of Opposition, sworn in as Pakistan's 23rd prime  minister - India Today

ಅಮೆರಿಕದ ಜತೆಗಿನ ಸಂಬಂಧವನ್ನು ಮತ್ತೆ ಸರಿಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸರ್ಕಾರಕ್ಕೆ, ಬೈಡನ್ ಅವರ ಹೇಳಿಕೆಯು ತೀವ್ರ ಹಿನ್ನಡೆ ಉಂಟುಮಾಡಲಿದೆ ಎಂದು ಹೇಳಲಾಗಿದೆ.

21ನೇ ಶತಮಾನದ ಎರಡನೇ ಭಾಗದಲ್ಲಿ ಅಮೆರಿಕವನ್ನು ಕ್ರಿಯಾತ್ಮಕವಾಗಿ ಬದಲಿಸಲು ಸಾಕಷ್ಟು ಅವಕಾಶಗಳಿವೆ ಎಂದು ಬೈಡನ್ ಅವರು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಅನೇಕ ಸಂಗತಿಗಳು ನಡೆಯುತ್ತಿವೆ. ಸಾಕಷ್ಟು ಸಂಭವಿಸುತ್ತಿವೆ. ಆದರೆ 21ನೇ ಶತಮಾನದ ಎರಡನೇ ಅವಧಿಯಲ್ಲಿ ಕ್ರಿಯಾತ್ಮಕವಾಗಿ ಬದಲಾಗಲು ಅಮೆರಿಕಕ್ಕೆ ಬಹಳಷ್ಟು ಅವಕಾಶಗಳಿವೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೈಡನ್ ಆಡಳಿತವು ಕಾಂಗ್ರೆಸ್ ಅನುಮೋದಿತ ಪ್ರಮುಖ ನೀತಿ ದಾಖಲೆಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಚೀನಾ ಮತ್ತು ರಷ್ಯಾ ದೇಶಗಳು ಸೃಷ್ಟಿಸಿರುವ ಅಪಾಯಗಳನ್ನು ಒತ್ತಿ ಹೇಳಲಾಗಿತ್ತು.

United States President Joe Biden deemed Pakistan one of the most dangerous nations in the world. The White House statement quoted the president's address at the Democratic Congressional Campaign Committee Reception on Friday.Biden said, "What I think is maybe one of the most dangerous nations in the world, Pakistan. Nuclear weapons without any cohesion."