ಬ್ರೇಕಿಂಗ್ ನ್ಯೂಸ್
18-11-22 09:49 pm HK News Desk ದೇಶ - ವಿದೇಶ
ನವದೆಹಲಿ, ನ.18: ಬಿಲಿಯನೇರ್ ಎಲಾನ್ ಮಸ್ಕ್ ಟ್ವಿಟರ್ ಕಂಪನಿಯನ್ನು ತೆಕ್ಕೆಗೆ ತೆಗೆದುಕೊಂಡ ಬೆನ್ನಲ್ಲೇ ಕಂಪನಿಯ ಪ್ರಧಾನ ಕಚೇರಿಯಲ್ಲಿ ಬಿರುಗಾಳಿ ಎದ್ದಿದೆ. ಟ್ವಿಟರ್ 2.0 ವರ್ಷನ್ನಲ್ಲಿ ಉದ್ಯೋಗಿಗಳು ಕೆಲಸದಲ್ಲಿ ಹಾರ್ಡ್ ಕೋರ್ (ತೀವ್ರವಾದಿ) ಆಗಬೇಕೆಂಬ ಎಲಾನ್ ಮಸ್ಕ್ ಸೂಚನೆಯಿಂದಾಗಿ ನೂರಾರು ನೌಕರರು ರಾಜಿನಾಮೆ ಬಿಸಾಕಿದ್ದಾರೆ.
ಇದರಿಂದಾಗಿ ಟ್ವಿಟರ್ ಪ್ರಧಾನ ಕಚೇರಿ ಬಹುತೇಕ ಬಾಗಿಲು ಎಳೆದುಕೊಳ್ಳುವಂತಾಗಿದೆ. ಎಲಾನ್ ಮಸ್ಕ್ ಕಂಪನಿಯನ್ನು ಖರೀದಿಸಿದ ಸಂದರ್ಭದಲ್ಲೇ 50 ಶೇಕಡಾ ನೌಕರರನ್ನು ತೆಗೆದು ಹಾಕಿದ್ದರು. ಅದರಲ್ಲಿ 90 ಶೇಕಡಾ ಮಂದಿ ಭಾರತದಿಂದಲೇ ಟ್ವಿಟರ್ ಕಂಪನಿಗೆ ಕೆಲಸ ಮಾಡುವವರಿದ್ದರು. ಅವರೆಲ್ಲ ಕೆಲಸ ಕಳಕೊಂಡಿದ್ದರು. ಇದೀಗ ಎರಡನೇ ವರ್ಷನ್ನಲ್ಲಿ ಉಳಿದಿರುವ ನೌಕರರು ಕೆಲಸದಲ್ಲಿ ತೀವ್ರವಾದಿ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲೂ ಕೆಲಸ ಮಾಡಲು ತಯಾರಿ ಇರಬೇಕು. ಇಲ್ಲವೇ ಮೂರು ತಿಂಗಳ ವೇತನದೊಂದಿಗೆ ಕೆಲಸ ಬಿಟ್ಟು ಹೋಗುವಂತೆ ಎಲಾನ್ ಮಸ್ಕ್ ಸೂಚನೆ ನೀಡಿದ್ದರು.
ಸುದೀರ್ಘ ಸಮಯ ಮತ್ತು ಹೆಚ್ಚು ನಿಗಾವಹಿಸಿ ಕೆಲಸ ಮಾಡಬೇಕು ಎನ್ನುವ ಬಗ್ಗೆ ಪ್ರತೀ ನೌಕರನಿಗೆ ಎಲಾನ್ ಮಸ್ಕ್ ಕಡೆಯಿಂದ ಇಮೇಲ್ ಬಂದಿತ್ತು. ಹೊಸ ನಿಯಮಕ್ಕೆ ಒಂದೋ ಯಸ್ ಎನ್ನಬೇಕು, ಇಲ್ಲವೇ ನೋ ಅನ್ನಬೇಕಿತ್ತು,. ಹೊಸ ರೂಲ್ಸ್ ಒಪ್ಪಿಕೊಂಡವರು ಯಸ್ ಎಂದು ಹೇಳಿ ಮರು ಸಂದೇಶ ಕಳುಹಿಸಿದ್ದರೆ, ಬಹುತೇಕರು ನೋ ಎಂದು ಹೇಳಿ ಮೂರು ತಿಂಗಳ ವೇತನದೊಂದಿಗೆ ರಾಜಿನಾಮೆ ಬಿಸಾಕಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಒಂದೇ ದಿನ ರಾಜಿನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಎಲಾನ್ ಮಸ್ಕ್ ಕಂಪನಿಯನ್ನು ಹತೋಟಿಗೆ ಪಡೆದ ಆರಂಭದಲ್ಲಿಯೇ ಕಾಂಟ್ರಾಕ್ಟ್ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 5500 ಮಂದಿಯ ಪೈಕಿ 4 ಸಾವಿರ ಮಂದಿಯನ್ನು ಯಾವುದೇ ಸೂಚನೆಯಿಲ್ಲದೆ ಕೆಲಸದಿಂದಲೇ ತೆಗೆದು ಹಾಕಿದ್ದರು. ಜಗತ್ತಿನಾದ್ಯಂತ ಟ್ವಿಟರ್ ಪರವಾಗಿ ಇಂಜಿನಿಯರ್, ಮಾರ್ಕೆಟಿಂಗ್ ಹೀಗೆ ಬಹು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಬಿಲಿಯನೇರ್ ಎಲಾನ್ ಮಸ್ಕ್ ಟ್ವಿಟರ್ ಕಂಪನಿಯನ್ನು ಪಡೆಯುವ ಮೊದಲೇ ಫೈರ್ ಮಾಡುತ್ತೇನೆ ಎಂದು ಹೇಳಿದ್ದರು. ತಾನು ನುಡಿದ ಮಾದರಿಯಲ್ಲೇ ನಡೆದುಕೊಂಡಿದ್ದು, ಟ್ವಿಟರ್ ಸ್ಲೋ ಇದ್ದ ದೇಶಗಳಲ್ಲಿನ ನೌಕರರನ್ನು ಯಾವುದೇ ಸೂಚನೆ ನೀಡದೆ ತೆಗೆದು ಹಾಕಿದ್ದಾರೆ.
There has been a lot of chaos at Twitter HQ lately. It all started ever since Elon Musk took over the company. A couple of few days ago, the billionaire fired as many as 50 per cent of the workforce globally, including around 90 per cent working from India. Now, some of the retained Twitter staff have resigned after Musk sent an “ultimatum” email that ordered everyone to be ready for Twitter 2.0 and be ready for a hardcore culture or leave with three months pay.
17-07-25 07:45 pm
Bangalore Correspondent
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 06:30 pm
Mangalore Correspondent
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
17-07-25 10:42 pm
Mangalore Correspondent
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm