ಬ್ರೇಕಿಂಗ್ ನ್ಯೂಸ್
19-11-22 03:06 pm HK News Desk ದೇಶ - ವಿದೇಶ
ಹೈದರಾಬಾದ್, ನ.19: ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ರಾಜಕೀಯ ಗುದ್ದಾಟ ಮತ್ತೊಂದು ಹಂತ ತಲುಪಿದೆ. ರಾಜಕೀಯ ವಾಕ್ಸಮರ ಈಗ ನೇರ ಹಿಂಸಾಚಾರಕ್ಕೆ ತಿರುಗಿದ್ದು, ಹೈದರಾಬಾದ್‌ನಲ್ಲಿ ಬಿಜೆಪಿ ಸಂಸದನ ಮನೆ ಮೇಲೆ ಟಿಆರ್‌ಎಸ್ ಕಾರ್ಯಕರ್ತರು ದಾಳಿ ಮಾಡಿದ್ದಾರೆ.
ಟಿಆರ್‌ಎಸ್ ಶಾಸಕಿ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಅವರ ಬಗ್ಗೆ, ಬಿಜೆಪಿ ಸಂಸದ ಅರವಿಂದ್ ಧರ್ಮಪುರಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೆ. ಕವಿತಾ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದ್ದು, ಅವರನ್ನು ಖರೀದಿಸುವ ತಾಕತ್ತು ನಮ್ಮ ಬಳಿ ಇದೆ ಎಂದು ಅರವಿಂದ್ ಧರ್ಮಪುರಿ ಹೇಳಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಕೆ.ಕವಿತಾ ಬಿಜೆಪಿ ಸೇರಲು ಒಪ್ಪದಿದ್ದರೆ ಅವರ ಮೇಲೆ ಇಡಿ ದಾಳಿ ನಡೆಸಲಾಗುವುದು. ಕವಿತಾ ಬಿಜೆಪಿಗೆ ಸುಲಭ ತುತ್ತಾಗಲಿದ್ದಾರೆ ಎಂದು ಅರವಿಂದ್ ಧರ್ಮಪುರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಅರವಿಂದ್ ಧರ್ಮಪುರಿ ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದ ಕೆ.ಕವಿತಾ, ನನ್ನನ್ನು ಖರೀದಿಸುತ್ತೇನೆ ಎಂದು ಹೇಳಿದರೆ ಏನು ಅರ್ಥ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನನ್ನ ಬಗ್ಗೆ ಅರವಿಂದ್ ಧರ್ಮಪುರಿ ಅವರು ಆಡಿರುವ ಕೀಳು ಮಾತುಗಳಿಗೆ ನಮ್ಮ ಮಹಿಳಾ ಕಾರ್ಯಕರ್ತರು ತಕ್ಕ ಉತ್ತರ ನೀಡಲಿದ್ಧಾರೆ ಎಂದು ಕವಿತಾ ಗುಡುಗಿದ್ದರು.
ಅರವಿಂದ್ ಧರ್ಮಪುರಿ ಕೊಚ್ಚೆ ನೀರಿನಂತಿರುವ ನಾಯಕ. ಮುಂಬರುವ ಚುನಾವಣೆಯಲ್ಲಿ ನಾನು ಅವರನ್ನು ಸೋಲಿಸುತ್ತೇನೆ ಎಂಬ ಕಾರಣಕ್ಕೆ, ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಅವರು ಹೀಗೆಯೇ ಮಾತನಾಡುವುದನ್ನು ಮುಂದುವರೆಸಿದರೆ, ನಾನೇ ಚಪ್ಪಲಿ ತೆಗೆದುಕೊಂಡು ಹೊಡೆಯಬೇಕಾಗುತ್ತದೆ ಎಂದು ಕೆ. ಕವಿತಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದಾದ ಕೆಲವೇ ಗಂಟೆಗಳಲ್ಲಿ ಟಿಆರ್‌ಎಸ್ ಕಾರ್ಯಕರ್ತರು, ಹೈದಾರಾಬಾದ್‌ನಲ್ಲಿರುವ ಬಿಜೆಪಿ ಸಂಸದ ಅರವಿಂದ್ ಧರ್ಮಪುರಿ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಅರವಿಂದ್ ಧರ್ಮಪುರಿ ಮನೆ ಮೇಲೆ ಕಲ್ಲುತೂರಾಟ ನಡೆಸಿದ್ದಲ್ಲದೇ, ಮನೆಯೊಳಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಲಾಗಿದೆ.
ಟಿಆರ್‌ಎಸ್ ಕಾರ್ಯಕರ್ತರು ಅರವಿಂದ್ ಧರ್ಮಪುರಿ ಅವರ ಮನೆ ಮೇಲೆ ಕಲ್ಲುತೂರಾಟ ನಡೆಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮನೆ ಮುಂದೆ ನಿಂತಿದ್ದ ಕಾರನ್ನು ಕೂಡ ಜಖಂಗೊಳಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಟಿಆರ್‌ಎಸ್ ಕಾರ್ಯಕರ್ತರನ್ನು ಚದುರಿಸಿ ಅರವಿಂದ್ ಧರ್ಮಪುರಿ ಮನೆಗೆ ರಕ್ಷಣೆ ಒದಗಿಸಿದ್ದಾರೆ.
ಈ ಕುರಿತು ಖುದ್ದು ಟ್ವೀಟ್ ಮಾಡಿರುವ ಬಿಜೆಪಿ ಸಂಸದ ಅರವಿಂದ್ ಧರ್ಮಪುರಿ, “ಟಿಆರ್‌ಎಸ್ ಗೂಂಡಾಗಳು ನನ್ನ ನಿವಾಸದ ಮೇಲೆ ದಾಳಿ ಮಾಡಿ ನನ್ನ ಮನೆಯನ್ನು ಧ್ವಂಸಗೊಳಿಸಿದರು. ಅವರು ನನ್ನ ತಾಯಿಯನ್ನು ಹೆದರಿಸಿ, ಗಲಭೆ ಸೃಷ್ಟಿಸಿದ್ದಾರೆ..” ಎಂದು ಆರೋಪಿಸಿದ್ದಾರೆ. ಅರವಿಂದ್ ಧರ್ಮಪುರಿ ಮನೆ ಮೇಲೆ ನಡೆದ ದಾಳಿಯನ್ನು ಬಿಜೆಪಿ ಕೂಡ ಟೀಕಿಸಿದ್ದು, ಟಿಆರ್‌ಎಸ್ ಗೂಂಡಾಗಿರಿಗೆ ಇದು ಜ್ವಲಂತ ಸಾಕ್ಷಿ ಎಂದು ಹರಿಹಾಯ್ದಿದೆ.
#WATCH | Telangana: BJP MP Arvind Dharmapuri's residence in Hyderabad attacked and vandalised allegedly by TRS supporters. Details awaited. pic.twitter.com/MYokgY6HGr
— ANI (@ANI) November 18, 2022
BJP MP Dharmapuri Arvind’s house in Hyderabad was ransacked by TRS workers on Friday over his alleged derogatory remarks against Telangana Chief Minister K Chandrasekhar Rao's daughter K Kavitha. Ruling party activists gathered outside of MP’s house and attacked after saffron party leader was heard in a video targeting the state's ruling party by making alleged disparaging remarks against Kavitha who is also an MLC.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm