ಮೆಲ್ಬರ್ನ್‌ನಲ್ಲಿ ಭಾರತ- ಪಾಕ್ ಹೈವೋಲ್ಟೇಜ್ ಪಂದ್ಯ ; ಬದ್ಧ ವೈರಿಗಳ ಕಾದಾಟಕ್ಕೆ ಮಳೆ ಅಡ್ಡಿ ಸಾಧ್ಯತೆ 

23-10-22 01:32 pm       HK News Desk   ದೇಶ - ವಿದೇಶ

ಟಿ- ಟ್ವೆಂಟಿ ವಿಶ್ವಕಪ್‌ ಆರಂಭಗೊಂಡಿದ್ದು ಭಾರತ ತಂಡ ಇಂದು ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಮಧ್ಯಾಹ್ನ 1.30ಕ್ಕೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆರಂಭಗೊಳ್ಳಲಿದ್ದು ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ನಿರೀಕ್ಷೆಯಿದೆ. 

ಮೆಲ್ಬರ್ನ್, ಅ.23 : ಟಿ- ಟ್ವೆಂಟಿ ವಿಶ್ವಕಪ್‌ ಆರಂಭಗೊಂಡಿದ್ದು ಭಾರತ ತಂಡ ಇಂದು ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಮಧ್ಯಾಹ್ನ 1.30ಕ್ಕೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆರಂಭಗೊಳ್ಳಲಿದ್ದು ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ನಿರೀಕ್ಷೆಯಿದೆ. 

ಮೆಲ್ಬರ್ನ್ ಮೈದಾನದಲ್ಲಿ ಇದುವರೆಗೆ 15  ಟಿ- 20 ಪಂದ್ಯ ನಡೆದಿದ್ದು ಭಾರತೀಯರು ಇಲ್ಲಿ ಮೂರು ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಪಾಕಿಸ್ತಾನ ತಂಡ ಮೊದಲ ಬಾರಿಗೆ ಇಲ್ಲಿ ಟ್ವೆಂಟಿ ಆಡುತ್ತಿದೆ. ಈ ನಡುವೆ, ಮೆಲ್ಬರ್ನ್‌ನಲ್ಲಿ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ವರದಿ ತಿಳಿಸಿದೆ. ಮಳೆ ಬಂದಿದ್ದೇ ಆದರೆ, ಕಡಿಮೆ ಓವರ್‌ ಗಳ ಪಂದ್ಯ ನಡೆಯಲಿದೆ. ಮೆಲ್ಬೋರ್ನ್ ಸ್ಟೇಡಿಯಂ ಜಗತ್ತಿನ ದೊಡ್ಡ ಬೌಂಡರಿಗಳನ್ನು ಹೊಂದಿರುವ ಮೈದಾನಗಳಲ್ಲಿ ಒಂದು. ಇಲ್ಲಿ ಟ್ವೆಂಟಿಯಲ್ಲಿ 185 ರನ್‌ ಗರಿಷ್ಠ ಸ್ಕೋರ್‌. ಮೊದಲು ಬ್ಯಾಟ್ ಮಾಡುವ ತಂಡ ಹೆಚ್ಚು ಮೊತ್ತ ಸಾಧಿಸಿದಲ್ಲಿ ಗೆಲುವಿನ ಪ್ರಮಾಣ ಹೆಚ್ಚು. ಈವರೆಗಿನ 15 ಪಂದ್ಯಗಳಲ್ಲಿ 9 ಪಂದ್ಯಗಳು ಚೇಸ್‌ ಮಾಡಿಯೇ ಗೆದ್ದಿವೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಇದುವರೆಗೆ 11 ಟಿ- ಟ್ವೆಂಟಿ ಪಂದ್ಯಗಳು ನಡೆದಿವೆ. ಭಾರತ ತಂಡ 7ರಲ್ಲಿ ಗೆಲುವು ಸಾಧಿಸಿದ್ದರೆ, ಪಾಕ್ ತಂಡ 3ರಲ್ಲಿ ಗೆದ್ದಿದೆ. ಒಂದು ಪಂದ್ಯಕ್ಕೆ ಫಲಿತಾಂಶ ಸಿಕ್ಕಿಲ್ಲ. ಕಳೆದ ಒಂದು ವರ್ಷದಲ್ಲಿ ನಡೆದ ಮೂರು ಪಂದ್ಯಗಳಲ್ಲಿ ಪಾಕಿಸ್ತಾನ ತಂಡವೇ ಮೇಲುಗೈ ಸಾಧಿಸಿದೆ.

India are all set to begin its 2022 T20 World Cup campaign against arch-rivals Pakistan at the Melbourne Cricket Ground (MCG) on Sunday, October 23.The two sides recently clashed at the Asia Cup in Dubai, with India winning the opening match and Pakistan taking away the Super Four match. Ahead of their T20 World Cup encounter, all eyes are on the weather conditions in Melbourne, which have started to look a little promising.