ಬ್ರೇಕಿಂಗ್ ನ್ಯೂಸ್
10-11-22 09:43 pm HK News Desk ದೇಶ - ವಿದೇಶ
ಕಾಸರಗೋಡು, ನ.10 : ಬದಿಯಡ್ಕದ ಪ್ರಸಿದ್ಧ ದಂತವೈದ್ಯ ಡಾ.ಕೃಷ್ಣಮೂರ್ತಿ ಸರ್ಪಂಗಳ (57) ಅವರು ದಿಢೀರ್ ನಾಪತ್ತೆಯಾಗಿದ್ದು ಬದಿಯಡ್ಕ ಪರಿಸರದಲ್ಲಿ ಸಂಚಲನ ಮೂಡಿಸಿದೆ. ನಾಪತ್ತೆ ಹಿಂದೆ ಸ್ಥಳೀಯ ಮಾಫಿಯಾ ಕೈವಾಡ ಇದೆ, ಬೆದರಿಕೆಯ ಕಾರಣ ವೈದ್ಯರು ನಾಪತ್ತೆ ಆಗಿದ್ದಾರೆ ಎಂದು ವೈದ್ಯರ ಸಂಘದ ಸದಸ್ಯರು ಮತ್ತು ಸ್ಥಳೀಯ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಬದಿಯಡ್ಕ ದಂತವೈದ್ಯ ಡಾ.ಕೃಷ್ಣಮೂರ್ತಿ ಅವರ ಕ್ಲಿನಿಕ್‌ಗೆ ಮಂಗಳವಾರ ಮುಸ್ಲಿಂ ಗುಂಪು ಆಗಮಿಸಿದ್ದು, ಮಹಿಳೆಯ ಚಿಕಿತ್ಸೆ ವಿಚಾರದಲ್ಲಿ ವಾಗ್ವಾದ ನಡೆಸಿದ್ದರು. ನಿಮ್ಮನ್ನು ಬದುಕಲು ಬಿಡಲ್ಲ ಎಂದು ಬೆದರಿಸಿ ತೆರಳಿತ್ತು. ಇದರಿಂದ ಬೆದರಿದ ಕೃಷ್ಣಮೂರ್ತಿ ಅವರು ಬೈಕ್ ನಲ್ಲಿ ತರಾತುರಿಯಲ್ಲಿ ಎದ್ದು ಹೋಗಿದ್ದು ಆನಂತರ ನಾಪತ್ತೆಯಾಗಿದ್ದಾರೆ.
ಬುಧವಾರ ಸಂಜೆ ಕುಂಬಳೆಯಲ್ಲಿ ವೈದ್ಯರ ಬೈಕ್ ಪತ್ತೆಯಾಗಿತ್ತು. ಮೊಬೈಲ್ ಫೋನ್ ಒಯ್ಯದ ಕಾರಣ, ವೈದ್ಯರು ಎಲ್ಲಿ ಹೋಗಿದ್ದಾರೆಂದು ತಿಳಿಯದೆ ಸಂಬಂಧಿಕರು ಗಾಬರಿಗೊಂಡಿದ್ದಾರೆ. ಈ ನಡುವೆ, ಪೊಲೀಸರಿಗೆ ದೂರು ನೀಡಿದ್ದರೂ ಆರಂಭದಲ್ಲಿ ದೂರು ಸ್ವೀಕರಿಸದೆ ನಿರ್ಲಕ್ಷ್ಯ ವಹಿಸಿದ್ದರು ಎನ್ನುವ ಆರೋಪ ಕೇಳಿಬಂದಿದೆ.
ಮೂಲಗಳ ಪ್ರಕಾರ, ಕ್ಲಿನಿಕ್‌ಗೆ ಕಳೆದ ಶನಿವಾರ ಒಬ್ಬ ಮಹಿಳೆ ಬಂದು ಚಿಕಿತ್ಸೆ ಪಡೆದು ಹೋಗಿದ್ದರು. ಸೋಮವಾರ ಬೆಳಗ್ಗೆ ಮಹಿಳೆಯ ಕಡೆಯವರು ಬಂದು ಡಾಕ್ಟರ್ ಬಳಿ, ಮಹಿಳೆಯ ಜತೆಗೆ ಅಸಭ್ಯ ವರ್ತನೆ ತೋರಿದ್ದೀರಿ ಎಂದು ಆರೋಪಿಸಿ ಗಲಾಟೆ ಮಾಡಿದ್ದರು. ಸಂಜೆ ಮತ್ತೆ ಮಾತುಕತೆಗೆ ಬರುವುದಾಗಿ ಹೇಳಿ ಹೋಗಿದ್ದರು. ಇದರಿಂದ ಡಾ.ಕೃಷ್ಣಮೂರ್ತಿ ಬಹಳ ಕಳವಳಗೊಂಡಿದ್ದರು. ಆದರೆ ಅಂದು ಸಂಜೆ ಯಾರೂ ಬಂದಿರಲಿಲ್ಲ. ಮಾರನೇ ದಿನ ಬೆಳಗ್ಗೆ ಮುಸ್ಲಿಂ ಲೀಗ್ ಸ್ಥಳೀಯ ನಾಯಕರು ಕ್ಲಿನಿಕ್‌ಗೆ ಬಂದಿದ್ದು ಏರುಧ್ವನಿಯಲ್ಲಿ ಮಾತುಕತೆ ನಡೆಸಿದ್ದರು. ಅದೇ ಸಂದರ್ಭದಲ್ಲಿ ವೈದ್ಯರು ಬೈಕ್ ಕೀ ಎತ್ತಿಕೊಂಡು, ʻಇವರು ನನ್ನನ್ನು ಬದುಕಲು ಬಿಡುವುದಿಲ್ಲʼ ಎನ್ನುತ್ತ ಹೊರಗೆ ಬಂದಿದ್ದರು. ಆನಂತರ ಕೃಷ್ಣಮೂರ್ತಿ ಎಲ್ಲಿ ಹೋಗಿದ್ದಾರೆಂದು ಯಾರಿಗೂ ಮಾಹಿತಿ ಇಲ್ಲ.
ಪೊಲೀಸರು ಕೂಡ ನಿರ್ಲಕ್ಷ್ಯ ವಹಿಸಿದ್ದರಿಂದ ಮಾಹಿತಿ ತಿಳಿದ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಕಾಸರಗೋಡು ಎಸ್ಪಿಗೆ ಮಾಹಿತಿ ನೀಡಿದ್ದರು. ಜಿಲ್ಲಾ ಎಸ್ಪಿ ಸೂಚನೆಯಂತೆ, ಬದಿಯಡ್ಕ ಪೊಲೀಸರು ಗುರುವಾರ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ನಿರ್ಲಕ್ಷ್ಯ ಮತ್ತು ಸ್ಥಳೀಯವಾಗಿ ಮುಸ್ಲಿಂ ಲೀಗ್ ನಾಯಕರು ವೈದ್ಯರಿಗೆ ಬೆದರಿಕೆ ಹಾಕಿದ್ದರೆಂಬ ಸುದ್ದಿ ಹರಡಿದ್ದರಿಂದ ಹಿಂದು ಸಂಘಟನೆಗಳ ಕಾರ್ಯಕರ್ತರು ಬದಿಯಡ್ಕ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ ಸ್ಥಳಕ್ಕೆ ಬಂದು ಪೊಲೀಸರಿಗೆ ಎಚ್ಚರಿಕೆ ನೀಡಿದ್ದು ವೈದ್ಯರ ನಾಪತ್ತೆ ವಿಚಾರವನ್ನು ಕ್ಷುಲ್ಲಕವಾಗಿ ಪರಿಗಣಿಸಿದರೆ ಅದರ ಪರಿಣಾಮ ಗಂಭೀರ ಆದೀತು. ಹಿಂದು ಸಮಾಜಕ್ಕೆ ಇಂತಹ ಪ್ರಕರಣಗಳನ್ನು ಹೇಗೆ ಎದುರಿಸಬೇಕೆಂದು ಗೊತ್ತಿದೆ. ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಪೊಲೀಸರು ಮಾಡಬೇಕು. ಇಲ್ಲದಿದ್ದರೆ ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ವೈದ್ಯರ ಸಂಘದ ಸದಸ್ಯರು, ನೂರಾರು ಮಂದಿ ವೈದ್ಯರ ಅಭಿಮಾನಿಗಳು ಸೇರಿದ್ದು ಪೊಲೀಸರ ವಿರುದ್ಧ ಘೋಷಣೆ ಕೂಗಿದ್ದಾರೆ.
A renowned dentist of the Badiadka has gone missing since November 8. A case in this regard has been registered with the Badiadka police.
17-07-25 07:45 pm
Bangalore Correspondent
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 06:30 pm
Mangalore Correspondent
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
17-07-25 02:30 pm
Mangalore Correspondent
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am