ವಿಚಾರಣೆಗೆ ಹಾಜರಾಗಲು ಸಮನ್ಸ್ ; ಹೊಸತಾಗಿ ನೋಟಿಸ್ ನೀಡಲು ಎಸ್ಐಟಿಗೆ ತೆಲಂಗಾಣ ಹೈಕೋರ್ಟ್ ಸೂಚನೆ 

24-11-22 06:42 pm       HK News Desk   ದೇಶ - ವಿದೇಶ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರಿಗೆ ಅಪರಾಧ ಪ್ರಕ್ರಿಯೆಗಳ ಸಂಹಿತೆ(ಸಿಆರ್ ಪಿಸಿ) ಸೆಕ್ಷನ್ 41ಎ ಅಡಿಯಲ್ಲಿ ಹೊಸತಾಗಿ ನೋಟಿಸ್ ನೀಡುವಂತೆ ತೆಲಂಗಾಣದ ವಿಶೇಷ ತನಿಖಾ ತಂಡಕ್ಕೆ ಹೈಕೋರ್ಟ್ ಗುರುವಾರ ಆದೇಶ ಮಾಡಿದೆ. 

ಹೈದರಾಬಾದ್, ನ.24 : ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರಿಗೆ ಅಪರಾಧ ಪ್ರಕ್ರಿಯೆಗಳ ಸಂಹಿತೆ(ಸಿಆರ್ ಪಿಸಿ) ಸೆಕ್ಷನ್ 41ಎ ಅಡಿಯಲ್ಲಿ ಹೊಸತಾಗಿ ನೋಟಿಸ್ ನೀಡುವಂತೆ ತೆಲಂಗಾಣದ ವಿಶೇಷ ತನಿಖಾ ತಂಡಕ್ಕೆ ಹೈಕೋರ್ಟ್ ಗುರುವಾರ ಆದೇಶ ಮಾಡಿದೆ. 

ಈ ಕುರಿತ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವಿಜಯಸೇನ್ ರೆಡ್ಡಿ ನೇತೃತ್ವದ ಏಕಸದಸ್ಯ ಪೀಠ, ಅಡ್ವೊಕೇಟ್ ಜನರಲ್(ಎಜಿ) ಬಿ.ಎಸ್ ಪ್ರಸಾದ್ ಅವರಿಗೆ ಈ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ. ಪ್ರಸಾದ್ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್(ಎಎಜಿ) ಜೆ ರಾಮಚಂದರ್ ರಾವ್ ನ್ಯಾಯಾಲಯಕ್ಕೆ ಹಾಜರಾಗಿದ್ದು ಎಸ್ಐಟಿ ಮತ್ತು ದೆಹಲಿ ಪೊಲೀಸರ ಪ್ರಯತ್ನಗಳ ಹೊರತಾಗಿಯೂ ಸಂತೋಷ್ ವಿಚಾರಣೆಗೆ ಹಾಜರಾಗಲಿಲ್ಲ ಎಂದು ತಿಳಿಸಿದರು. ನವೆಂಬರ್ 20 ರಂದು ನವದೆಹಲಿಯ ಬಿಜೆಪಿ ಕಚೇರಿಗೆ ಸಮನ್ಸ್ ತಲುಪಿಸಲಾಗಿದೆ. ಆದರೂ ಆರೋಪಿ ಸಂತೋಷ್ ವಿಚಾರಣೆಗೆ ಹಾಜರಾಗಿಲ್ಲ. ವಿಚಾರಣೆಯಲ್ಲಿ ಪ್ರಮುಖ ಅಂಶವಾಗಿರುವ ಇಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಅಳಿಸಿ ಹಾಕಲು ಸಂತೋಷ್ ಉದ್ದೇಶಪೂರ್ವಕವಾಗಿ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಲು ವಿಳಂಬ ಮಾಡುತ್ತಿದ್ದಾರೆ ಎಂದು ಅಟೋರ್ನಿ ಜನರಲ್ ವಾದಿಸಿದರು.

Telangana HC directs SIT to issue notice to BJP's Santhosh in 'poaching'  case | India News - Times of India

ಸಂತೋಷ್ ಅವರು ತಮ್ಮ ಮೊಬೈಲ್ ಸಾಧನದಿಂದ ಡೇಟಾವನ್ನು ಅಳಿಸಿದರೆ ಮತ್ತು ಮಹತ್ವದ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ನಂತರ ಎಸ್ಐಟಿ ಮುಂದೆ ಹಾಜರಾಗುವುದು ನಿಷ್ಪ್ರಯೋಜಕವಾಗಲಿದೆ ಎಂದು ಎಎಜಿ ರಾವ್ ಕೋರ್ಟ್ ಗಮನಕ್ಕೆ ತಂದರು. ಈಗಾಗಲೇ ನ.21ರಂದು ವಿಚಾರಣೆಗೆ ಹಾಜರಾಗದೇ ಇರುವುದರಿಂದ ಎಸ್ಐಟಿ ತಂಡ ಸಂತೋಷ್ ಗೆ ಸಮನ್ಸ್ ಜಾರಿ ಮಾಡಿತ್ತು. ‌ದೆಹಲಿ ಬಿಜೆಪಿ ಕಚೇರಿಗೆ ಸಮನ್ಸ್ ನೋಟಿಸ್ ನೀಡಲಾಗಿತ್ತು.

BJP general secretary (Organisation) B L Santhosh has been caught in the midst of a political battle between his party and the Telengana Rashtriya Samithy (TRS) led by Telengana chief minister K Chandrashekhar Rao.