ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಮೇಲೆ ಗುಂಡಿನ ದಾಳಿ, ಅಪಾಯದಿಂದ ಪಾರು ; ಅಲ್ಲಾ ನನ್ನನ್ನು ರಕ್ಷಿಸಿದ್ದಾರೆ ಎಂದ ಖಾನ್ 

03-11-22 09:52 pm       HK News Desk   ದೇಶ - ವಿದೇಶ

​​​​ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಕಾಲಿಗೆ ಗುಂಡು ತಗಲಿರುವ ಅವರು ಅಪಾಯದಿಂದ ಪಾರಾಗಿದ್ದಾರೆ. 

ಇಸ್ಲಮಾಬಾದ್, ನ.3 : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಕಾಲಿಗೆ ಗುಂಡು ತಗಲಿರುವ ಅವರು ಅಪಾಯದಿಂದ ಪಾರಾಗಿದ್ದಾರೆ. 

ವಾಜಿರಾಬಾದ್ ನಲ್ಲಿ ತಮ್ಮ ತೆಹ್ರೀಕ್ ಇ ಪಾಕಿಸ್ತಾನ್ ಪಕ್ಷದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ವೇಳೆ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿ ಘಟನೆಯಲ್ಲಿ ಇಮ್ರಾನ್ ಖಾನ್ ಸೇರಿ 15 ಜನರು ಗಾಯಗೊಂಡಿದ್ದಾರೆ.‌ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. 

Assassination bid, says Pakistan's PTI on firing that wounded ex-PM Imran  Khan | World News - Hindustan Times

Imran Khan shot in leg in 'assassination attempt', former Pakistan prime  minister's supporters say | World News | Sky News

ವಜೀರಾಬಾದ್‌ನ ಅಲ್ಲಾ ಹೋ ಚೌಕ್ ಬಳಿ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವ್ರ ಕಂಟೈನರ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಇಮ್ರಾನ್ ಖಾನ್ ಅವರ ಎರಡೂ ಕಾಲಿಗೆ ಗುಂಡು ತಗುಲಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. 

Former Pakistan PM Imran Khan injured in firing during rally - India Today

Imran Khan: Former Pakistan cricketer and Prime Minister shot in leg in  apparent assassination attempt | Cricket News | Sky Sports

ಗುಂಡಿನ ದಾಳಿ ಬಳಿಕ ಇಮ್ರಾನ್ ಅವರು ತಮ್ಮ ಆಪ್ತರೊಂದಿಗೆ ಪ್ರತಿಕ್ರಿಯಿಸಿದ್ದು, ಅವರು ನನ್ನನ್ನು ಕೊಲ್ಲಲು ಬಯಸಿದ್ದರು. ಆದರೆ ನನ್ನನ್ನು ಅಲ್ಲಾ ರಕ್ಷಣೆ ಮಾಡ್ತಾನೆ ಅಂತ ಅವರಿಗೆ ಗೊತ್ತಿರಲಿಲ್ಲ. ಅಲ್ಲಾ ನನಗೆ ಪುನರ್ಜನ್ಮ ನೀಡಿದ್ದಾರೆ. ನಾನು ಮತ್ತೆ ಬರುತ್ತೇನೆ, ವಿರೋಧಿಗಳನ್ನು ಸದೆಬಡಿಯುತ್ತೇನೆ, ತಿರುಗಿ ಬೀಳುತ್ತೇನೆ ಎಂದಿದ್ದಾರೆ. ಇಮ್ರಾನ್ ಮೇಲಿನ ದಾಳಿ ಘಟನೆಯನ್ನು ಪಾಕ್ ಅಧ್ಯಕ್ಷ ಶೆಹಬಾದ್ ಷರೀಫ್ ಖಂಡಿಸಿದ್ದಾರೆ.

Imran Khan, the former prime minister of Pakistan, has sustained a bullet injury in his leg after a gunman opened fire at a rally in Wazirabad, in the country’s east.The former cricket star, who was leading a protest march demanding snap elections, was out of danger and taken to a hospital in Lahore for treatment, Azhar Mashwani, an official with Khan’s Pakistan Tehreek-e-Insaf (PTI) party.