ಬ್ರೇಕಿಂಗ್ ನ್ಯೂಸ್
15-11-22 10:01 pm HK News Desk ದೇಶ - ವಿದೇಶ
ನವದೆಹಲಿ, ನ.15: ಹಿಂದು ಹುಡುಗಿಯನ್ನು ಪ್ರೀತಿಸಿ, ಜೊತೆಗೆ ಸುತ್ತಾಡಿದ್ದಲ್ಲದೆ ಮದುವೆಗೆ ಒತ್ತಾಯಿಸಿದ್ದಕ್ಕೆ ಅತ್ಯಂತ ಕ್ರೂರವಾಗಿ ಹಿಂಸಿಸಿ ಕೊಲೆಗೈದ ಮುಸ್ಲಿಂ ಯುವಕನ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ರಾಜಧಾನಿ ದೆಹಲಿಯಲ್ಲಿ ನಡೆದ ಭಯಾನಕ ಕೃತ್ಯದಲ್ಲಿ ಸಾಕ್ಷ್ಯವೇ ಸಿಗದಂತೆ ಮಾಡಿದ್ದ ಕ್ರೂರ ಘಟನೆಯ ಇಂಚಿಂಚು ಮಾಹಿತಿಗಳು ಹೊರಬಿದ್ದಿವೆ. ಶ್ರದ್ಧಾ ಎಂಬ ಅಮಾಯಕ ಹುಡುಗಿ ಮತ್ತು ಅಫ್ತಾಬ್ ಅಮೀನ್ ಪೂನಾವಾಲ ಎಂಬ ಕ್ರೂರಿಯ ನೈಜ ಕಥಾನಕ ಇಡೀ ದೇಶದ ಜನರ ಹೃದಯ ಕಲಕಿದೆ.
ಶ್ರದ್ಧಾಳನ್ನು ಕೊಂದು ಹಾಕಿದ್ದಲ್ಲದೆ, ಹೊರ ಜಗತ್ತಿಗೆ ಆಕೆ ಜೀವಂತವಾಗಿದ್ದಾಳೆಂದು ಬಿಂಬಿಸಲು ಶ್ರದ್ಧಾ ಬಳಕೆ ಮಾಡುತ್ತಿದ್ದ ಇನ್ ಸ್ಟಾ ಗ್ರಾಮನ್ನು ಅಫ್ತಾಬ್ ತಾನೇ ಬಳಕೆ ಮಾಡುತ್ತಿದ್ದ. ಜೂನ್ 9ರ ವರೆಗೂ ಆಕೆ ಬಳಸುತ್ತಿದ್ದ ಇನ್ ಸ್ಟಾ ಗ್ರಾಮ್ ಲೈವ್ ಲೀ ಇರುವಂತೆ ನೋಡಿಕೊಂಡಿದ್ದ. ಅಲ್ಲದೆ, 300 ಲೀಟರ್ ಸಾಮರ್ಥ್ಯದ ಫ್ರಿಡ್ಜ್ ನಲ್ಲಿ ಹೆಣವನ್ನು ಮಾಂಸದ ಪೀಸ್ ಗಳನ್ನಾಗಿಸಿ ಬಚ್ಚಿಟ್ಟು ಅದರ ವಾಸನೆ ಹೊರಗೆ ಅಪಾರ್ಟ್ಮೆಂಟ್ ನಲ್ಲಿ ಹರಡದಂತೆ ಅಗರಬತ್ತಿಗಳನ್ನು ಉರಿಸುತ್ತಿದ್ದ. ಅಲ್ಲದೆ, ರಕ್ತದ ಕಲೆಗಳನ್ನು ಸಾಕ್ಷಿ ಇಲ್ಲದಂತೆ ಒರೆಸಲು ಗೂಗಲ್ ನಲ್ಲಿ ಸರ್ಚ್ ಮಾಡಿ ಮಾಹಿತಿ ಕಲೆಹಾಕಿದ್ದ. ಇಷ್ಟು ಭಯಾನಕವಾಗಿ ವರ್ತಿಸಲು ಆತನಿಗೆ ಅಮೆರಿಕದ ಕ್ರೈಮ್ ಸೀರಿಯಲ್ ಪ್ರೇರಣೆಯಾಗಿತ್ತು. Dexter ಎನ್ನುವ ಹೆಸರಿನ ಕ್ರೈಮ್ ಶೋ ಅಫ್ತಾಬ್ ಕ್ರೂರವಾಗಿ ವರ್ತಿಸಲು ಪ್ರೇರಣೆ ನೀಡಿತ್ತು ಎಂಬುದನ್ನು ಪೊಲೀಸರು ಹೊರಗೆಡವಿದ್ದಾರೆ.
ಇನ್ ಸ್ಟಾ ಪ್ರಣಯ, ಹಿಮಾಚಲದಲ್ಲಿ ಸುತ್ತಾಟ
ಮೊದಲಿಗೆ ಶ್ರದ್ಧಾ ವಾಕರ್ ಮತ್ತು ಅಫ್ತಾಬ್ ಪೂನಾವಾಲ ಪರಸ್ಪರ ಕನೆಕ್ಟ್ ಆಗಿದ್ದು ಸೋಶಿಯಲ್ ಮೀಡಿಯಾ ಮೂಲಕ. ಇನ್ ಸ್ಟಾಗ್ರಾಮ್ ಸಂಪರ್ಕ ಬಳಿಕ ಪ್ರೀತಿಗೆ ತಿರುಗಿತ್ತು. ಆನಂತರ, ಶ್ರದ್ಧಾ ಕಪೂರ್ ಕೆಲಸ ಮಾಡುತ್ತಿದ್ದ ಕಾಲ ಸೆಂಟರ್ ನಲ್ಲಿಯೇ ಇಬ್ಬರೂ ಜೊತೆಯಾಗಿ ಕೆಲಸ ಮಾಡತೊಡಗಿದ್ದರು. ಅಲ್ಲಿರುವಾಗಲೇ ಇವರು ಹಿಂದು- ಮುಸ್ಲಿಂ ಆಗಿದ್ದ ಕಾರಣ ಶ್ರದ್ಧಾಳ ಕುಟುಂಬ ಮದುವೆಯಾಗುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಸಹವರ್ತಿಗಳು ಕೂಡ ಇವರ ಒಡನಾಟಕ್ಕೆ ವಿರೋಧ ತೋರಿದ್ದರು. ಅದೇ ಕಾರಣಕ್ಕೆ ಮುಂಬೈ ಬಿಟ್ಟು ಇಬ್ಬರು ಕೂಡ ದೆಹಲಿಗೆ ಹಾರಿದ್ದರು. ಎಪ್ರಿಲ್, ಮೇ ತಿಂಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಸುತ್ತಾಡಿದ್ದರು. ಆನಂತರ, ಮೇ 15ರ ವೇಳೆಗೆ ದೆಹಲಿಯ ಚಾತ್ರಾಪುರ್ ಏರಿಯಾದಲ್ಲಿ ರೂಮ್ ಮಾಡಿದ್ದರು. ಮೇ 18ರಂದು ಜೊತೆಗೆ ಇರುವಾಗಲೇ ಮದುವೆಯಾಗುವ ವಿಚಾರದಲ್ಲಿ ಜಗಳ ನಡೆದಿದ್ದು, ಅಫ್ತಾಬ್ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದು ಹಾಕಿದ್ದ.
ಮೇ 20ರಂದು ಫ್ರಿಡ್ಜ್ ತಂದು ಶ್ರದ್ಧಾಳ ಶವವನ್ನು ಕತ್ತರಿಸಿ 35 ಪೀಸ್ ಮಾಡಿ, ಅದರಲ್ಲಿ ತುಂಬಿಸಿಟ್ಟಿದ್ದ. ಆನಂತರ ಎರಡು ವಾರ ಕಾಲ ಅದನ್ನು ಒಂದೆರಡು ಪೀಸ್ ಗಳಂತೆ ರಾತ್ರಿ ಹೊತ್ತಲ್ಲಿ ದಿನವೂ ಹೊರಗೆ ಸಾಗಿಸಿದ್ದು, ಮೆಹ್ರೌಲಿ ಠಾಣೆ ವ್ಯಾಪ್ತಿಯ ಕಾಡು ಪ್ರದೇಶದಲ್ಲಿ ಎಸೆದು ಬಂದಿದ್ದ. ಹೀಗೆ ಮಾಡುವ ಮೂಲಕ ಆಕೆಯ ಅಲ್ಲಿ ಜೀವಿಸಿದ್ದಳು ಎಂಬ ಸಾಕ್ಷ್ಯವನ್ನೇ ನಾಶ ಮಾಡಿದ್ದ. ದೆಹಲಿ ಪೊಲೀಸರು ಬಂಧಿಸಿದ ಬಳಿಕ ಆರೋಪಿ ಅಫ್ತಾಬ್ ತನ್ನ ಕೃತ್ಯದ ಬಗ್ಗೆ ಒಪ್ಪಿಕೊಂಡರೂ, ಶ್ರದ್ಧಾಳ ಶವ ಸಿಗದೇ ಇರುವುದು ಪ್ರಕರಣದಲ್ಲಿ ದೊಡ್ಡ ಕಗ್ಗಂಟಾಗಿದೆ. ಕಾಡು ಪ್ರದೇಶದಲ್ಲಿ ಆಕೆಯ ಶವದ ತುಂಡುಗಳಿಗಾಗಿ ಪೊಲೀಸರು ಹುಡುಕಾಡಿದ್ದಾರೆ. ಒಂದೆರಡು ಕಡೆ ಎಲುಬಿನ ಚೂರುಗಳಷ್ಟೇ ಸಿಕ್ಕಿವೆ. ಅದು ಶ್ರದ್ಧಾಳದ್ದೇ ಎಲುಬು ಅನ್ನುವುದನ್ನು ಡಿಎನ್ಎ ಟೆಸ್ಟ್ ಮೂಲಕ ಸಾಬೀತು ಮಾಡಬೇಕಿದೆ.
ಸಂಶಯ ಬಂದಿದ್ದು ಹೇಗೆ ?
ಶ್ರದ್ಧಾಳ ಫೋನ್ ಎರಡು ತಿಂಗಳಿಂದ ಸ್ವಿಚ್ ಆಫ್ ಆಗಿರುವುದು ಮತ್ತು ಆಕೆಯ ಇನ್ ಸ್ಟಾ ಗ್ರಾಮ್ ಸೈಲಂಟ್ ಆಗಿರುವುದರ ಬಗ್ಗೆ ಗೆಳತಿಯೊಬ್ಬಳು ಗಮನಿಸಿ, ಸೆಪ್ಟಂಬರ್ ತಿಂಗಳಲ್ಲಿ ಹೆತ್ತವರಿಗೆ ಮಾಹಿತಿ ನೀಡಿದ್ದಾಳೆ. ಆಕೆಯ ಹೆತ್ತವರು ಕೂಡ ಸೋಶಿಯಲ್ ಮೀಡಿಯಾ ಮತ್ತು ಫೋನ್ ಸ್ವಿಚ್ ಆಫ್ ಆಗಿರುವ ಬಗ್ಗೆ ತಲೆಕೆಡಿಸಿದ್ದು, ತಂದೆ ವಿಕಾಸ್ ಮದನ್ ವಾಕರ್ ಮುಂಬೈ ಪೊಲೀಸರಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಆನಂತರ, ಪ್ರಕರಣವನ್ನು ದೆಹಲಿಗೆ ಹಸ್ತಾಂತರ ಮಾಡಲಾಗಿತ್ತು. ಪೊಲೀಸರು ಅಫ್ತಾಬ್ ಬಗ್ಗೆ ಸಂಶಯದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜ ವಿಚಾರ ಬಾಯ್ಬಿಟ್ಟಿದ್ದಾನೆ. ನ.12ರಂದು ಆರೋಪಿಯನ್ನು ಬಂಧಿಸಿದ್ದು ಪೊಲೀಸರ ಟ್ರೀಟ್ಮೆಂಟ್ ಸಿಕ್ಕ ಬೆನ್ನಲ್ಲೇ ಶ್ರದ್ಧಾಳನ್ನು ಕ್ರೂರವಾಗಿ ಕೊಂದಿದ್ದ ಬಗ್ಗೆಯೂ ಹೇಳಿಕೊಂಡಿದ್ದಾನೆ.
35 ಪೀಸ್ ಮಾಡಿ ಕತ್ತರಿಸಿ, ಅತ್ಯಂತ ಸ್ಫುಟವಾಗಿ ಸಾಕ್ಷ್ಯ ನಾಶ ಮಾಡಿದ್ದ ಘಟನೆ ಬಗ್ಗೆ ತಿಳಿದ ತಂದೆ ವಿಕಾಸ್ ಕ್ರುದ್ಧಗೊಂಡಿದ್ದು, ಆರೋಪಿ ಅಫ್ತಾಬ್ ಗೆ ಗಲ್ಲು ಶಿಕ್ಷೆಯನ್ನೇ ಕೊಡಿಸುವಂತೆ ಒತ್ತಾಯ ಮಾಡಿದ್ದಾರೆ. ಅಂತಹ ವ್ಯಕ್ತಿ ಈ ಜಗತ್ತಿನಲ್ಲಿ ಬದುಕಿರಬಾರದು. ಆತನಿಗೆ ಮರಣ ದಂಡನೆಯನ್ನೇ ಕೊಡಿಸಬೇಕು ಎಂದು ಹೇಳಿದ್ದಾರೆ.
Delhi Police, which cracked the six-month-old horrific blind murder case, and arrested a man - Aaftab Amin Poonawala - for allegedly killing his 26-year-old live-in partner Shraddha Walkar, has revealed the scary details about what led to the brutal killing of the victim by the accused and what happened on the night of May 18.The shocking and brutal murder case came to life after the girl's father Vikash Madan Walker, a resident of Palghar (Maharashtra), approached the police in November and lodged a missing person complaint about her daughter.
29-11-24 05:01 pm
Bangalore Correspondent
Belagavi, Malamaruthi police station, Pooja:...
29-11-24 04:12 pm
BK HariPrasad Congress: ಸಚಿವ ಸ್ಥಾನಕ್ಕೇರುತ್ತಾರ...
28-11-24 10:41 pm
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
29-11-24 10:09 pm
HK News Desk
Heart Attack, Hyderabad: 10 ವರ್ಷದ ಬಾಲಕಿಗೆ ಹೃದ...
29-11-24 10:04 pm
ಮಹಾರಾಷ್ಟ್ರದಲ್ಲಿ ಮುಂದುವರಿದ ಬಿಕ್ಕಟ್ಟು ; ಪ್ರಮುಖ...
29-11-24 06:26 pm
Sambhal Mosque, Fight: ಸಂಭಾಲ್ ಮಸೀದಿ ಸರ್ವೆ ಆದೇ...
29-11-24 06:22 pm
Raj Kundra Raid, Shilpa Shetty: ಬೆತ್ತಲೆ ಜಗತ್ತ...
29-11-24 02:32 pm
29-11-24 11:09 pm
Udupi Correspondent
VHP protest, Bangladesh violence, Mangalore:...
29-11-24 06:19 pm
Babu Pilar, U T Khader, Mangalore: ತೊಕ್ಕೊಟ್ಟಿ...
28-11-24 09:58 pm
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
29-11-24 10:49 pm
Bangalore Correspondent
Dharmasthala Robbery, Mangalore crime: ಧರ್ಮಸ್...
29-11-24 12:20 pm
Mangalore Mukka Srinivas College, Ragging: ಮು...
29-11-24 12:02 pm
Murder, Mulki, Mangalore Crime: ಮುಲ್ಕಿಯಲ್ಲಿ ಬ...
27-11-24 03:36 pm
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm