ಕಾಂತಾರಕ್ಕೆ ಶಾಕ್ ; 'ವರಾಹರೂಪಂ' ಹಾಡು ಪ್ರಸಾರ ಮಾಡದಂತೆ ಕೋರ್ಟ್ ತಡೆಯಾಜ್ಞೆ, ಮಲಯಾಳಂ ಆಲ್ಬಂ ತಂಡದ ಕಿರಿಕ್ ! 

28-10-22 10:46 pm       HK News Desk   ದೇಶ - ವಿದೇಶ

ದೇಶಾದ್ಯಂತ ಕ್ರಾಂತಿ ಎಬ್ಬಿಸಿರುವ ಕಾಂತಾರ ಸಿನಿಮಾದ 'ವರಾಹರೂಪಂ' ಹಾಡಿಗೆ ಕೋಝಿಕ್ಕೋಡ್ ಕೋರ್ಟ್ ತಡೆ ನೀಡಿದೆ. ಕಾಂತಾರ ಚಿತ್ರದಲ್ಲಿ ಮಲಯಾಳಂ ಭಾಷೆಯ 'ನವರಸಂ..' ಹಾಡಿನಿಂದ ಪ್ರೇರಣೆಗೊಂಡು 'ವರಾಹರೂಪಂ' ಹಾಡು ಹೆಣೆಯಲಾಗಿತ್ತು ಎಂಬ ಆರೋಪ ಎದುರಾಗಿತ್ತು. 

ಕೋಝಿಕ್ಕೋಡ್, ಅ.28 : ದೇಶಾದ್ಯಂತ ಕ್ರಾಂತಿ ಎಬ್ಬಿಸಿರುವ ಕಾಂತಾರ ಸಿನಿಮಾದ 'ವರಾಹರೂಪಂ' ಹಾಡಿಗೆ ಕೋಝಿಕ್ಕೋಡ್ ಕೋರ್ಟ್ ತಡೆ ನೀಡಿದೆ. ಕಾಂತಾರ ಚಿತ್ರದಲ್ಲಿ ಮಲಯಾಳಂ ಭಾಷೆಯ 'ನವರಸಂ..' ಹಾಡಿನಿಂದ ಪ್ರೇರಣೆಗೊಂಡು 'ವರಾಹರೂಪಂ' ಹಾಡು ಹೆಣೆಯಲಾಗಿತ್ತು ಎಂಬ ಆರೋಪ ಎದುರಾಗಿತ್ತು. 

ಈ ಬಗ್ಗೆ ಮಲಯಾಳಂ ಆಲ್ಬಂ ಸಾಂಗ್ ಮಾಡಿದ್ದ 'ತೈಕ್ಕುಡಂ ಬ್ರಿಡ್ಜ್​ ತಂಡ ಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಕೇರಳದ ಕೋಝಿಕೋಡ್ ನ್ಯಾಯಾಲಯ ವರಾಹ ರೂಪಂ ಹಾಡನ್ನು ಪ್ರಸಾರ ಮಾಡದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಈ ವಿಚಾರವನ್ನು 'ತೈಕ್ಕುಡಂ ಬ್ರಿಡ್ಜ್​' ತಂಡವೇ ತನ್ನ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದೆ. 

ಕಾಂತಾರಾ ಸಿನಿಮಾದ 'ವರಾಹ ರೂಪಂ' ಟ್ಯೂನ್​ ಅನ್ನು 5 ವರ್ಷ ಹಳೆಯ ಮಲಯಾಳಂ ಆಲ್ಬಂ ನಿಂದ ಕದ್ದಿದ್ದಾರೆ ಎಂಬ ಚರ್ಚೆ ಶುರುವಾಗಿತ್ತು. ಹಾಡಿನ ಮೇಲೆ ಕೃತಿಚೌರ್ಯದ ಆರೋಪವೂ ಕೇಳಿಬಂದಿತ್ತು. ಚಿತ್ರದ ಸಂಗೀತ ನಿರ್ದೇಶಕ ಅಜನೀಶ್​ ಬಿ. ಲೋಕನಾಥ್ ಅವರು ಮಾತ್ರ ಆ ಹಾಡಿನಿಂದ ಪ್ರೇರಣೆ ಪಡೆದಿದ್ದೆ. ಹಾಗಂತ ಕಾಪಿ ಮಾಡಿಲ್ಲ ಎಂದಿದ್ದರು. 

'ಇದು ಕಾಪಿ ಅಲ್ಲ, ಅದರಿಂದ ಸ್ಫೂರ್ತಿ ಪಡೆದು ಹಾಡು ಮಾಡಿದ್ದು. ರಾಗಗಳು ಒಂದೇ ಆಗಿರುವ ಕಾರಣದಿಂದ ಸಾಮ್ಯತೆ ಸಹಜ ಎಂದು ಅಜನೀಶ್​ ಸಮಜಾಯಿಷಿ ನೀಡಿದ್ದರು. ಇಷ್ಟು ದಿನ ಸುಮ್ಮನಿದ್ದ 'ತೈಕ್ಕುಡಂ ಬ್ರಿಡ್ಜ್​' ತಂಡದವರು ಚಿತ್ರ ದೇಶಾದ್ಯಂತ ಸದ್ದು ಮಾಡಿದ ಬೆನ್ನಲ್ಲೇ ಕೇಸ್​ ಹಾಕಲು ನಿರ್ಧರಿಸಿದ್ದರು.

The Kozhikode Sessions Court has issued an injunction barring Kantara makers from playing the “Varaha Roopam” song in theatres and other streaming platforms after receiving a plagiarism complaint from Kerala-based music band, Thaikudam Bridge.