ತೆಲಂಗಾಣದಲ್ಲಿ ಕಮಲ ಆಪರೇಷನ್ ; ಬಿಎಲ್ ಸಂತೋಷ್ ಹೆಸರು ಪ್ರಸ್ತಾಪ, ಬಿಜೆಪಿ ಸೇರಿದ್ರೆ ಇಡಿ, ಸಿಬಿಐ ದಾಳಿಯಾಗಲ್ಲ ! ಬಿಜೆಪಿಗೆ ಮುಜುಗರ ಸೃಷ್ಟಿಸಿದ ಸ್ವಾಮೀಜಿ ಆಡಿಯೋ ! 

29-10-22 09:27 pm       HK News Desk   ದೇಶ - ವಿದೇಶ

ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್ ಪಕ್ಷದ ನಾಲ್ವರು ಶಾಸಕರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ಬಿಜೆಪಿ ಆಪರೇಷನ್ ಮಾಡಲು ಮುಂದಾಗಿದ್ದು ಎರಡು ದಿನಗಳ ಹಿಂದೆ ಬಯಲಾಗಿತ್ತು.

ಹೈದರಾಬಾದ್‌, ಅ.29: ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್ ಪಕ್ಷದ ನಾಲ್ವರು ಶಾಸಕರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ಬಿಜೆಪಿ ಆಪರೇಷನ್ ಮಾಡಲು ಮುಂದಾಗಿದ್ದು ಎರಡು ದಿನಗಳ ಹಿಂದೆ ಬಯಲಾಗಿತ್ತು. ಶಾಸಕರನ್ನು ಖರೀದಿಸಲು ಬಂದಿದ್ದರು ಎನ್ನಲಾದ ಮೂವರನ್ನು 15 ಕೋಟಿ ರೂ. ಹಣದ ಜೊತೆ ಪೊಲೀಸರು ಬಂಧಿಸಿದ್ದರು. ಇದರ ನಡುವೆಯೇ ಪ್ರಕರಣಕ್ಕೆ ಮಹತ್ವದ ತಿರುವು ಲಭಿಸಿದ್ದು ಸ್ವಾಮೀಜಿ ಮತ್ತು ಟಿಆರ್ ಎಸ್ ಶಾಸಕರೊಬ್ಬರ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ. ಆಡಿಯೋದಲ್ಲಿ ಬಿಜೆಪಿ ಪರವಾಗಿ ಡೀಲಿಂಗ್ ಮಾಡಲು ಮುಂದಾಗಿದ್ದ ಸ್ವಾಮೀಜಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೆಸರು ಪ್ರಸ್ತಾಪಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. 

Transcript of the first two audio tapes released by TRS - The South First

ಶಾಸಕ ರೋಹಿತ್ ರೆಡ್ಡಿ ಹಾಗೂ ರಾಮಚಂದ್ರ ಭಾರತಿ ಸ್ವಾಮೀಜಿ ಎಂಬವರ ನಡುವಿನ ಸಂಭಾಷಣೆ ಆಡಿಯೋ ಇದಾಗಿದ್ದು, ಬಿ.ಎಲ್‌ ಸಂತೋಷ್‌ ಪರವಾಗಿ ಮಾತನಾಡುತ್ತಿದ್ದೇನೆ ಎಂದು ಸ್ವಾಮೀಜಿ ಹೇಳಿಕೊಂಡಿದ್ದಾರೆ. ನೀವು ಬಿಜೆಪಿ ಸೇರಿ. ನಮ್ಮ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಎಲ್ಲವನ್ನು ನೋಡಿಕೊಳ್ಳುತ್ತಾರೆ ಎಂದು ಟಿಆರ್ ಎಸ್ ಶಾಸಕನಿಗೆ ಆಮಿಷ ಒಡ್ಡಿದ್ದಾರೆ. 

CBI vs CBI: Everything you need to know about the battle within India's top  investigation agency

Pilot Rohit Reddy: నాకు రూ.100కోట్లు.. నాతో చేరేవారికి రూ.50కోట్ల ఆఫర్‌  ఇచ్చారు: రోహిత్‌రెడ్డి

ಸಂತೋಷ್ ಅವರು ಇಡಿ ಮತ್ತು ಸಿಬಿಐ ದಾಳಿ ಆಗದಂತೆ ನೋಡಿಕೊಳ್ಳುತ್ತಾರೆ. ಇನ್ನಿಬ್ಬರು ಶಾಸಕರು ಬಿಜೆಪಿ ಸೇರಲಿದ್ದಾರೆ. ನವೆಂಬರ್ 2ರಂದು ಹೈದ್ರಾಬಾದ್ ಗೆ ಬರುತ್ತೇನೆ. ಅವರ ಹೆಸರನ್ನು ಅಂದು ಬಹಿರಂಗಪಡಿಸುತ್ತೇನೆ. ಗ್ರಹಣದ‌ ನಂತರ ಭೇಟಿಯಾಗೋಣ ಎಂದು ಸ್ವಾಮೀಜಿ ಸಂಭಾಷಣೆ ವೇಳೆ ಶಾಸಕ ರೋಹಿತ್ ರೆಡ್ಡಿಗೆ ಹೇಳಿದ್ದು, ಇದೀಗ ಅದರ ಆಡಿಯೋ ಲೀಕ್ ಆಗಿದೆ. ಇಡಿ, ಸಿಬಿಐ ದಾಳಿ ಆಗದಂತೆ ನೋಡಿಕೊಳ್ತೀವಿ ಎನ್ನುತ್ತಿರುವುದು ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಪಾಲಿಗೆ ಭಾರೀ ಮುಜುಗರ ತಂದಿಟ್ಟಿದೆ. 

INDIAN CURRENCY NOTES BUNDLES - YouTube

ಅಕ್ಟೋಬರ್ 26ರಂದು ತೆಲಂಗಾಣದ ಸೈಬರಾಬಾದ್ ಪೊಲೀಸರು ಅಝಿಜ್ ನಗರದ ಫಾರ್ಮ್ ಹೌಸ್ ಮೇಲೆ‌ ದಾಳಿ ಮಾಡಿದ್ದರು. ಈ ವೇಳೆ ಬರೋಬ್ಬರಿ 15 ಕೋಟಿ ರೂ. ಹಣವನ್ನು ಸೀಜ್ ಮಾಡಿದ್ದರು. ಅಲ್ಲದೇ ಮೂವರನ್ನು ಬಂಧಿಸಿ, ಆಪರೇಷನ್ ಕಮಲಕ್ಕೆ ಹಣ ತರಲಾಗಿತ್ತು ಎನ್ನುವ ಅಂಶ ಬಯಲಿಗೆ ತಂದಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ಟಿಆರ್‌ಎಸ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಟಿಆರ್‌ಎಸ್‌ನ ನಾಲ್ವರು ಶಾಸಕರಿಗೆ ಪಕ್ಷಾಂತರ ಮಾಡಲು ಬಿಜೆಪಿ 100 ಕೋಟಿ ರೂ. ಆಫರ್ ಕೊಟ್ಟಿತ್ತು ಎಂದು ಆರೋಪಿಸಿತ್ತು.

The alleged case of poaching of TRS MLAs by people claiming to be working on behalf of the Bharatiya Janata Party (BJP) raised the political heat, when two audio clips having a conversation between a godman and Tandur MLA P. Rohit Reddy revolving around TRS MLAs defecting to BJP went viral on social media.