ಪ್ರತಿ ವರ್ಷ 3 ಸಾವಿರ ಭಾರತೀಯ ಯುವ ಪ್ರತಿಭೆಗಳಿಗೆ ಬ್ರಿಟನ್ ಉದ್ಯೋಗ ವೀಸಾ ; ರಿಷ್ ಸುನಕ್

16-11-22 07:49 pm       HK News Desk   ದೇಶ - ವಿದೇಶ

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭಾರತೀಯ ಯುವ ಪ್ರತಿಭೆಗಳಿಗೆ ಮೊದಲ ಅವಕಾಶ ಕೊಟ್ಟಿದ್ದಾರೆ. ಪದವಿ ಮುಗಿಸಿದ 20ರಿಂದ 30 ವರ್ಷ ನಡುವಿನ ಪ್ರತಿಭೆಗಳಿಗೆ ಪ್ರತಿ ವರ್ಷ 3 ಸಾವಿರ ಮಂದಿಗೆ ಉದ್ಯೋಗ ವೀಸಾ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ನವದೆಹಲಿ, ನ.16: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭಾರತೀಯ ಯುವ ಪ್ರತಿಭೆಗಳಿಗೆ ಮೊದಲ ಅವಕಾಶ ಕೊಟ್ಟಿದ್ದಾರೆ. ಪದವಿ ಮುಗಿಸಿದ 20ರಿಂದ 30 ವರ್ಷ ನಡುವಿನ ಪ್ರತಿಭೆಗಳಿಗೆ ಪ್ರತಿ ವರ್ಷ 3 ಸಾವಿರ ಮಂದಿಗೆ ಉದ್ಯೋಗ ವೀಸಾ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಬ್ರಿಟಿಷ್ ಉದ್ಯೋಗ ವೀಸಾ ಲಾಭ ಪಡೆದ ಮೊದಲ ದೇಶ ಭಾರತ ಆಗಲಿದೆ. ಪದವಿ ಪಡೆದ ಯುವಕರು ಎರಡು ವರ್ಷಗಳ ಕಾಲ ಬ್ರಿಟನ್ ನಲ್ಲಿದ್ದು ಉದ್ಯೋಗ ಹೊಂದಲು ಈ ವೀಸಾ ಯೋಜನೆ ಅವಕಾಶ ನೀಡಲಿದೆ. ಜಿ-20 ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭೇಟಿಯ ಬಳಿಕ ಈ ರೀತಿಯ ಆಫರ್ ನೀಡಲಾಗಿದೆ. ಭಾರತೀಯ ಮೂಲದ ವ್ಯಕ್ತಿ ಪ್ರಧಾನಿ ಹುದ್ದೆಗೇರಿದ ಬಳಿಕ ಮೊದಲ ಬಾರಿಗೆ ಭಾರತ- ಬ್ರಿಟನ್ ಪ್ರಧಾನಿಗಳು ಪರಸ್ಪರ ಭೇಟಿಯಾಗಿದ್ದರು.

UK PM candidate Rishi Sunak lays out 10-point plan to curb illegal  immigration - India Today

ಇಂಡೋ- ಪೆಸಿಫಿಕ್ ವಲಯದ ಬಾಂಧವ್ಯದಲ್ಲಿ ಭಾರತ- ಬ್ರಿಟನ್ ಜೊತೆಗಿನ ನಂಟು ಹೆಚ್ಚಿನದ್ದು. ಬ್ರಿಟನ್ ವಿಶ್ವವಿದ್ಯಾನಿಲಯಗಳಲ್ಲಿ ಕಲಿಯುವ ವಿದೇಶಿ ವಿದ್ಯಾರ್ಥಿಗಳ ಪೈಕಿ 25 ಶೇಕಡಾ ಭಾರತೀಯರು ಇದ್ದಾರೆ. ಇದಲ್ಲದೆ, ಭಾರತ- ಬ್ರಿಟನ್ ಜಂಟಿ ಹೂಡಿಕೆಯಲ್ಲಿ ಇಂಗ್ಲೆಂಡಿನಲ್ಲಿ 95 ಸಾವಿರ ಉದ್ಯೋಗ ಅವಕಾಶ ಹೆಚ್ಚಿದೆ. ವ್ಯಾಪಾರ ಕ್ಷೇತ್ರದಲ್ಲಿ ಭಾರತ- ಬ್ರಿಟನ್ ನಡುವೆ ಒಪ್ಪಂದ ನಡೆದಿದ್ದು, ಇದು ಜಾರಿಗೆ ಬಂದಲ್ಲಿ 24 ಬಿಲಿಯನ್ ಪೌಂಡ್ ಹೂಡಿಕೆ ಭಾರತದಲ್ಲಿ ಆಗಲಿದೆ.

ಪ್ರಧಾನಿ ಮೋದಿ- ರಿಷಿ ಸುನಕ್ ಭೇಟಿಯ ಫಲವಾಗಿ ಬ್ರಿಟನ್ ವೀಸಾ ಯೋಜನೆ ಜಾರಿಗೆ ಬಂದಿದ್ದು, ವಿದೇಶಿ ಪ್ರತಿಭೆಗಳ ಪೈಕಿ ಭಾರತೀಯರಿಗೆ ಬ್ರಿಟನ್ ಹೆಚ್ಚು ಒತ್ತು ಕೊಟ್ಟಿದೆ. ಈ ಬಗ್ಗೆ ಹೇಳಿಕೆ ನೀಡಿರುವ ರಿಷಿ ಸುನಾಕ್, ಭಾರತ- ಇಂಗ್ಲೆಂಡ್ ನಡುವೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಗಟ್ಟಿ ಸಂಬಂಧಗಳನ್ನು ಹೊಂದಿದ್ದೇವೆ, ಇದಕ್ಕೆ ಸಾಕ್ಷಿಯಾಗಿ ಭಾರತೀಯ ಯುವ ಪ್ರತಿಭೆಗಳಿಗೆ ಅವಕಾಶ ಕೊಡಲಾಗಿದೆ. ಇದರಿಂದ ಎರಡೂ ದೇಶಗಳ ಸಂಬಂಧ ಮತ್ತು ಆರ್ಥಿಕತೆಯೂ ವೃದ್ಧಿಯಾಗಲಿದೆ ಎಂದಿದ್ದಾರೆ.

UK Prime Minister Rishi Sunak has given the go-ahead for 3,000 visas for young professionals from India to work in the UK each year.The British government said India is the first visa-national country to benefit from such a scheme, highlighting the strength of the UK-India Migration and Mobility Partnership agreed last year."Today the UK-India Young Professionals Scheme was confirmed, offering 3,000 places to 18-30-year-old degree-educated Indian nationals to come to the UK to live and work for up to two years," the UK Prime Minister's Office said in a tweet.