ಇಂಗ್ಲೆಂಡ್ ರಾಜನಿಗಿಂತ ಸುನಕ್ ಡಬಲ್ ಸಿರಿವಂತ ! ಪ್ರಧಾನಿ ಸ್ಥಾನಕ್ಕೇರಿದ ಮೊದಲ ಹಿಂದು ; ಕ್ರಿಪ್ಟೋ ವಲಯದಲ್ಲಿ ಹೊಸ ನಿರೀಕ್ಷೆ, ರಿಷಿ ಸುನಕ್ ಬಗ್ಗೆ ನೀವು ತಿಳಿಯದ ಸತ್ಯಗಳು

25-10-22 10:12 pm       HK News Desk   ದೇಶ - ವಿದೇಶ

ಭಾರತ ಮೂಲದ ರಿಷಿ ಸುನಕ್ ಪ್ರಧಾನಿಯಾಗುತ್ತಿರುವುದನ್ನು ಕೇಳಿ ಭಾರತೀಯರು ಸಂಭ್ರಮಿಸುತ್ತಿದ್ದಾರೆ. ಆದರೆ ರಿಷಿ ಸುನಕ್ ಬಗ್ಗೆ ಭಾರತೀಯರು ನಿಜಕ್ಕೂ ಅಚ್ಚರಿ ಪಡುವ ಮಾಹಿತಿಗಳು ಹೊರ ಬರುತ್ತಿವೆ.

ನವದೆಹಲಿ, ಅ.25: ಭಾರತ ಮೂಲದ ರಿಷಿ ಸುನಕ್ ಪ್ರಧಾನಿಯಾಗುತ್ತಿರುವುದನ್ನು ಕೇಳಿ ಭಾರತೀಯರು ಸಂಭ್ರಮಿಸುತ್ತಿದ್ದಾರೆ. ಆದರೆ ರಿಷಿ ಸುನಕ್ ಬಗ್ಗೆ ಭಾರತೀಯರು ನಿಜಕ್ಕೂ ಅಚ್ಚರಿ ಪಡುವ ಮಾಹಿತಿಗಳು ಹೊರ ಬರುತ್ತಿವೆ. 200 ವರ್ಷಗಳ ಕಾಲ ತಮ್ಮ ವಸಾಹತುವಾಗಿಸಿ ಭಾರತದಲ್ಲಿ ಆಳ್ವಿಕೆ ನಡೆಸಿದ್ದ ಆಂಗ್ಲರನ್ನು ಈಗ ಭಾರತ ಮೂಲದ ಹಿಂದು ವ್ಯಕ್ತಿಯೊಬ್ಬ ಆಳ್ವಿಕೆ ನಡೆಸುತ್ತಿದ್ದಾನೆ ಅನ್ನೋದು ನಿಜಕ್ಕೂ ಹೆಗ್ಗಳಿಕೆ ಮತ್ತು ಹೆಮ್ಮೆಯ ಕ್ಷಣ. ಆದರೆ, ಕೇವಲ ಅಷ್ಟು ಮಾತ್ರಕ್ಕೆ ಸುನಕ್ ಪ್ರಧಾನಿ ಪಟ್ಟಕ್ಕೇರಿಲ್ಲ. ಅಚ್ಚರಿ ಅಂದ್ರೆ, ಶ್ರೀಮಂತಿಕೆಯಲ್ಲಿ ಬ್ರಿಟಿಷ್ ರಾಜನನ್ನೇ ಮೀರಿಸುವಷ್ಟು ಸಿರಿವಂತನಂತೆ ಸುನಕ್.

ಇಷ್ಟಕ್ಕೂ ರಿಷಿ ಸುನಕ್ ಭಾರತೀಯನಲ್ಲ !

ಇಂಗ್ಲೆಂಡಿನ ಸೌತಾಂಪ್ಟನ್ನಲ್ಲಿ 1980ರಲ್ಲಿ ಜನಿಸಿದ್ದ ರಿಷಿ ಸುನಕ್, ವಿಂಚೆಸ್ಟರ್ ಕಾಲೇಜಿನಲ್ಲಿ ಫಿಲಾಸಫಿಯಲ್ಲಿ ಪದವಿ ಪೂರೈಸಿದ್ದರು. ಪಾಲಿಟಿಕ್ಸ್ ಮತ್ತು ಇಕನಾಮಿಕ್ಸ್ ಅನ್ನು ಆಕ್ಸ್ ಫರ್ಡ್ ವಿವಿಯಲ್ಲಿ ಕಲಿತಿದ್ದರು. ಸ್ಟಾನ್ ಫೋರ್ಡ್ ವಿವಿಯಲ್ಲಿ ಎಂಬಿಎ ಪೂರೈಸಿದ್ದರು. ತಮ್ಮ ಪೂರ್ವಜರು ಭಾರತದ ಪಂಜಾಬ್ ಮೂಲದವರಾದ್ದರಿಂದ ತಾನೊಬ್ಬ ಭಾರತೀಯ ಮೂಲದವನು ಎಂದು ಹೇಳುವುದಕ್ಕೆ ಸುನಕ್ ಹೆಮ್ಮೆ ಪಡುತ್ತಾರೆ.

UK latest updates: Rishi Sunak to take over as premier on Tuesday |  Politics News | Al Jazeera

ಸುನಕ್ ಅವರ ಅಜ್ಜ ರಾಮದಾಸ್ ಸುನಕ್ 1935ರಲ್ಲಿ ಕೆನ್ಯಾದ ನೈರೋಬಿಗೆ ವಲಸೆ ಹೋಗಿದ್ದು ಅಲ್ಲಿಯೇ ನೆಲೆಸಿದ್ದರು. ಸುನಕ್ ಅವರ ತಂದೆ ಯಶ್ವೀರ್ 1949ರಲ್ಲಿ ಕೆನ್ಯಾದಲ್ಲಿಯೇ ಜನಿಸಿದ್ದರು. ಆನಂತರ 1966ರಲ್ಲಿ ಯಶ್ವೀರ್ ಕುಟುಂಬ ತಮ್ಮ ನೆಲೆಯನ್ನು ಇಂಗ್ಲೆಂಡಿಗೆ ಬದಲಾಯಿಸಿತ್ತು. ಯಶ್ವೀರ್, ಪಂಜಾಬ್ ಮೂಲದ ಉಷಾ ಬೆರ್ರಿ ಅವರನ್ನು ಮದುವೆಯಾಗಿದ್ದರು. ಉಷಾ ಬೆರ್ರಿ ತಂದೆ ಪಂಜಾಬಿನ ರಘುಬೀರ್ ಬೆರ್ರಿ ತಾಂಜಾನಿಯಾಕ್ಕೆ ವಲಸೆ ಹೋಗಿ ನೆಲೆಸಿದ್ದರು. ಉಷಾ ಬೆರಿ ಮತ್ತು ಯಶ್ವೀರ್ ಸುನಕ್ ಇಬ್ಬರೂ ಇಂಗ್ಲೆಂಡಿನಲ್ಲಿ ಫಾರ್ಮಸಿಸ್ಟ್ ಆಗಿದ್ದು, ಅವರ ಮಗನೇ ರಿಷಿ ಸುನಕ್. ಹೀಗಾಗಿ ಭಾರತ ಮೂಲ ಆಗಿದ್ದರೂ, ಆತ ಪೂರ್ತಿಯಾಗಿ ಇಂಗ್ಲೆಂಡ್ ಪ್ರಜೆಯೇ ಆಗಿದ್ದಾರೆ. ರಿಷಿ ಸುನಕ್ ಸ್ವತಃ ಉದ್ಯಮಿಯಾಗಿದ್ದು, ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರ ಮಗಳು ಅಕ್ಷತಾರನ್ನು ಮದುವೆಯಾದ ಬಳಿಕ ಇವರ ಉದ್ಯಮ ಸಾಮ್ರಾಜ್ಯ ಮತ್ತಷ್ಟು ವಿಸ್ತಾರಗೊಂಡಿತ್ತು.

Rishi Sunak, Youngest UK PM in two centuries, takes office

ಅತಿ ಕಿರಿಯ ಬ್ರಿಟನ್ ಪ್ರಧಾನಿ

42 ವರ್ಷದ ರಿಷಿ ಸುನಕ್ 200 ವರ್ಷಗಳಲ್ಲಿ ಬ್ರಿಟನ್ ದೇಶದ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. 1783ರಲ್ಲಿ ವಿಲಿಯಂ ಪಿಟ್ ಎಂಬವರು ತನಗೆ ಕೇವಲ 24 ವಯಸ್ಸಿನಲ್ಲಿದ್ದಾಗ ಪ್ರಧಾನಿ ಸ್ಥಾನಕ್ಕೇರಿದ್ದು ಅಲ್ಲಿನ ಅತಿ ಕಿರಿಯ ಪ್ರಧಾನಿ ಎಂಬ ದಾಖಲೆ ಹೊಂದಿದ್ದಾರೆ. ಆನಂತರ, ಅತಿ ಕಿರಿಯ ಪ್ರಧಾನಿ ಎಂಬ ಸ್ಥಾನವನ್ನು ರಿಷಿ ಸುನಕ್ ಪಡೆದಿದ್ದಾರೆ.

UK 'PM' Rishi Sunak? 5 things to know about Boris Johnson's potential  successor | World News - Hindustan Times

ಅತಿ ವೇಗದಲ್ಲಿ ರಾಜಕೀಯದಲ್ಲಿ ಮೇಲೇರಿದ ರಿಷಿ

2015ರಲ್ಲಿ ರಿಚ್ಮಂಡ್ (ಯಾರ್ಕ್ ಶೈರ್) ಕ್ಷೇತ್ರದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ರಿಷಿ ಸುನಕ್ ಅತಿ ವೇಗದಲ್ಲಿ ರಾಜಕೀಯದಲ್ಲಿ ಸಾಧನೆ ಮಾಡಿದ್ದಾರೆ. ಕೇವಲ ಏಳು ವರ್ಷಗಳಲ್ಲಿ ದೇಶದ ಅತ್ಯುನ್ನತ ಪದವಿಯನ್ನು ಗಳಿಸಿದ್ದಾರೆ. ಇದಕ್ಕೂ ಹಿಂದೆ ಡೇವಿಡ್ ಕ್ಯಾಮರೂನ್ ಸಂಸದರಾದ 9 ವರ್ಷಗಳಲ್ಲಿ ಪ್ರಧಾನಿ ಸ್ಥಾನಕ್ಕೇರಿದ ಸಾಧನೆ ಮಾಡಿದ್ದರು. 2001ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಕ್ಯಾಮರೂನ್ 2010ರಲ್ಲಿ ಪ್ರಧಾನಿ ಸ್ಥಾನಕ್ಕೇರಿದ್ದರು. ರಿಷಿ ಸುನಕ್ 2018-19ರಲ್ಲಿ ಇಂಗ್ಲೆಂಡ್ ಸರಕಾರದಲ್ಲಿ ಸಹಾಯಕ ಸಚಿವರಾಗಿದ್ದರು. 2019-20ರಲ್ಲಿ ಹಣಕಾಸು ವಿಭಾಗದ ಮುಖ್ಯ ಕಾರ್ಯದರ್ಶಿ ಆಗಿದ್ದು ಅವರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿತ್ತು. 2021-22ರಲ್ಲಿ ಬೋರಿಸ್ ಜಾನ್ಸನ್ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದಲ್ಲದೆ, ಕೊರೊನಾ ಸಂದರ್ಭದಲ್ಲಿ ಕೈಗೊಂಡ ಕ್ರಮಗಳಿಂದಾಗಿ ದೇಶದ ಜನರ ಆಕರ್ಷಣೆ ಗಿಟ್ಟಿಸಿದ್ದರು. 18 ತಿಂಗಳ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ರಿಷಿ ಸುನಕ್ ಜನಸಾಮಾನ್ಯರಿಗೆ ಮತ್ತು ಸಣ್ಣ ಉದ್ಯಮಿಗಳ ಪರವಾಗಿ ಯೋಜನೆಗಳನ್ನು ಪ್ರಕಟಿಸಿದ್ದರು.

New UK PM Rishi Sunak and wife Akshata Murty are richer than the royals  with almost $850M

ಇಂಗ್ಲೆಂಡ್ ರಾಜನಿಗಿಂತ ಸಿರಿವಂತ ಸುನಕ್ ದಂಪತಿ

ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ದಂಪತಿ 730 ಮಿಲಿಯನ್ ಪೌಂಡ್ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇಂಗ್ಲೆಂಡಿನ ರಾಜ ಕಿಂಗ್ ಚಾರ್ಲ್ಸ್ -3 ಮತ್ತು ಕ್ಯಾಮಿಲ್ಲಾ ದಂಪತಿ 300ರಿಂದ 350 ಮಿಲಿಯನ್ ಪೌಂಡ್ ಆಸ್ತಿ ಹೊಂದಿದ್ದು, ಇವರಿಗಿಂತ ಡಬಲ್ ಸಿರಿವಂತಿಕೆ ಸುನಕ್ ಅವರದ್ದಿದೆ. ಸುನಕ್ ದಂಪತಿ ಜಗತ್ತಿನಾದ್ಯಂತ ಹರಡಿರುವ ನಾಲ್ಕು ಕಂಪನಿಗಳ ಮಾಲೀಕರಾಗಿದ್ದಾರೆ. ಅಕ್ಷತಾ ಮೂರ್ತಿ, ಇನ್ಫೋಸಿಸ್ ಸಂಸ್ಥೆಯಲ್ಲಿ ಒಂದು ಪರ್ಸೆಂಟ್ ಪಾಲು ಹೊಂದಿದ್ದಾರೆ.

Rishi Sunak 'could set up a Brexit-style upset' and beat Liz Truss - Canada  Today

ಮೊದಲ ಏಶ್ಯನ್ ವ್ಯಕ್ತಿ, ಮೊದಲ ಹಿಂದು  

ಇಂಗ್ಲೆಂಡ್ 57ನೇ ಪ್ರಧಾನಿಯಾಗಿ ಆಯ್ಕೆಯಾಗಿರುವ ರಿಷಿ ಸುನಕ್, ಈ ಸ್ಥಾನಕ್ಕೇರಿದ ಮೊದಲ ಏಶ್ಯಾ ಮೂಲದ ವ್ಯಕ್ತಿಯೂ ಆಗಿದ್ದಾರೆ. ವಿಶೇಷ ಅಂದ್ರೆ, ರಿಷಿ ಸುನಕ್ ಆಯ್ಕೆ ಕ್ರಿಪ್ಟೋ ಕರೆನ್ಸಿ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಬೋರಿಸ್ ಜಾನ್ಸನ್ ಪ್ರಧಾನಿಯಾಗಿದ್ದಾಗ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್, ಕ್ರಿಪ್ಟೋ ಕರೆನ್ಸಿಗೆ ಪ್ರೋತ್ಸಾಹ ನೀಡಿದ್ದರು. ಇಂಗ್ಲೆಂಡನ್ನು ಕ್ರಿಪ್ಟೋ ಕರೆನ್ಸಿ ಹಬ್ ಮಾಡುವುದಕ್ಕೂ ಮುಂದಾಗಿದ್ದರು. ಹೀಗಾಗಿ ರಿಷಿ ಪ್ರಧಾನಿಯಾಗಿರುವುದು ಕ್ರಿಪ್ಟೋ ವಲಯದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

Rishi Sunak factors in crypto protections in UK

ಕ್ರಿಪ್ಟೋ ವಲಯದಲ್ಲಿ ಹೊಸ ನಿರೀಕ್ಷೆ

2021ರಲ್ಲಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ(ಸಿಬಿಡಿಸಿ) ಬಿಟ್ ಕಾಯಿನ್ ಅನ್ನು ಬಳಕೆಗೆ ತಂದಿದ್ದರು. 2025ರ ವೇಳೆಗೆ, ಬಿಟ್ ಕಾಯಿನ್ ಇಂಗ್ಲೆಂಡಿನ ಪ್ರಮುಖ ಆರ್ಥಿಕತೆಯಾಗಿ ಬೆಳೆಯಲಿದೆ ಎಂದು ರಿಷಿ ಸುನಕ್ ಆಶಯ ವ್ಯಕ್ತಪಡಿಸಿದ್ದರು. ಆನಂತರ, ಕೆಲವು ಆರ್ಥಿಕ ತಜ್ಞರ ಸಲಹೆಯಂತೆ ಬ್ಯಾಂಕಿನ ಬಿಟ್ ಕಾಯಿನ್ ಅನ್ನು ಬೋರಿಸ್ ಜಾನ್ಸನ್ ತಡೆಹಿಡಿದಿದ್ದರು. ಇದೀಗ ಸ್ವತಃ ರಿಷಿ ಸುನಕ್ ಪ್ರಧಾನಿಯಾಗಿದ್ದು ಕ್ರಿಪ್ಟೋ ವಲಯದಲ್ಲಿ ಹೊಸ ನಿರೀಕ್ಷೆ ಮೂಡಿಸಿದ್ದು, ಕ್ರಿಪ್ಟೋ ಕರೆನ್ಸಿಗೆ ಉತ್ತೇಜನ ನೀಡುತ್ತಾರೆಯೇ ಎಂಬ ಬಗ್ಗೆ ಆಶಾಭಾವನೆ ಮೂಡಿದೆ.

Indians are going gaga as Rishi Sunak becomes the new Prime Minister of United Kingdom, which colonised India for over 200 years. Internet is flooded with creative memes on Sunak. While some suggested it is the time for the UK to return Kohinoor to India, others likened the new PM to Ashish Nehra, the former Indian left-arm fast bowler.