146 ವರ್ಷಗಳ ಹಿಂದೆ ಬ್ರಿಟಿಷರು ನಿರ್ಮಿಸಿದ್ದ ಮೋರ್ಬಿ ತೂಗು ಸೇತುವೆ ; 130ಕ್ಕೂ ಹೆಚ್ಚು ಸಾವು, 177 ಜನರ ನಾಪತ್ತೆ! ಜಗತ್ತು ಕಂಡ ಕೆಟ್ಟ ದುರಂತ, ಗುಜರಾತ್ ಪಾಲಿಗೆ ಕಪ್ಪು ಚುಕ್ಕೆ!

31-10-22 12:01 pm       HK News Desk   ದೇಶ - ವಿದೇಶ

ಗುಜರಾತಿನ ಮೋರ್ಬಿ ನಗರದಲ್ಲಿ ತೂಗುಸೇತುವೆ ಮುರಿದು ಬಿದ್ದು ಉಂಟಾದ ದುರಂತದಲ್ಲಿ ಈವರೆಗೆ 132 ಜನರು ಮೃತಪಟ್ಟಿರುವುದು ದೃಢಪಟ್ಟಿದೆ.

ಗಾಂಧಿನಗರ, ಅ.31: ಗುಜರಾತಿನ ಮೋರ್ಬಿ ನಗರದಲ್ಲಿ ತೂಗುಸೇತುವೆ ಮುರಿದು ಬಿದ್ದು ಉಂಟಾದ ದುರಂತದಲ್ಲಿ ಈವರೆಗೆ 132 ಜನರು ಮೃತಪಟ್ಟಿರುವುದು ದೃಢಪಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಜಗತ್ತು ಕಂಡ ಸೇತುವೆ ದುರಂತಗಳಲ್ಲಿ ಅತ್ಯಂತ ಹೃದಯ ವಿದ್ರಾವಕ ಘಟನೆ ಇದಾಗಿದ್ದು ನೋಡ ನೋಡುತ್ತಲೇ ಮಕ್ಕಳು, ಮಹಿಳೆಯರು ನದಿ ನೀರಿಗೆ ಬಿದ್ದು ಒದ್ದಾಡಿ ಪ್ರಾಣ ಬಿಡುವಂತಾಗಿದೆ. ಘಟನೆಯಲ್ಲಿ 170ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದ್ದು ದೇಶ ಕಂಡ ದುರಂತಗಳ ಸಾಲಿನಲ್ಲಿ ಕಪ್ಪು ಚುಕ್ಕೆಯಾಗಿ ಪರಿಗಣಿಸಲ್ಪಟ್ಟಿದೆ.

ಮೋರ್ಬಿ ನಗರದ ತೂಗುಸೇತುವೆ ದೇಶದ ಅತ್ಯಂತ ಹಳೆಯ ಸೇತುವೆಗಳಲ್ಲಿ ಒಂದಾಗಿದ್ದು, 146 ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿತ್ತು. ಆಗಿನ ಕಾಲದಲ್ಲಿ ಮೋರ್ಬಿಯನ್ನು ಆಳುತ್ತಿದ್ದ ವಾಘ್ ಜಿ ಠಾಕೂರ್, ಉತ್ತರಾಖಂಡದಲ್ಲಿ ಗಂಗಾ ನದಿಗೆ ನಿರ್ಮಿಸಿದ್ದ ತೂಗುಸೇತುವೆಯನ್ನು ನೋಡಿ ಅದೇ ರೀತಿಯಲ್ಲಿ ತನ್ನೂರಿನಲ್ಲಿಯೂ ಸೇತುವೆ ಆಗಬೇಕೆಂದು ಬಯಸಿದ್ದ. ಆನಂತರ, ಬ್ರಿಟಿಷರ ನೆರವು ಪಡೆದು ಮೋರ್ಬಿಯಲ್ಲಿ ಹರಿಯುತ್ತಿದ್ದ ಮುಚ್ಚು ನದಿಗೆ ಅಡ್ಡಲಾಗಿ ಬೃಹತ್ ತೂಗುಸೇತುವೆಯನ್ನು ನಿರ್ಮಿಸಿದ್ದ. ಆಗಿನ ಕಾಲದಲ್ಲಿ ಅತ್ಯಂತ ಆಧುನಿಕ ಮಾದರಿಯ ತೂಗುಸೇತುವೆಯಾಗಿದ್ದು ಅದರಲ್ಲಿ ನಡೆದು ಹೋಗುವುದು ಜನರ ಪಾಲಿಗೊಂದು ಅಚ್ಚರಿಯಾಗಿತ್ತು.

In photos: Rescuers look for survivors after Morbi bridge collapse

The 143-year-old history of the Morbi Bridge in Gujarat that collapsed  killing 130 people

ನದಿಯ ಆಚೀಚೆ ಇದ್ದ ದರ್ಬಾರ್ ಗಢ ಮತ್ತು ನಜಾರ್ ಗಢ ಅರಮನೆಗಳನ್ನು ಸಂಪರ್ಕಿಸುತ್ತಿದ್ದ ತೂಗು ಸೇತುವೆಯನ್ನು 1879ರ ಫೆಬ್ರವರಿ 20ರಂದು ಮುಂಬೈ ಗವರ್ನರ್ ಆಗಿದ್ದ ರಿಚರ್ಡ್ ಟೆಂಪಲ್ ಮೊದಲ ಬಾರಿಗೆ ಉದ್ಘಾಟಿಸಿದ್ದ. ಸೇತುವೆಗೆ ಬೇಕಾಗಿದ್ದ ಎಲ್ಲ ರೀತಿಯ ಕಬ್ಬಿಣ, ಇನ್ನಿತರ ಪರಿಕರಗಳನ್ನು ಇಂಗ್ಲೆಂಡಿನಿಂದ ತರಿಸಲಾಗಿತ್ತು. ಸೇತುವೆಗೆ ಆ ಸಂದರ್ಭದಲ್ಲಿ 3.5 ಲಕ್ಷ ರೂಪಾಯಿ ಖರ್ಚು ತಗಲಿತ್ತು. ನೂರು ವರ್ಷಗಳಿಂದಲೂ ಗಟ್ಟಿಯಾಗಿದ್ದ ಸೇತುವೆಯು 2001ರಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ ಬಹಳಷ್ಟು ಹಾನಿಗೊಳಗಾಗಿತ್ತು. ಆನಂತರ ದುರಸ್ತಿಗೊಳಪಡಿಸಿ ಸೀಮಿತ ಸಂಖ್ಯೆಯಲ್ಲಿ ಮಾತ್ರ ಜನರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

Morbi Bridge Collapse: 'हम उनसे मना करते रहे, वो ब्रिज को हिलाकर झूला झूल  रहे थे', चश्मदीद बोले - Morbi Bridge Collapse eyewitness of accident  claimed some boys were deliberately shaking the

Gujarat bridge collapse: Know history of the iconic 143-year-old hanging  bridge

ಇತ್ತೀಚೆಗೆ ಆರು ತಿಂಗಳ ಹಿಂದೆ ಮಾರ್ಚ್ ತಿಂಗಳಲ್ಲಿ ಸೇತುವೆಯಲ್ಲಿ ಜನ ಸಂಚಾರವನ್ನು ನಿಷೇಧಿಸಲಾಗಿತ್ತು. ಮೋರ್ಬಿ ಮಹಾನಗರ ಪಾಲಿಕೆಯಿಂದ ನಿರ್ವಹಿಸಲ್ಪಡುತ್ತಿದ್ದ ಸೇತುವೆಯನ್ನು ದುರಸ್ತಿ ಪಡಿಸಲು ಖಾಸಗಿ ಕಂಪನಿಗೆ ವಹಿಸಲಾಗಿತ್ತು. ಅಕ್ಟೋಬರ್ ವೇಳೆಗೆ ದುರಸ್ತಿ ಕಾರ್ಯ ಮುಗಿದಿದ್ದರೂ, ಜನ ಸಂಚಾರಕ್ಕೆ ಬಿಟ್ಟು ಕೊಟ್ಟಿರಲಿಲ್ಲ. ಈ ನಡುವೆ, ಸೇತುವೆಯನ್ನು 15 ವರ್ಷಗಳ ಅವಧಿಗೆ ನೋಡಿಕೊಳ್ಳಲು ಒರೆವಾ ಎನ್ನುವ ಕಂಪನಿಗೆ ವಹಿಸಲಾಗಿತ್ತು. ಅ.26ರಂದು ಗುಜರಾತಿಗಳ ಪಾಲಿಗೆ ವಿಶೇಷ ದಿನವಾಗಿದ್ದು, ಪ್ರವಾಸಿಗಳ ಆಕರ್ಷಣೆಯಾಗಿದ್ದ ಮೋರ್ಬಿ ಸೇತುವೆಯನ್ನು ಜನ ಸಂಚಾರಕ್ಕೆ ಬಿಡಲಾಗಿತ್ತು.

gujarat bridge collapse: Collapsed Morbi suspension bridge had reopened 4  days back after 7-month-long repair work; lacked civic body's fitness  certificate - The Economic Times

ಆದರೆ ಮೋರ್ಬಿ ಮಹಾನಗರ ಪಾಲಿಕೆಗೆ ಸೇತುವೆ ದುರಸ್ತಿ ಪಡಿಸಿರುವ ಬಗ್ಗೆ ಫಿಟ್ನೆಸ್ ಸರ್ಟಿಫಿಕೇಟನ್ನು ಕಂಪನಿ ನೀಡಿರಲಿಲ್ಲ ಎನ್ನಲಾಗುತ್ತಿದೆ. ಮಹಾನಗರ ಪಾಲಿಕೆಯ ಕಮಿಷನರ್ ಸಂದೀಪಾ ಝಾಲ, ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ದುರಸ್ತಿ ಪಡಿಸಲು ಗುತ್ತಿಗೆ ನೀಡಲಾಗಿತ್ತು. ಕೆಲಸ ಪೂರ್ತಿಗೊಂಡ ಬಳಿಕ ಫಿಟ್ನೆಸ್ ಸರ್ಟಿಫಿಕೇಟ್ ನೀಡಿರಲಿಲ್ಲ. ಜನ ಸಂಚಾರಕ್ಕೆ ಮುಕ್ತಗೊಳಿಸುವುದಕ್ಕೂ ಮುನ್ನ ಮಹಾನಗರ ಪಾಲಿಕೆಯ ಅನುಮತಿ ಪಡೆಯಬೇಕಿತ್ತು. ಕಂಪನಿ ಪ್ರತಿನಿಧಿಗಳು ಪಾಲಿಕೆಗೆ ಮಾಹಿತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಘಟನೆ ಸಂಬಂಧಿಸಿ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಾಗಿದೆ.

Morbi suspension bridge had reopened 5 days back after renovation; lacked  'fitness' certificate | India News | Zee News

Some youngsters shook Morbi bridge intentionally: Visitor recounts  experience | Latest News India - Hindustan Times

ಜನರ ದಟ್ಟಣೆ ನಿಯಂತ್ರಿಸಲು ವ್ಯವಸ್ಥೆ ಇರಲಿಲ್ಲ  

ಭಾನುವಾರ ಸಂಜೆ 6.30ರ ವೇಳೆಗೆ ತೂಗು ಸೇತುವೆ ಮುರಿದು ಬಿದ್ದಿದೆ. ಅತಿಯಾದ ಜನ ದಟ್ಟಣೆಯಿಂದಾಗಿಯೇ ಸೇತುವೆ ಮುರಿದು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದೀಪಾವಳಿ ರಜೆ ಮತ್ತು ವೀಕೆಂಡ್ ಆಗಿದ್ದರಿಂದ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅಲ್ಲಿದ್ದ ಸಿಬಂದಿ ಟಿಕೆಟ್ ವಿತರಿಸಲು ಮಾತ್ರ ಗಮನ ನೀಡುತ್ತಿದ್ದರು. ಸೇತುವೆಯ ಭದ್ರತೆ ಬಗ್ಗೆ ಗಮನ ಇರಲಿಲ್ಲ. ಈ ಬಗ್ಗೆ ಸಿಬಂದಿ ಬಳಿ ಕೇಳಿದರೆ, ಜನರನ್ನು ನಿಯಂತ್ರಣ ಮಾಡಲು ಯಾವುದೇ ವ್ಯವಸ್ಥೆ ನಮ್ಮಲ್ಲಿ ಇಲ್ಲ ಎನ್ನುತ್ತಿದ್ದರು. ನಾವು ಕುಟುಂಬ ಸಮೇತ ಬಂದಿದ್ದೆವು. ಅಲ್ಲಿ ಸೇರಿದ್ದ ಜನರನ್ನು ನೋಡಿ ಹಿಂದಿರುಗಿದ್ದೆವು. ಕೆಲವು ಯುವಕರು ಸೇತುವೆಯ ಮಧ್ಯಭಾಗದಲ್ಲಿ ನಿಂತು ಅಲುಗಾಡಿಸುತ್ತಿದ್ದರು. ಇದರಿಂದಾಗಿಯೇ ಸೇತುವೆ ಕುಸಿದು ಹೋಗಿದೆ ಎಂದು ಸೇತುವೆ ಸ್ಥಳಕ್ಕೆ ಭೇಟಿ ನೀಡಿದ್ದ ಅಹ್ಮದಾಬಾದ್ ನಿವಾಸಿ ವಿಜಯ್ ಗೋಸ್ವಾಮಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

Disaster struck a century-old suspension bridge on Machchhu river in Gujarat’s Morbi city on Sunday evening. Around 6.30 pm on Sunday when the bridge (also known as Julto Pul) was crowded with women and several children, it snapped, plunging tourists into the water below.