ಛತ್ತೀಸ್ಗಢದಲ್ಲಿ ಎನ್‌ಕೌಂಟರ್‌ ; ಇಬ್ಬರು ಮಹಿಳೆಯರು ಸೇರಿ ನಾಲ್ವರು ನಕ್ಸಲರ ಎನ್‌ಕೌಂಟರ್‌ 

26-11-22 07:16 pm       HK News Desk   ದೇಶ - ವಿದೇಶ

ಛತ್ತೀಸ್‌ಗಢದಲ್ಲಿ ಶನಿವಾರ ಭದ್ರತಾ ಪಡೆಗಳು ಇಬ್ಬರು ಮಹಿಳೆಯರು ಸೇರಿ ನಾಲ್ವರು ಮಾವೋವಾದಿಗಳನ್ನು ಎನ್‌ಕೌಂಟರ್‌ ಮಾಡಿದ್ದಾರೆ.

ಛತ್ತೀಸಗಢ, ನ.26: ಛತ್ತೀಸ್‌ಗಢದಲ್ಲಿ ಶನಿವಾರ ಭದ್ರತಾ ಪಡೆಗಳು ಇಬ್ಬರು ಮಹಿಳೆಯರು ಸೇರಿ ನಾಲ್ವರು ಮಾವೋವಾದಿಗಳನ್ನು ಎನ್‌ಕೌಂಟರ್‌ ಮಾಡಿದ್ದಾರೆ.

ಭದ್ರತಾ ಪಡೆಗಳ ಜಂಟಿ ತಂಡಗಳು ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಮಿರ್ತೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಪೊಮ್ರಾ ಗ್ರಾಮದ ಬಳಿ ಕಾಡಿನಲ್ಲಿ ಬೆಳಗ್ಗೆ 7.30 ರ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ.

ಮಾವೋವಾದಿಗಳ ವಿಭಾಗೀಯ ಸಮಿತಿ ಸದಸ್ಯರಾದ ಮೋಹನ್ ಕಡ್ತಿ ಮತ್ತು ಸುಮಿತ್ರಾ ಅವರ ಉಪಸ್ಥಿತಿಯ ಮಾಹಿತಿಯನ್ನು ಆಧರಿಸಿ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ), ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬಂದಿಗಳನ್ನು ಒಳಗೊಂಡು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಡಿಆರ್‌ಜಿಯ ಗಸ್ತು ತಂಡವು ಪೊಮ್ರಾ ಅರಣ್ಯದಲ್ಲಿದ್ದಾಗ, ಗುಂಡಿನ ಚಕಮಕಿ ನಡೆದಿದೆ.

“ಗುಂಡಿನ ಚಕಮಕಿ ನಿಂತ ಬಳಿಕ ಸ್ಥಳದಿಂದ 303 ರೈಫಲ್ ಮತ್ತು 315 ಬೋರ್ ರೈಫಲ್ ಸೇರಿದಂತೆ ಮೂರು ಶಸ್ತ್ರಾಸ್ತ್ರಗಳ ಜೊತೆಗೆ ನಾಲ್ವರು ಮಾವೋವಾದಿಗಳ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಜಿ ತಿಳಿಸಿದ್ದಾರೆ. ಮಾವೋವಾದಿಗಳ ಗುರುತು ಇನ್ನೂ ಪತ್ತೆಯಾಗಿಲ್ಲ.

Four Maoists were killed in an encounter with security forces in the forest area of Bijapur district in the early morning of Saturday, the police said. Officials said that security forces received input about the presence of 30-40 Maoists in Pomra forest area under Mirtur police station. “Four Naxals including two men and two women were killed in an encounter with Central Reserve Police Force (CRPF), District Reserve Guard (DRG) and Special Task Force (STF) jawans,” Bijapur SP Anjaneya Varshney told ANI.