ಬ್ರೇಕಿಂಗ್ ನ್ಯೂಸ್
22-10-22 04:11 pm HK News Desk ದೇಶ - ವಿದೇಶ
ಕಾಸರಗೋಡು, ಅ.22: ಅರಣಾಚಲ ಪ್ರದೇಶದಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಕಾಸರಗೋಡು ಮೂಲದ ಯೋಧ ಕೆ.ವಿ.ಅಶ್ವಿನ್(24) ಮೃತಪಟ್ಟಿದ್ದಾರೆ. ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯಲ್ಲಿ ಶುಕ್ರವಾರ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಅಶ್ವಿನ್ ಸೇರಿ ಐವರು ಮೃತಪಟ್ಟಿದ್ದಾರೆ.
ಅಶ್ವಿನ್, ಕಾಸರಗೋಡು ಜಿಲ್ಲೆಯ ಚೆರುವತ್ತೂರು ಬಳಿಯ ಕಿಜಾಕ್ಕುಮ್ಮೇರಿ ಎಂಬಲ್ಲಿನ ನಿವಾಸಿ. ನಾಲ್ಕು ವರ್ಷಗಳ ಹಿಂದಷ್ಟೇ ಅವರು ಸೇನೆಯಲ್ಲಿ ಕರ್ತವ್ಯಕ್ಕೆ ಸೇರ್ಪಡೆಯಾಗಿದ್ದರು. ಕಾಪ್ಟರ್ ದುರಂತದಲ್ಲಿ ಅಶ್ವಿನ್ ಮೃತಪಟ್ಟಿರುವ ಬಗ್ಗೆ ಸೇನಾ ಸಿಬಂದಿ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಚೆರುವತ್ತೂರಿನ ಅಶ್ವಿನ್ ಕುಟುಂಬಸ್ಥರು ತೀವ್ರ ದುಃಖಕ್ಕೀಡಾಗಿದ್ದಾರೆ. ಭಾನುವಾರ ಅವರ ಮೃತದೇಹವನ್ನು ಹುಟ್ಟೂರಿಗೆ ತರುವ ಬಗ್ಗೆ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಜಿಲ್ಲಾಡಳಿಕ್ಕೆ ಯಾವುದೇ ಮಾಹಿತಿ ನೀಡಲಾಗಿಲ್ಲ.
ಚೀನಾ ಗಡಿಯಿಂದ 35 ಕಿಮೀ ದೂರದ ದಟ್ಟಾರಣ್ಯದಲ್ಲಿ ದುರಂತ ನಡೆದಿದ್ದು, ಮೃತ ನಾಲ್ವರು ಯೋಧರ ಮೃತದೇಹಗಳು ಶುಕ್ರವಾರ ಪತ್ತೆಯಾಗಿದ್ದವು. ಐದನೇ ಯೋಧನ ಶವ ಶನಿವಾರ ದುರಂತ ಸ್ಥಳದಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಸಿಕ್ಕಿದೆ. ವಾಯುಪಡೆಗೆ ಸೇರಿದ ಲಘು ಮಾದರಿಯ ಅತ್ಯಾಧುನಿಕ ಹೆಲಿಕಾಪ್ಟರ್ ಇದಾಗಿದ್ದು, ಇಬ್ಬರು ಪೈಲಟ್ ಸೇರಿದಂತೆ ಐವರು ಯೋಧರು ಇದ್ದರು. ಶುಕ್ರವಾರ ಬೆಳಗ್ಗೆ 10.40ರ ವೇಳೆಗೆ ದುರಂತ ನಡೆದಿದ್ದು, ಹೇಗೆ ದುರಂತ ಸಂಭವಿಸಿದೆ ಅನ್ನುವುದರ ಖಚಿತ ಮಾಹಿತಿಯಿರಲಿಲ್ಲ. ಚೀನಾ ಗಡಿಯ ಆ ಪ್ರದೇಶಕ್ಕೆ ರಸ್ತೆ ಮಾರ್ಗ ಇಲ್ಲದೇ ಇರುವುದರಿಂದ ಯೋಧರು ಕಾಪ್ಟರ್ ನಲ್ಲಿಯೇ ಹೋಗಿ ಬರುತ್ತಾರೆ. ಈ ವೇಳೆ, ಪರ್ವತ ಪ್ರದೇಶಗಳ ನಡುವೆ ಕಾಪ್ಟರ್ ದುರಂತಕ್ಕೀಡಾಗಿದೆ.
ಸೇನಾ ಮೂಲಗಳ ಪ್ರಕಾರ, ವಾತಾವರಣ ವೈಪರೀತ್ಯ ಇರಲಿಲ್ಲ. ನುರಿತ ಪೈಲಟ್ ಗಳೇ ಕಾಪ್ಟರ್ ನಲ್ಲಿದ್ದರು. ತಾಂತ್ರಿಕ ದೋಷದಿಂದ ಕಾಪ್ಟರ್ ಪತನ ಆಗಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ರಕ್ಷಣಾ ಇಲಾಖೆ ಆದೇಶ ಮಾಡಿದೆ.
Kasaragod native KV Aswin is among the army personnel killed in a defence chopper crash in Upper Siang district of Arunachal Pradesh on Friday. 24-year-old Aswin hails from Kizhakkemuri near Cheruvathur.The family of the deceased came across the shocking news after the official concerned in the army intimated them about the death. He had been on service since four years. It is learnt that the dead body of the deceased will be brought to his native by Sunday.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm