ಕಬ್ಬು ತುಂಬಿದ ಟ್ರ್ಯಾಕ್ಟರ್​ ಹರಿದು ಗರ್ಭಿಣಿ ಸ್ಥಳದಲ್ಲೇ ಸಾವು 

15-11-22 05:54 pm       HK News Desk   ದೇಶ - ವಿದೇಶ

ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ಟ್ರಾಲಿಯ ಚಕ್ರಕ್ಕೆ ಸಿಲುಕಿ ಗರ್ಭಿಣಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜುನ್ನಾರ್ ತಾಲೂಕಿನಲ್ಲಿ ನಡೆದಿದೆ. ಈ ಘಟನೆಯಿಂದ ಮಹಿಳೆಯ ಹೊಟ್ಟೆಯಲ್ಲಿ ಶಿಶು ಕೂಡ ಹುಟ್ಟುವ ಮೊದಲೇ ಪ್ರಾಣ ಕಳೆದುಕೊಂಡಿದೆ.

ಪುಣೆ,ನ 15: ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ಟ್ರಾಲಿಯ ಚಕ್ರಕ್ಕೆ ಸಿಲುಕಿ ಗರ್ಭಿಣಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜುನ್ನಾರ್ ತಾಲೂಕಿನಲ್ಲಿ ನಡೆದಿದೆ. ಈ ಘಟನೆಯಿಂದ ಮಹಿಳೆಯ ಹೊಟ್ಟೆಯಲ್ಲಿ ಶಿಶು ಕೂಡ ಹುಟ್ಟುವ ಮೊದಲೇ ಪ್ರಾಣ ಕಳೆದುಕೊಂಡಿದೆ.

ಜುನ್ನಾರ್ ತಾಲೂಕಿನ ನಿಮ್ದಾರಿ ನಿವಾಸಿ ವಿದ್ಯಾ ಕಂಸ್ಕರ್ (22) ಎಂಬುವವರೇ ಮೃತರು. ತುಂಬು ಗರ್ಭಿಣಿಯಾಗಿದ್ದ ವಿದ್ಯಾ ಕಾರಿನಲ್ಲಿ ಪತಿ ರಮೇಶ್ ಮತ್ತು ತಾಯಿಯೊಂದಿಗೆ ತಪಾಸಣೆಗಾಗಿ ನಾರಾಯಣಗಾಂವ್​ಗೆ ತೆರಳಿದ್ದರು. ಆಸ್ಪತ್ರೆಯಿಂದ ಹಿಂತಿರುಗುತ್ತಿದ್ದಾಗ ವಾರುಲ್ವಾಡಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದರಿಂದ ವಿದ್ಯಾ ಕಾರಿನಿಂದ ಕೆಳಗಿಳಿದಿದ್ದರು. ಒಂದೇ ಇಂಜಿನ್​ಗೆ ಎರಡು ಟ್ರಾಲಿಗಳು ಜೋಡಿಸಿದ್ದ ಟ್ರ್ಯಾಕ್ಟರ್​ ವಿದ್ಯಾಗೆ ಡಿಕ್ಕಿ ಹೊಡೆದಿದೆ.

ಇದರಿಂದ ರಸ್ತೆಗೆ ಬಿದ್ದ ವಿದ್ಯಾರ ತಲೆ ಮೇಲೆ ಟ್ರಾಲಿಯ ಚಕ್ರ ಹರಿದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ನಂತರ ಸ್ಥಳೀಯರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ, ಪತಿ ರಮೇಶ್ ಕಂಸ್ಕರ್ ನೀಡಿದ ದೂರಿನ ಮೇರೆಗೆ ಟ್ರ್ಯಾಕ್ಟರ್​ ಚಾಲಕ ಗೋರಕ್ಷ್ ಸುಖದೇವ್ ಧೆಬರೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

Junnar taluka of Pune district has a shocking incident. A 22-year-old pregnant woman died on the spot after she was found under a sugarcane trolley. As the two trolleys were connected to one mechanism, the woman died after the rear trolley was crushed. The incident took place at Warulwadi on Narayangaon-Savargaon road in Junnar taluka.