ಶ್ರದ್ಧಾ ಭೀಕರ ಹತ್ಯೆ ; ಆರೋಪಿ ಅಫ್ತಾಬ್ ಗೆ ಗಲ್ಲು ವಿಧಿಸುವಂತೆ ದೆಹಲಿ ಕೋರ್ಟಿನಲ್ಲಿ ವಕೀಲರ ಪ್ರತಿಭಟನೆ 

17-11-22 09:52 pm       HK News Desk   ದೇಶ - ವಿದೇಶ

ಶ್ರದ್ಧಾ ವಾಕರ್ ಹತ್ಯೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾಗೆ ಮರಣದಂಡನೆ ವಿಧಿಸುವಂತೆ ದೆಹಲಿಯ ಸಾಕೇತ್ ಕೋರ್ಟ್ ಆವರಣದಲ್ಲಿ ಜಮಾಯಿಸಿದ್ದ ವಕೀಲರು ಘೋಷಣೆಗಳನ್ನು ಕೂಗಿದ್ದಾರೆ.

ನವದೆಹಲಿ, ನ.17 : ಶ್ರದ್ಧಾ ವಾಕರ್ ಹತ್ಯೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾಗೆ ಮರಣದಂಡನೆ ವಿಧಿಸುವಂತೆ ದೆಹಲಿಯ ಸಾಕೇತ್ ಕೋರ್ಟ್ ಆವರಣದಲ್ಲಿ ಜಮಾಯಿಸಿದ್ದ ವಕೀಲರು ಘೋಷಣೆಗಳನ್ನು ಕೂಗಿದ್ದಾರೆ.

ಭದ್ರತೆಯ ಕಾರಣಗಳಿಂದ ದೆಹಲಿ ಪೊಲೀಸರು ಆರೋಪಿಯನ್ನು ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಆರೋಪಿಯನ್ನು ಮತ್ತೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಮ್ಯಾಜಿಸ್ಟ್ರೇಟ್ ಅವಿರಾಲ್ ಶುಕ್ಲಾ ಆದೇಶ ನೀಡಿದ್ದಾರೆ. ಆರೋಪಿ ಅಫ್ತಾಬ್ ನನ್ನು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೋರ್ಟಿಗೆ ಹಾಜರು ಪಡಿಸಲಾಗುತ್ತದೆ ಎಂಬ ವಿಚಾರ ತಿಳಿದ ಕೂಡಲೇ 100ಕ್ಕೂ ಹೆಚ್ಚು ವಕೀಲರು ಒಟ್ಟಗೂಡಿ ಆರೋಪಿಗೆ ಮರಣದಂಡನೆ ವಿಧಿಸುವಂತೆ ಘೋಷಣೆಗಳನ್ನು ಕೂಗಿದರು. ಕೋರ್ಟಿಗೆ ಕರೆತಂದಲ್ಲಿ ಜನರು ನೇರವಾಗಿ ಹಲ್ಲೆಗೈದು ಕೊಲ್ಲುವ ಆತಂಕ ಇದ್ದುದರಿಂದ ಆರೋಪಿಯನ್ನು ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್ ಮುಂದೆ ಹಾಜರುಪಡಿಸಿದ್ದರು. 

28ರ ಹರೆಯದ ಅಫ್ತಾಬ್ ಪೂನಾವಾಲಾ ಶ್ರದ್ಧಾಳನ್ನು ಕೊಲೆಗೈದು ಬಳಿಕ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ ದಕ್ಷಿಣ ದೆಹಲಿಯ ಮೆಹ್ರೌಲಿಯ ಹಲವು ಕಡೆ ಎಸೆದಿದ್ದ. ಮೇ 18ರ ರಾತ್ರಿ ಶ್ರದ್ಧಾಳನ್ನು ಹತ್ಯೆಗೈದು 18 ದಿನಗಳ ಫ್ರಿಡ್ಜ್ ನಲ್ಲಿರಿಸಿ ಒಂದೊಂದೇ ಪೀಸ್ ಹೊರಕ್ಕೆಸೆದು ವಿಲೇವಾರಿ ಮಾಡಿದ್ದನು.

A large group of lawyers were seen shouting slogans outside the courtroom in the national capital New Delhi. They were demanding the death penalty for Aftab Poonawala, the accused in the macabre killing of his girlfriend Shraddha Walkar.Poonawala was produced before a local court via video conference at around 4 pm today for a custody hearing. According to news reports, Police feared he would be attacked, which is why the court had permitted using a video link from the jail.