ವಂದೇ ಭಾರತ್ ರೈಲಿಗೆ ಸಿಲುಕಿ ಗುಜರಾತಿನಲ್ಲಿ ಮಹಿಳೆ ಸಾವು! ಹಳಿ ದಾಟುತ್ತಿದ್ದಾಗ ಘಟನೆ 

08-11-22 08:39 pm       HK News Desk   ದೇಶ - ವಿದೇಶ

ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ 54 ವರ್ಷದ ಮಹಿಳೆ ಸಾವನ್ನಪ್ಪಿದ ಘಟನೆ ಗುಜರಾತಿನಲ್ಲಿ ನಡೆದಿದೆ.  ಮಂಗಳವಾರ ಆನಂದ್ ರೈಲು ನಿಲ್ದಾಣದ ಬಳಿ ಮುಂಬೈಗೆ ತೆರಳುತ್ತಿದ್ದ ರೈಲಿಗೆ ಸಿಲುಕಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. 

ಅಹ್ಮದಾಬಾದ್, ನ.8 : ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ 54 ವರ್ಷದ ಮಹಿಳೆ ಸಾವನ್ನಪ್ಪಿದ ಘಟನೆ ಗುಜರಾತಿನಲ್ಲಿ ನಡೆದಿದೆ.  ಮಂಗಳವಾರ ಆನಂದ್ ರೈಲು ನಿಲ್ದಾಣದ ಬಳಿ ಮುಂಬೈಗೆ ತೆರಳುತ್ತಿದ್ದ ರೈಲಿಗೆ ಸಿಲುಕಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. 

ಮೃತ ಮಹಿಳೆಯನ್ನು ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್ ಎಂದು ಗುರುತಿಸಲಾಗಿದ್ದು, ಸಂಜೆ 4.37 ಕ್ಕೆ ಹಳಿ ದಾಟುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‌

ಅಹಮದಾಬಾದ್‌ ನಿವಾಸಿ ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್, ಆನಂದ್‌ನಲ್ಲಿರುವ ಸಂಬಂಧಿಕರನ್ನು ಭೇಟಿಯಾಗಲು ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ರೈಲು ಗಾಂಧಿನಗರ ರಾಜಧಾನಿ ನಿಲ್ದಾಣದಿಂದ ಮುಂಬೈ ಸೆಂಟ್ರಲ್‌ಗೆ ತೆರಳುತ್ತಿತ್ತು. ಆನಂದ್‌ನಲ್ಲಿ ಅದಕ್ಕೆ ನಿಲುಗಡೆ ಇಲ್ಲ. ಅಪಘಾತದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 30 ರಂದು ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು. ಕಳೆದ ಒಂದು ತಿಂಗಳಲ್ಲಿ ಇದೇ ರೈಲಿಗೆ ಸಿಲುಕಿ ದನ, ಎಮ್ಮೆ ಸಾವನ್ನಪ್ಪಿದ ಘಟನೆಗಳು ಮೂರು ಬಾರಿ ನಡೆದಿವೆ.

A 54-year-old woman died after she was hit by semi high-speed Vande Bharat Express train in Gujarat on Tuesday afternoon.