ಮೋರ್ಬಿ ಸೇತುವೆ ದುರಂತ ; ಗುಜರಾತ್ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್, ವಾರದಲ್ಲಿ ವರದಿ ಸಲ್ಲಿಕೆಗೆ ಸೂಚನೆ

07-11-22 05:28 pm       HK News Desk   ದೇಶ - ವಿದೇಶ

ಮೋರ್ಬಿ ಸೇತುವೆ ದುರಂತದ ಬಗ್ಗೆ ಗುಜರಾತ್ ಸರಕಾರಕ್ಕೆ ನೋಟೀಸ್ ಜಾರಿ ಮಾಡಿರುವ ಹೈಕೋರ್ಟ್, ವಾರದೊಳಗೆ ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ತಾಕೀತು ಮಾಡಿದೆ.

ಅಹ್ಮದಾಬಾದ್, ನ.7: ಮೋರ್ಬಿ ಸೇತುವೆ ದುರಂತದ ಬಗ್ಗೆ ಗುಜರಾತ್ ಸರಕಾರಕ್ಕೆ ನೋಟೀಸ್ ಜಾರಿ ಮಾಡಿರುವ ಹೈಕೋರ್ಟ್, ವಾರದೊಳಗೆ ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ತಾಕೀತು ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ಆಶುತೋಷ್ ಶಾಸ್ತ್ರಿ ಅವರಿದ್ದ ನ್ಯಾಯಪೀಠವು, ರಾಜ್ಯದ ಮುಖ್ಯ ಕಾರ್ಯದರ್ಶಿಯಿಂದಲೂ ವರದಿ ಕೇಳಿದೆ. ನಾವು ದುರಂತ ಎದುರುಗೊಂಡು ಹೊಸ ವರ್ಷವನ್ನು ಆಚರಿಸುತ್ತಿರುವುದು ನೋವುಂಟು ಮಾಡಿದೆ. ದುರಂತ ಘಟನೆ ಬಗ್ಗೆ ಒಂದು ವರ್ಷದೊಳಗೆ ಕ್ರಮ ಕೈಗೊಳ್ಳಬೇಕೆಂದು ಬಯಸುತ್ತೇವೆ. ಇದಕ್ಕಾಗಿ ಸರಕಾರದ ಕಡೆಯಿಂದ ಯಾವ ರೀತಿ ಕ್ರಮ ಕೈಗೊಂಡಿದ್ದೀರಿ ಅಥವಾ ಕ್ರಮ ಕೈಗೊಂಡಿಲ್ಲ ಎನ್ನುವ ಬಗ್ಗೆ ತಿಳಿಯಬಯಸುತ್ತೇವೆ ಎಂದು ಹೇಳಿದೆ. ಸರಕಾರದ ಪರ ಹಾಜರಿದ್ದ ವಕೀಲ ಕುಮಾರ್ ತ್ರಿವೇದಿ, ರಾಜ್ಯ ಸರಕಾರದಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದು ನೋಟೀಸಿಗೆ ಉತ್ತರಿಸುವುದಾಗಿ ತಿಳಿಸಿದ್ದಾರೆ.

ಪ್ರಕರಣ ಕುರಿತು ಕೈಗೊಂಡಿರುವ ಕ್ರಮಗಳ ಕುರಿತು ನ.14ರ ಒಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ. ಅಲ್ಲದೆ, ಘಟನೆ ಬಗ್ಗೆ ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡಿರುವುದಾಗಿ ಹೇಳಿರುವ ನ್ಯಾಯಪೀಠವು, ಇದಕ್ಕೆ ಸಂಬಂಧಿಸಿ ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಗೆ ಸೂಚನೆ ನೀಡಿದೆ. ಪಿಐಎಲ್ ವಿಚಾರಣೆಯನ್ನು ನ.14ರಂದೇ ಕೋರ್ಟ್ ನಡೆಸಲಿದೆ. ಅ.30ರಂದು ಪಶ್ಚಿಮ ಗುಜರಾತಿನ ಮೋರ್ಬಿ ಜಿಲ್ಲೆಯಲ್ಲಿ ಶತಮಾನದಷ್ಟು ಹಳೆಯದಾದ ತೂಗು ಸೇತುವೆಯು ಜನ ದಟ್ಟಣೆಯಿಂದಾಗಿ ಕುಸಿದು ಬಿದ್ದು 135 ಜನರು ಮೃತಪಟ್ಟಿದ್ದರು.

The Gujarat High Court has taken a suo motu cognizance of the Morbi bridge collapse incident, issuing a notice to the state government officials including the Home Department, Urban Housing department, the Morbi Municipality, and the State Human Rights Commission. The high court has sought a report from the state, within a week, on the accident in Morbi that claimed more than 130 lives. Among those who had died were more than 40 children.