ಕಾಶ್ಮೀರದಲ್ಲೂ ಸ್ಫೋಟಕ್ಕೆ ರೆಡಿಯಾಗಿದ್ದ ಕುಕ್ಕರ್ ಬಾಂಬ್ ಪತ್ತೆ ; ಸೇನಾ ಪಡೆ ಕಾರ್ಯಾಚರಣೆಯಿಂದ ತಪ್ಪಿದ ಅನಾಹುತ 

26-11-22 12:47 pm       HK News Desk   ದೇಶ - ವಿದೇಶ

ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಬೆನ್ನಲ್ಲೇ ಜಮ್ಮು ಕಾಶ್ಮೀರದಲ್ಲಿ ಅದೇ ಮಾದರಿಯ ಕುಕ್ಕರ್ ಬಾಂಬ್ ಪತ್ತೆಯಾಗಿದೆ. ಕಣಿವೆ ರಾಜ್ಯ ಶೋಪಿಯಾನ್ ಜಿಲ್ಲೆಯ ಇಮಾಮ್ ಸಾಹೀಬ್ ಎಂಬಲ್ಲಿ ಕುಕ್ಕರ್ ನಲ್ಲಿ ಐಇಡಿ ಸ್ಫೋಟಕಗಳನ್ನು ಇಟ್ಟು ಸ್ಫೋಟಿಸಲು ಸಂಚು ರೂಪಿಸಿದ್ದು ಪತ್ತೆಯಾಗಿದೆ. 

ಶ್ರೀನಗರ, ನ.26: ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಬೆನ್ನಲ್ಲೇ ಜಮ್ಮು ಕಾಶ್ಮೀರದಲ್ಲಿ ಅದೇ ಮಾದರಿಯ ಕುಕ್ಕರ್ ಬಾಂಬ್ ಪತ್ತೆಯಾಗಿದೆ. ಕಣಿವೆ ರಾಜ್ಯ ಶೋಪಿಯಾನ್ ಜಿಲ್ಲೆಯ ಇಮಾಮ್ ಸಾಹೀಬ್ ಎಂಬಲ್ಲಿ ಕುಕ್ಕರ್ ನಲ್ಲಿ ಐಇಡಿ ಸ್ಫೋಟಕಗಳನ್ನು ಇಟ್ಟು ಸ್ಫೋಟಿಸಲು ಸಂಚು ರೂಪಿಸಿದ್ದು ಪತ್ತೆಯಾಗಿದೆ. 

ಶೋಪಿಯಾನ್ ಪೊಲೀಸರು ಮತ್ತು ಸೇನಾಪಡೆಯ ರಾಷ್ಟ್ರೀಯ ರೈಫಲ್ಸ್ ವಿಭಾಗದ ಯೋಧರು ಜಂಟಿ ಕಾರ್ಯಾಚರಣೆಯಲ್ಲಿ ಕುಕ್ಕರ್ ಬಾಂಬ್ ಪತ್ತೆ ಮಾಡಿದ್ದಾರೆ. ಪೊಲೀಸರು ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ್ದರಿಂದ ದೊಡ್ಡ ದುರಂತ ತಪ್ಪಿದೆ. ನವೆಂಬರ್ ತಿಂಗಳ ಆರಂಭದಲ್ಲಿ ರಾಮ್ ಬನ್ ಜಿಲ್ಲೆಯಲ್ಲಿ ಐಇಡಿ ಮಾದರಿಯ ಸ್ಫೋಟಕ ಸಾರ್ವಜನಿಕ ಸಾರಿಗೆ ಬಸ್ಸಿನಲ್ಲಿ ಪತ್ತೆಯಾಗಿತ್ತು. ‌ಕೂಡಲೇ ಅದನ್ನು ಬಾಂಬ್ ನಿಷ್ಕ್ರಿಯ ತಂಡ ಆಗಮಿಸಿ, ತೆರವು ಮಾಡಿತ್ತು. ಬಸ್ಸಿನಲ್ಲಿ ಅನಾಥ ಬ್ಯಾಗ್ ಒಂದು ಪತ್ತೆಯಾಗಿತ್ತು. ಆನಂತರ, ಸಿಆರ್ ಪಿಎಫ್ ಮತ್ತು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಬಾಂಬ್ ಅನ್ನುವುದು ದೃಢಪಟ್ಟಿತ್ತು. 

Jammu And Kashmir Police Detect Explosive Planted In Pressure Cooker -  Pehal News

15-kg IED planted in pressure cooker recovered in J&K's Pulwama | India  News | Zee News

ಇದೀಗ ಐಇಡಿ ಸ್ಫೋಟಕವನ್ನು ಕುಕ್ಕರ್ ಬಾಕ್ಸ್ ನಲ್ಲಿಟ್ಟು ಭಾರೀ ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆಸಿದ್ದು ಪತ್ತೆಯಾಗಿದೆ. ಬಾಂಬ್ ಕನೆಕ್ಟ್ ಮಾಡಿ, ಕುಕ್ಕರ್ ಒಳಗೆ ಇಟ್ಟರೆ ಒಳಗಿನ ಒತ್ತಡ ಹೆಚ್ಚುತ್ತಾ ಹೋಗಿ ಸಹಜ ಸಾಮರ್ಥ್ಯದ ಸ್ಫೋಟಕ್ಕಿಂತ ಹತ್ತು ಪಟ್ಟು ಹೆಚ್ಚು ಹಾನಿ ಮಾಡುವಷ್ಟು ಸ್ಫೋಟಗೊಳ್ಳುತ್ತದೆ. ಅದಕ್ಕಾಗಿ ಉಗ್ರರು ದೊಡ್ಡ ಮಟ್ಟದ ಹಾನಿ ಮಾಡುವ ಉದ್ದೇಶದಿಂದ ಈ ರೀತಿ ಮಾಡುತ್ತಾರೆ.

In a joint operation by Shopian Police and Indian Army's 44 Rashtriya Rifles on Friday, an Improvised Explosive Device (IED) planted in a cooker was detected at Imamsahib in Shopian.