ಅಯೋಧ್ಯೆ ರಾಮಮಂದಿರ ಸ್ಫೋಟಕ್ಕೆ ಪಿಎಫ್ಐ ಸಂಚು ; ಮಹಾರಾಷ್ಟ್ರ ಎಟಿಎಸ್ ತನಿಖೆಯಲ್ಲಿ ಪತ್ತೆ

21-10-22 03:48 pm       HK News Desk   ದೇಶ - ವಿದೇಶ

ಮಹಾರಾಷ್ಟ್ರದಲ್ಲಿ ಬಂಧಿತರಾಗಿದ್ದ ಪಿಎಫ್ಐ ನಾಯಕರು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಸ್ಫೋಟಿಸಿ, ಅದೇ ಜಾಗದಲ್ಲಿ ಬಾಬ್ರಿ ಮಸೀದಿಯನ್ನು ಪುನರ್ ಸ್ಥಾಪಿಸಲು ಸಂಚು ಹೂಡಿದ್ದರು ಅನ್ನುವ ವಿಚಾರವನ್ನು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ ಪತ್ತೆ ಮಾಡಿದೆ.

ಮುಂಬೈ, ಅ.21: ಮಹಾರಾಷ್ಟ್ರದಲ್ಲಿ ಬಂಧಿತರಾಗಿದ್ದ ಪಿಎಫ್ಐ ನಾಯಕರು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಸ್ಫೋಟಿಸಿ, ಅದೇ ಜಾಗದಲ್ಲಿ ಬಾಬ್ರಿ ಮಸೀದಿಯನ್ನು ಪುನರ್ ಸ್ಥಾಪಿಸಲು ಸಂಚು ಹೂಡಿದ್ದರು ಅನ್ನುವ ವಿಚಾರವನ್ನು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ ಪತ್ತೆ ಮಾಡಿದೆ.

ಇತ್ತೀಚೆಗೆ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡುವುದಕ್ಕೂ ಮುನ್ನ ಮಾಲೆಗಾಂವ್, ಪುಣೆ ಮತ್ತಿತರ ಜಿಲ್ಲೆಗಳಲ್ಲಿ ಪಿಎಫ್ಐ ನಾಯಕರನ್ನು ಪೊಲೀಸರು ಬಂಧಿಸಿದ್ದರು. ಅವರನ್ನು ವಿಚಾರಣೆಗೊಳಪಡಿಸಿದ ವೇಳೆ ಭಯಾನಕ ವಿಚಾರಗಳು ಬಯಲಾಗಿವೆ ಎಂದು ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಾಲೆಗಾಂವ್ ಪಿಎಫ್ಐ ಜಿಲ್ಲಾಧ್ಯಕ್ಷ ಮೌಲಾನಾ ಸಯೀದ್ ಅಹ್ಮದ್ ಅನ್ಸಾರಿ, ಪುಣೆ ಪಿಎಫ್ಐ ಉಪಾಧ್ಯಕ್ಷನಾಗಿದ್ದ ಅಬ್ದುಲ್ ಖಯ್ಯೂಮ್ ಶೇಖಂಡ್ ಮತ್ತು ಇತರ ಕೆಲವು ಜಿಲ್ಲೆಗಳಿಂದ ಬಂಧಿಸಲ್ಪಟ್ಟಿದ್ದ ಪಿಎಫ್ಐ ಮುಖಂಡರನ್ನು ಪೊಲೀಸರು ಅ.18ರಂದು ನಾಶಿಕ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಇದಲ್ಲದೆ, ಪಿಎಫ್ಐ ನಾಯಕರು ನೀಡಿದ ಮಾಹಿತಿ ಮೇರೆಗೆ ಇತರ ಕೆಲವರನ್ನೂ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ವೇಳೆ, ಅಯೋಧ್ಯೆ ರಾಮ ಮಂದಿರ ಸ್ಫೋಟದ ಬಗ್ಗೆ ಸಂಚು ಹೂಡಿದ್ದು ಬಯಲಾಗಿದೆ. ಅಲ್ಲದೆ, ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿಸಲು ಸಂಚು ನಡೆಸುತ್ತಿದ್ದರು. 2047ರ ವೇಳೆಗೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ನೂರು ವರ್ಷಗಳಾಗುತ್ತಿದ್ದು, ಆ ವೇಳೆಗೆ ದೇಶವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡಬೇಕೆಂಬ ಮಹೋನ್ನತ ಕನಸು ಇಟ್ಟುಕೊಂಡಿದ್ದರು. ಅದಕ್ಕಾಗಿ ಪಾಕಿಸ್ಥಾನದಿಂದ ಪ್ರೇರಣೆ ಪಡೆದು ವಾಟ್ಸಪ್ ಗ್ರೂಪ್ ರಚಿಸ್ಕೊಂಡು ಚರ್ಚೆ ನಡೆಸುತ್ತಿದ್ದರು. ವಾಟ್ಸಪ್ ಗ್ರೂಪಿನಲ್ಲಿ 175 ಮಂದಿ ಸದಸ್ಯರಿದ್ದು, ಭಾರತ, ಪಾಕಿಸ್ಥಾನ, ಅಫ್ಘಾನಿಸ್ತಾನ, ಯುಎಇ ಕಡೆಯ ಸದಸ್ಯರು ಇದ್ದರು. ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗುವುದು, ಗಲಭೆ ಎಬ್ಬಿಸುವುದು, ಶಾಂತಿ ಕದಡುವ ವಿಚಾರದಲ್ಲಿ ಚರ್ಚೆ ನಡೆಸುತ್ತಿದ್ದರು ಅನ್ನುವುದನ್ನು ಪತ್ತೆ ಮಾಡಿದ್ದಾರೆ.

ಬಂಧಿತ ಪಿಎಫ್ಐ ನಾಯಕರ ಬಳಿ ಸಿಕ್ಕಿದ್ದ ಮೊಬೈಲ್, ಕಂಪ್ಯೂಟರ್, ಹಾರ್ಡ್ ಡಿಸ್ಕ್ ದಾಖಲೆಗಳು, ಅವರ ಬ್ಯಾಂಕ್ ವಹಿವಾಟುಗಳ ಬಗ್ಗೆ ಮಾಹಿತಿಗಳನ್ನು ಪೊಲೀಸರು ನಾಶಿಕ್ ನ್ಯಾಯಾಲಯಕ್ಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಸೆ.22ರ ಮೊದಲ ದಾಳಿಯ ಈತನಕ 35 ಮಂದಿ ಪಿಎಫ್ಐ ಪ್ರಮುಖರನ್ನು ಬಂಧಿಸಲಾಗಿದೆ. ಅವರನ್ನು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳವು ತನಿಖೆ ನಡೆಸುತ್ತಿದ್ದು, ಭಯಾನಕ ವಿಚಾರಗಳನ್ನು ಹೊರಗೆಡಹಿದ್ದಾಗಿ ಓಪಿ ಇಂಡಿಯಾ ಸುದ್ದಿ ಸಂಸ್ಥೆ ಮೊದಲ ಬಾರಿಗೆ ಬಿತ್ತರಿಸಿದೆ. ಆದರೆ ಈ ವಿಚಾರ ದೇಶದ ಮುಖ್ಯ ವಾಹಿನಿಯಲ್ಲಿರುವ ಸುದ್ದಿ ಸಂಸ್ಥೆಗಳಲ್ಲಿ ಪ್ರಸಾರ ಆಗಿಲ್ಲ.

On Tuesday, the Maharashtra Anti-Terrorist Squad revealed a dangerous plan of the now-banned Islamist terrorist organization named Popular Front of India (PFI). The officials said that the PFI jihadis had planned to blow up Ayodhya’s Ram Mandir and build Babri Masjid at the same location. They also had planned to make India an Islamic country by 2047, the year in which India would complete 100 years of its Independence.