ಬ್ರೇಕಿಂಗ್ ನ್ಯೂಸ್
31-10-22 03:39 pm HK News Desk ದೇಶ - ವಿದೇಶ
ಗಾಂಧಿನಗರ, ಅ.31: ಗುಜರಾತಿನ ಮೋರ್ಬಿ ಜಿಲ್ಲೆಯಲ್ಲಿ ನಡೆದಿರುವ ತೂಗುಸೇತುವೆ ದುರಂತ ಜಗತ್ತಿನ ಗಮನ ಸೆಳೆದಿದೆ. ಪ್ರವಾಸಿಗರು ಕಿಕ್ಕಿರಿದು ತುಂಬಿದ್ದಾಗಲೇ ತೂಗು ಸೇತುವೆ ಮುರಿದು ಬಿದ್ದಿರುವುದು ಆಡಳಿತದ ನಿರ್ಲಕ್ಷ್ಯ ಎನ್ನುವ ಆರೋಪ ಕೇಳಿಬಂದಿದೆ. ದುರಂತದಲ್ಲಿ 133 ಮಂದಿ ಮಡಿದಿರುವ ಬಗ್ಗೆ ಹೇಳಲಾಗುತ್ತಿದ್ದು, ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ಘಟನೆಯಲ್ಲಿ ಬದುಕಿ ಬಂದವರು ಅಲ್ಲಿನ ನಾನಾ ರೀತಿಯ ಚಿತ್ರಣಗಳನ್ನು ಮಾಧ್ಯಮಕ್ಕೆ ಹೇಳತೊಡಗಿದ್ದಾರೆ.
ನನಗೇನು ಆಗುತ್ತಿದೆ ಅಂತಲೇ ಗೊತ್ತಾಗಲಿಲ್ಲ. ನೀರಿಗೆ ಬೀಳುತ್ತಲೇ ಸೇತುವೆ ಮುರಿದು ಬಿದ್ದಿರುವುದು ಗೊತ್ತಾಗಿತ್ತು. ನನಗೆ ಸಿಕ್ಕಿದ ಸೇತುವೆಯ ಹಗ್ಗದಲ್ಲಿ ಎರಡು ಗಂಟೆ ಕಾಲ ನೇತಾಡುತ್ತಿದ್ದೆ. ನನ್ನ ಕಣ್ಣೆದುರಲ್ಲೇ ಮಕ್ಕಳು, ಮಹಿಳೆಯರು ನೀರಿಗೆ ಬೀಳುತ್ತಿದ್ದರು. ಅವರನ್ನು ರಕ್ಷಣೆ ಮಾಡಬೇಕು ಅನಿಸಿದರೂ, ನನಗೆ ಈಜು ಬರುತ್ತಿರಲಿಲ್ಲ. ನೀರಿನಲ್ಲಿ ಒದ್ದಾಡಿ ಪ್ರಾಣ ಬಿಡುತ್ತಿದ್ದರು ಎಂದು ಬದುಕಿ ಬಂದ ಯುವಕನೊಬ್ಬ ಇಂಡಿಯಾ ಟುಡೇ ಜೊತೆ ದುರಂತವನ್ನು ವಿವರಿಸಿದ್ದಾನೆ.
ಸೇತುವೆ ಬೀಳುತ್ತಿದ್ದಾಗ ನನ್ನ ಜೊತೆಗೆ ಸೋದರನೂ ಇದ್ದ. ಆತ ಒಂದ್ಕಡೆಯಲ್ಲಿದ್ದರೆ, ನಾನು ಇನ್ನೊಂದು ಕಡೆ ಇದ್ದೆ. ಸೇತುವೆ ಬಿದ್ದಾಗ ಕೈಗೆ ಸಿಕ್ಕಿದ್ದರಲ್ಲಿ ನೇತಾಡಿಕೊಂಡಿದ್ದೆ. ಸೋದರ ಎಲ್ಲಿದ್ದಾನೆ ಅಂತಲೇ ಗೊತ್ತಾಗಲಿಲ್ಲ. ಆನಂತರ ಪೊಲೀಸರು ನನ್ನ ಸೋದರನ ಶವ ಸೇತುವೆಯ ಅಡಿಭಾಗದಲ್ಲಿ ಸಿಕ್ಕಿರುವುದಾಗಿ ನನ್ನಲ್ಲಿ ಹೇಳಿದರು. ಶವವನ್ನು ಕ್ರೇನ್ ಮೂಲಕ ಸೇತುವೆಯ ಅಡಿಯಿಂದ ಮೇಲಕ್ಕೆತ್ತಲಾಯಿತು. ನಾನು ಸೇತುವೆಯ ಮಧ್ಯ ಭಾಗದಲ್ಲಿ ನಿಂತುಕೊಂಡಿದ್ದೆ. ನಡು ಭಾಗದಲ್ಲಿಯೇ ಸೇತುವೆ ಮುರಿದಿದ್ದು ನೇರವಾಗಿ ನದಿಗೆ ಬಿದ್ದಿದೆ. ಜನರು ಹೆಚ್ಚಿದ್ದರಿಂದಲೇ ದುರಂತ ಸಂಭವಿಸಿದೆ ಎಂದು ಆತ ದುರಂತದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾನೆ.
ಮೋರ್ಬಿ ಮಹಾನಗರ ಪಾಲಿಕೆಯವರು ಸೇತುವೆ ಜನಸಂಚಾರಕ್ಕೆ ಬಿಟ್ಟು ಕೊಟ್ಟಿರುವುದು ಗೊತ್ತಿರಲಿಲ್ಲ ಎಂದಿರುವ ಬಗ್ಗೆ ಆ ವ್ಯಕ್ತಿ ಟೀಕಿಸಿದ್ದಾನೆ. ಮಹಾನಗರ ಪಾಲಿಕೆಗೆ ಗೊತ್ತಿಲ್ಲಾಂದ್ರೆ ಯಾಕೆ ಓಪನ್ ಮಾಡಬೇಕಿತ್ತು. ಇವರು ಪರ್ಮಿಷನ್ ಕೊಟ್ಟಿರದೇ ಇದ್ದರೆ ಅವರು ಹೇಗೆ ಓಪನ್ ಮಾಡಿದ್ದರು ಎಂದು ಪ್ರಶ್ನಿಸಿದ್ದಾನೆ.
ಇದೇ ವೇಳೆ, ಮೋರ್ಬಿ ಮಹಾನಗರ ಪಾಲಿಕೆಯ ಕಮಿಷನರ್ ಸಂದೀಪ್ ಸಿಂಗ್ ಇಂಡಿಯಾ ಟುಡೇ ಜೊತೆಗೆ ಮಾತನಾಡಿದ್ದು, ಸೇತುವೆ ದುರಸ್ತಿಯಾದ ಬಳಿಕ ಕಂಪನಿಯ ಕಡೆಯಿಂದ ಫಿಟ್ನೆಸ್ ಸರ್ಟಿಫಿಕೇಟ್ ಕೊಟ್ಟಿರಲಿಲ್ಲ. ಅದೊಂದು ಐತಿಹಾಸಿಕ ತೂಗುಸೇತುವೆಯಾಗಿತ್ತು. ಹಾಗಿದ್ದರೂ, ಅದರಲ್ಲಿ ಒಂದು ಬಾರಿಗೆ 20-25 ಮಂದಿಯಷ್ಟೇ ಹೋಗಲು ಅವಕಾಶ ಇತ್ತು. ಕಂಪನಿ ಸಿಬಂದಿಯ ನಿರ್ಲಕ್ಷ್ಯದಿಂದ ಇಂಥ ದುರಂತ ಆಗಿದೆ. ಒಮ್ಮೆಗೆ 400-500 ಜನರು ಬಂದಿದ್ದಾಗ ವ್ಯವಸ್ಥೆ ಮಾಡಬೇಕಿತ್ತು ಎಂದು ಹೇಳಿದ್ದಾರೆ. ಆಮೂಲಕ ಮಹಾನಗರ ಪಾಲಿಕೆಯ ನಿರ್ಲಕ್ಷ್ಯವನ್ನು ಕಂಪನಿ ಕಡೆಗೆ ವರ್ಗಾಯಿಸಿದ್ದಾರೆ.
As many as 133 people were killed after a suspension bridge collapsed in the Machchhu river in Gujarat's Morbi district on Sunday evening. A victim of the incident narrated the 'horror story' of the Morbi bridge collapse."I thought I was dreaming, but when I fell into the water, I got to know what happened. I was hanging for two hours to save my life. Many children were drowning in front of me.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm